Sharmitha Gowda: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ಗೀತಾ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ ಅವರನ್ನು ನೋಡಿ ಕೆಲವರು ಬೈದು ಕೊಂಡಿದ್ದಾರೆ ಜೊತೆಗೆ ಅವರ ಫಿಟ್ನೆಸ್ ನಟನೆ ನೋಡಿ ತುಂಬಾ ಜನ ಅವರನ್ನು ಮೆಚ್ಚಿಕೊಂಡಿದ್ದಾರೆ. ಇವರು ಮದುವೆ ಮತ್ತು ಮಗು ಆದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಷ್ಟೋ ಜನಕ್ಕೆ ಗೊತ್ತಿಲ್ಲ ಮದುವೆಯ ನಂತರ ತುಂಬ ದಪ್ಪ ಆಗಿದ್ದ ಶರ್ಮಿತಾ ಅವರು ನಂತರ ತಮ್ಮ ಫಿಟ್ನೆಸ್ ಕಡೆಗೆ ಗಮನ ಹರಿಸಿ ತಮ್ಮ ತೂಕ ಇಳಿಸಿಕೊಂಡು ಸ್ಲಿಮ್ ಆದರೂ. ಇನ್ನೂ ಇವರ ಈ ಸಾಧನೆ ಎಷ್ಟೋ ಜನರಿಗೆ ಸ್ಪೂರ್ತಿಯಾಗಿದೆ.
2016ರಲ್ಲಿ ಮಿಸ್ಸಸ್ ಚಿಕ್ಕಮಗಳೂರು ಎಂಬ ಕೀರಿಟವನ್ನು ಗೆದ್ದು ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ಶರ್ಮಿತಾ ಗೌಡ(Sharmitha Gowda) ನಂತರ ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ಅವಕಾಶಗಳು ಬಂದವು ಶರ್ಮಿತ ಅವರು 2017ರಲ್ಲಿ ಸ್ಟಾರ್ ಸುವರ್ಣದಲ್ಲಿ ಬಂದ ಜಾನಕಿ ರಾಘವ(Janaki Raghava) ಎಂಬ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಪಾದರ್ಪಣೆ ಮಾಡಿದ ಇವರು ಅನಂತರ 2018ರಲ್ಲಿ ನೆಗೆಟಿವ್ ಪಾತ್ರದ ಮೂಲಕ ‘ಮನೆಯೇ ಮಂತ್ರಾಲಯ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಈ ಸೀರಿಯಲ್ ಮೂಲಕ ಶರ್ಮಿತಾ ಅವರ ಈ ಪಾತ್ರವನ್ನು ಜನರು ಒಪ್ಪಿಕೊಂಡಿದ್ದರು. ತಮಿಳಿನ ಕಿರುತರೆ ನಿಲಾ(Neela) ಎಂಬ ದಾರವಾಹಿಯನ್ನು ಇವರು ನಟಿಸಿದ್ದಾರೆ. ಬಳಿಕ ಬೆಳ್ಳಿತೆರೆಗೆ ಆಗಮಿಸಿದ ಶರ್ಮಿತಾ ಅವರು ‘ಆಮ್ಲೆಟ್’, ‘ಸೀತಾಯಣ’, ‘ಫ್ಯಾಮಿಲಿ ಪ್ಯಾಕ್’ ಇನ್ನು ಹಲವು ಸಿನಿಮಾದಲ್ಲಿ ಶರ್ಮಿತಾ ಅವರು ನಟಿಸಿದ್ದಾರೆ ಇನ್ನು ಇವರಿಗೆ ಗೀತಾ ಸೀರಿಯಲ್ ತುಂಬಾ ಜನ ಮನ್ನಣೆ ಕೊಟ್ಟ ಧಾರಾವಾಹಿಯಾ ಅತ್ತೆ ಪಾತ್ರದಲ್ಲಿ ಖಡಕ್ ವಿಲನ್ ಮಾಡುತ್ತಿರುವ ಶರ್ಮಿತ ಅವರಿಗೆ ಸಾಕಷ್ಟು ಫ್ಯಾನ್ ಪೇಜ್ ಗಳು ಇವೆ. ಶರ್ಮಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇದು ತಮ್ಮ ಅಭಿಮಾನಿಗಳ ಜೊತೆ ಒಡನಾಟದಲ್ಲಿ ಇರುತ್ತಾರೆ.
ಇದನ್ನೂ ಓದಿ: ಈ ಬಾರಿ ಟಿ.ಆರ್.ಪಿ ಲಿಸ್ಟ್ ಔಟ್! ಟಾಪ್ 10ರಲ್ಲಿರುವ ಕನ್ನಡ ಧಾರಾವಾಹಿ ಗಳು ಯಾವುವು ಗೊತ್ತಾ?
ವೈರಲ್ ಆಯ್ತು ಶರ್ಮಿತಾ ಗೌಡ ಫೋಟೋ
ಇದೀಗ ಶರ್ಮಿತಾ ಗೌಡ{Sharmitha Gowda) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಸಕ್ಕತ್ ವೈರಲ್ ಆಗಿದೆ. ಸದ್ಯ ವಿಯೆಟ್ನಾಂ(Vietnam) ನಲ್ಲಿ ತೆಗೆಸಿರುವ ಫೋಟೋವನ್ನು ಶರ್ಮಿತಾ ಹಂಚಿಕೊಂಡಿದ್ದಾರೆ ಈ ಫೋಟೋದಲ್ಲಿ ತುಂಬಾ ಬೋಲ್ಡ್ ಆಗಿ ಶರ್ಮಿತಾ ಕಾಣಿಸಿಕೊಂಡಿದ್ದಾರೆ. “ಯಾವುದು ಅಷ್ಟು ಸುಲಭವಾಗಿ ಬರುವುದಿಲ್ಲ ಅದರಲ್ಲೂ ಆತ್ಮ ವಿಶ್ವಾಸ ತುಂಬಿರುವ ದೇಹ ಅಷ್ಟು ಸುಲಭವಲ್ಲ”(Nothing come easy, A confident body is definitely not easy) ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಹಾಗೆ ನೀವು ವಿಲನ್ ರೋಲ್ ಮಾಡಬೇಡಿ ಹೀರೋಯಿನ್ ಆಗಿ ಎಂಟ್ರಿ ಕೊಡಿ ಎಂದು ಹಲವಾರು ಜನರು ಶರ್ಮಿತ ಗೌಡ ಅವರಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವು ಸಂದರ್ಶನಗಳಲ್ಲಿ ಮಾತನಾಡಿರುವ ಶರ್ಮಿತ ಅವರು ಫಿಟ್ನೆಸ್ ತುಂಬಾ ಮುಖ್ಯ ಅದರಲ್ಲೂ ನಟ ನಟಿಯರು ಫಿಟ್ ಆಗಿ ಇರಬೇಕು ಎಂದು ಹೇಳಿಕೊಂಡಿದ್ದಾರು. ಮತ್ತು ಶರ್ಮಿತ ಅವರ ಫಿಟ್ನೆಸ್ ಗೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram
ಇದನ್ನೂ ಓದಿ: ನಮ್ಮ ಲಚ್ಚಿ ಅಮ್ಮ ಮಗಳು ಪುನರ್ಮಿಲನ.!!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram