ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಬಹಳಷ್ಟು ವಿಭಿನ್ನವಾಗಿದ್ದು ಒಳ್ಳೆಯ ಕಥಾ ಹಂದರವನ್ನೇ ಹೊಂದಿದೆ ಅಂತ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಹೌದು ಧಾರವಾಹಿಯಲ್ಲಿ ಸೀತಾ ಹಾಗೂ ರಾಮ್ ಜೀವನ ಬೇರೆ ಬೇರೆ. ಆದರೆ ವಿಧಿ ಇವರಿಬ್ಬರನ್ನು ಹತ್ತಿರಕ್ಕೆ ತರುತ್ತಿದೆ. ಹೌದು ಸೀತಾ ಆಗಿ ವೈಷ್ಣವಿ ಗೌಡ, ರಾಮನಾಗಿ ಗಗನ್ ಚಿನ್ನಪ್ಪ, ಸಿಹಿಯಾಗಿ ರಿತು ಸಿಂಗ್ ನೇಪಾಳ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಭಾರ್ಗವಿ ಪಾತ್ರದಲ್ಲಿ ಪೂಜಾ ಲೋಕೇಶ್ ಸೇರಿದಂತೆ ಸಿಂಧು ರಾವ್, ಮುಖ್ಯಮಂತ್ರಿ ಚಂದ್ರು, ಅಶೋಕ್, ಸಿಂಧು ರಾವ್ ಮುಂತಾದವರು ನಟಿಸುತ್ತಿದ್ದಾರೆ.
ಈ ಸೀರಿಯಲ್ ಪ್ರಸಾರ ಆದ ಮೊದಲ ವಾರವೇ ಟಿಆರ್‌ಪಿಯಲ್ಲಿ ಟಾಪ್ 4 ರಲ್ಲಿ ಸ್ಥಾನ ಪಡೆದುಕೊಂಡಿದೆ. ಅಲ್ದೇ ಮುಂದಿನ ದಿನಗಳಲ್ಲಿ ಸೀರಿಯಲ್ ನಲ್ಲಿರೋ ಕೆಲವೊಂದಷ್ಟು ಟ್ವಿಸ್ಟ್ ಗಳಿಂದ ವೀಕ್ಷಣೆ ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಸದ್ಯ ಇದೆಲ್ಲದರ ಮಧ್ಯೆ ಇದೀಗ ಕಹಾನಿ ಮೆ ಬಡಾ ಟ್ವಿಸ್ಟ್ ಅನ್ನೋ ರೀತಿ ಇದೀಗ ಧಾರವಾಹಿಯಲ್ಲಿ ನಿಜಕ್ಕೂ ಸೀತಾಗೆ ಮದುವೆ ಆಗಿದ್ಯಾ, ಆಗಿದ್ರೆ ಸೀತಾ ಗಂಡ ಯಾರು? ನಿಜವಾಗಿಯೂ ಸಿಹಿ ಸೀತಾ ಮಗಳ ಎಂಬ ಪ್ರಶ್ನೆ ಎದ್ದಿದೆ. ಕಾರಣ ಧಾರವಾಹಿ ಬರುಬರುತ್ತೆ ಸ್ವಲ್ಪ ಸ್ವಲ್ಪವೇ ಗುಟ್ಟನ್ನ ಬಿಟ್ಟುಕೊಡುತ್ತ ಬರ್ತಿದೆ.
ಮದುವೆ ಹಾಗೂ ಮಗುವಿನ ಅಸಲಿ ಸತ್ಯ ರಿವಿಲ್ ಆಗ್ತಿದ್ಯಾ?
ನಿಮ್ಮೆಲ್ಲರಿಗೂ ಗೊತ್ತಿರುವಂತೆ ಬಹುತೇಕ ಧಾರಾವಾಹಿಗಳಲ್ಲಿ ಬೇರೆಯವರ ಮಗುವನ್ನು ನಾಯಕಿಯರು ತಮ್ಮ ಮಗು ಎನ್ನುವ ರೀತಿ ಬೆಳೆಸಿರುತ್ತಾರೆ. ಹಾಗೆಯೇ ಇಲ್ಲಿಯೂ ಕೂಡ ಯಾವುದೋ ಟ್ವಿಸ್ಟ್ ಇರುವ ಸಾಧ್ಯತೆ ಹೆಚ್ಚಿದೆ. ನನಗೆ ಈಗ ಗಂಡ ಬೇಕು ಎನ್ನೋದಕ್ಕಿಂತ ಸಿಹಿಗೆ ಅಪ್ಪ ಬೇಕು, ಆ ರೀತಿ ಸಿಗೋದು ಕಷ್ಟ ಅಂತ ಸೀತಾ ಒಮ್ಮೆ ಹೇಳಿದ್ದಳು. ಹೀಗೆ ಹೇಳೋಕೆ ಹೇಗೆ ಸಾಧ್ಯ ಯಾಕಂದ್ರೆ ಈಗಾಗಲೇ ಮದುವೆಯಾಗಿ ಗಂಡನ ಕಿರುಕುಳದಿಂದ ದೂರ ಆಗಿದ್ರೆ ಸೀತಾಗೆ ಮತ್ತೊಮ್ಮೆ ಮದುವೆ ಆಗೋದು ಬೇಡ ಅಂತಲೇ ಅನಿಸ್ತಿತ್ತು. ಆದ್ರೆ ಸೀತಾ ಮದುವೆ, ಗಂಡ ಎನ್ನುವ ಕಾನ್ಸೆಪ್ಟ್ ವಿರುದ್ಧವಾಗಿಲ್ಲ. ತಾನು ಮದುವೆ ಆಗೋದರ ಜೊತೆಗೆ ಸಿಹಿಗೂ ಕೂಡ ಅಪ್ಪ ಬೇಕು ಅನ್ನೋ ಕಾರಣದಿಂದಲೇ ಸೀತಾ ಮದುವೆಯನ್ನು ನಿರಾಕರಿಸುತ್ತಿದ್ದಾಳೆ ಅನ್ನೋದು ಗೊತ್ತಾಗ್ತಿದೆ. ಆದ್ರೆ ಸೀತಾ ಗಂಡ ಸಾಲ ಮಾಡಿದ್ದಾನೆ, ಇದರಿಂದ ಆ ರೌಡಿಗಳು ಮನೆಗೆ ಬಂದು ಗಲಾಟೆ ಮಾಡಿದ್ದಾರೆ ಅನ್ನೋದನ್ನು ಕೂಡ ಧಾರಾವಾಹಿಯಲ್ಲಿ ತೋರಿಸಿದ್ದಾರೆ. ಆದರೆ ಸೀತಾ ಗಂಡ ಯಾರು? ಯಾಕೆ ಸೀತಾ ಗಂಡನಿಂದ ದೂರ ಆದಳು ಎನ್ನೋದನ್ನು ರಿವೀಲ್ ಮಾಡಿಲ್ಲ.
ಇನ್ನೊಂದು ಕಡೆ ನಿಜಕ್ಕೂ ಸೀತಾ ಮಗಳು ಸಿಹಿನಾ? ಬೇರೆಯವರ ಮಗುವನ್ನು ಸೀತಾ ತನ್ನ ಮಗಳು ಎಂದುಕೊಂಡು ಬೆಳೆಸುತ್ತಿದ್ದಾಳಾ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ. ಸದ್ಯ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾಗೆ ಮದುವೆಯಾದ್ರೆ ನಾನು ಅವಳಿಂದ ದೂರ ಆಗ್ತೀನಿ ಎನ್ನೋದು ಸಿಹಿಗೆ ಅರ್ಥ ಆಗಿದೆ. ಅವಳೀಗ ಅದನ್ನೇ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಇನ್ನೊಂದು ಕಡೆ ನನ್ನ, ನಿನ್ನ ಮಧ್ಯೆ ಯಾರೂ ಬರೋದಿಲ್ಲ ಅಂತ ಸೀತಾ ಸಿಹಿಗೆ ಆಣೆ ಮಾಡಿ ಹೇಳಿದ್ದಾಳೆ. ಹಾಗಾದರೆ ಸೀತಾ ಹಾಗೂ ರಾಮ್ ಒಂದಾಗೋದು ಹೇಗೆ? ಸೀತಾ ಗೆ ಮದುವೆ ಆಗಿದ್ಯಾ ಇಲ್ವಾ ಅಂತ ಪ್ರೇಕ್ಷಕರು ಹುಳ ಬಿಟ್ಟುಕೊಂಡಿದ್ದಾರೆ.
ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಸೀತಾ ಮದುವೆಯಾಗದಿರುವ ಸಾಧ್ಯತೆ ಹೆಚ್ಚಿದೆ, ಬೇರೆ ಯಾರದ್ದೋ ಮಗು ಸಿಹಿಯನ್ನು ಅವಳು ತನ್ನ ಮಗು ಅಂತ ಸಾಕುತ್ತಿರಬಹುದು. ಗಂಡ ಅಂತ ಹೇಳುತ್ತಿದ್ದಾರಲ್ಲ. ಅವನು ಸಿಹಿ ತಂದೆಯಾಗಿರಬಹುದು, ಆದರೆ ಸೀತಾ ಗಂಡ ಆಗಿರೋದು ಡೌಟ್. ಯಾಕಂದ್ರೆ ಸೀತಾ ಕೂಡ ಪಕ್ಕದ ಮನೆಯವರನ್ನೇ ತಂದೆ ತಾಯಿ ಅಂತ ಹೇಳಿಕೊಳ್ಳುತ್ತಿದ್ದಾಳೆ ಅವ್ರು ಕೂಡ ಸೀತಾಳನ್ನ ಮಗಳು ಸಿಹಿಯನ್ನ ನಮ್ಮ ಮೊಮ್ಮಗಳು ಅಂತಿದ್ದಾರೆ. ಇದೆಲ್ಲವೂ ಕೂಡ ಮಿಕ್ಸ್ ಆಗಿ ಅಸಲಿ ಕಥೆ ಯಾವ್ದು ಅನ್ನೋ ಕುತೂಹಲ ವೀಕ್ಷಕರಿಗಿರೋದಂತೂ ಸುಳಲ್ಲ. ಸದ್ಯ ಈ ಧಾರಾವಾಹಿ ತುಂಬ ಸ್ಮೂತ್ ಆಗಿ ಹೋಗುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಡ್ರಾಮಾ, ಮನರಂಜನೆ ಸಿಗೋದಂತೂ ಪಕ್ಕಾ. ಯಾಕಂದ್ರೆ ಕೇವಲ ಸೀತಾ ಗಂಡ ಯಾರು ಸಿಹಿ ಯಾರ್ ಮಗಳು ಅನ್ನೋದು ಮಾತ್ರವಲ್ಲ ರಾಮ್ ಚಿಕ್ಕಮ್ಮ ಭಾರ್ಗವಿ ಸೇಡು ಏನು? ರಾಮ್ ತಂದೆ-ತಾಯಿ ಇತಿಹಾಸ ಏನು? ಸಿಹಿ ಗಿರುವ ಸಕ್ಕರೆ ಕಾಯಿಲೆ ಅವ್ಳಿಗೆ ಬಲಿ ತೆಗೆದುಕೊಳ್ಳುತ್ತಾ ಅದಾದ ಮೇಲೆ ಸೀತಾ ರಾಮ ಕಲ್ಯಾಣವಾಗುತ್ತಾ ಹೀಗೆ ಕಾಡುತ್ತಿರುವ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ಇಂದು ಶುಕ್ರವಾರ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram