Dr Bro, ನಮಸ್ಕಾರ ದೇವ್ರು ಅಂತಲೇ ವಿಡಿಯೋ ಶುರು ಮಾಡುವ ಗಗನ್ ಶ್ರೀನಿವಾಸನ್ ಯೂಟ್ಯೂಬ್ ನೋಡೋ ಜನರು ಮಾತ್ರವಲ್ಲ ಸೋಷಿಯಲ್ ಮೀಡಿಯಾ ಬಳಸೋ ಎಲ್ಲರಿಗೂ ಅತ್ಯಂತ ಅಚ್ಚು ಮೆಚ್ಚು ಅಂತಲೇ ಹೇಳಬಹುದು. ಹೌದು ತಮ್ಮ ವಿಭಿನ್ನ ಕಂಟೆಂಟ್ ಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿಸಿದ್ದಾರೆ ಗಗನ್ ದೇಶ ವಿದೇಶಗಳನ್ನ ಸುತ್ತಿ ಅಲ್ಲಿನ ಜನರ ಆಚಾರ ವಿಚಾರ, ಆಹಾರ ಶೈಲಿ, ಅವ್ರು ಅನುಸರಿಸುವ ಪದ್ಧತಿಗಳನ್ನ ತಮ್ಮದೇ ಶೈಲಿಯಲ್ಲಿ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ಅಂತ್ಯತ ಚಿರಪರಿಚಿತರಾಗಿದ್ದಾರೆ. ಇನ್ನು ಕೇವಲ 23 ವರ್ಷಕ್ಕೆ ಪೂರ್ತಿ ದೇಶ ಸುತ್ತಿರುವ ಖ್ಯಾತಿ ಗಗನ್ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್ ಒಂದೇ ಒಂದು ರೂಪಾಯಿಯನ್ನ ತನ್ನ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ಯೂಟ್ಯೂಬ್ ಯಿಂದ ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ 1900 ಡಾಲರ್(Dollar) ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ.
ಇನ್ನು ಇದೀಗ ಡಾ ಬ್ರೋ(Dr Bro) ಕಳೆದ ಒಂದು ತಿಂಗಳಿನಿಂದ ವಿಡಿಯೋ ಮಾಡಿಲ್ಲ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದನ್ನ ನೋಡೊದ ಗಗನ್ ಅವ್ರು ಅಭಿಮಾನಿಗಳು ಹಾಗೂ ನೆಟ್ಟಿಗರು ನಾಪತ್ತೆಯಾಗಿದ್ದಾರೆ ಗಗನ್ ಅಂತ ಸುದ್ದಿ ಹಬ್ಬಿಸಿದ್ರು. ಮಾಧ್ಯಮದವರು ಕೂಡ ಚೀನಾ ದೇಶದ ವಿಡಿಯೋ ಮಾಡಿ ಡಾ. ಬ್ರೋ ತೊಂದ್ರೇಗೆ ಸಿಲುಕಿದ್ದಾರೆ ಅಂತ ಹೇಳಿದ್ರು ಆದ್ರೆ ಇದೀಗ ಡಾ. ಬ್ರೋ ಬಗ್ಗೆ ಹೊಸ ಸುದ್ದಿಯೊಂದು ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದೂ, ನಟ ಶೈನ್ ಶೆಟ್ಟಿ ಈ ಕುರಿತ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ಗಗನ್ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ? ಗಗನ್ ಬಗ್ಗೆ ಶೈನ್ ಶೆಟ್ಟಿ ಹೇಳಿದ್ದೇನು ನೋಡೋಣ ಬನ್ನಿ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಕೊನೆಗೆ ಸಿಕ್ಕೇಬಿಟ್ರು ಯೂಟ್ಯೂಬರ್ ಡಾ.ಬ್ರೋ(Dr Bro) ಗಗನ್
ಡಾಕ್ಟರ್ ಬ್ರೋ(Dr Bro) ಅವ್ರ ನಿಜವಾದ ಹೆಸರು ಗಗನ್ ಶ್ರೀನಿವಾಸ್. ಇವ್ರು ಮೂಲತಃ ಬೆಂಗಳೂರಿನ ಹೊರವಲಯದವರು. ಹುಟ್ಟಿ ಬೆಳದದ್ದು ಮದ್ಯಮ ವರ್ಗದ ಕುಟುಂಬದಲ್ಲಿ.ಇವ್ರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಇನ್ನು ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತು, ತಂದೆ ಇಲ್ಲದ ಸಮಯದಲ್ಲಿ ತಾವೇ ದೇವಸ್ಥಾನದ ಪೂಜೆ ಮಾಡುತ್ತಿದ್ದರು. ಡಾ ಬ್ರೋಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ಯಾವಾಗಲೂ ಹಾಡು, ಡ್ಯಾನ್ಸ್ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಓದಿನ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಹೀಗಾಗಿ ಭರತನಾಟ್ಯ ಕಲಿತು ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಿದ್ದರು. ಇನ್ನು ನಂತರದಲ್ಲಿ ಫೋಟೋಗ್ರಾಫಿ ವಿಡಿಯೋ ಗ್ರಾಫಿ ಕಲಿಯುತ್ತಾರೆ.
ಇದಾದ ನಂತರ 2016 ರಲ್ಲಿ ತನ್ನದೇ ಆದ ಡಾಕ್ಟರ್ ಬ್ರೋ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ರು. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ ಸ್ವಲ್ಪ ಮಟ್ಟಿನ ಜನಪ್ರಿಯತೆ ಪಡೆದುಕೊಂಡ್ರು. ನಂತರ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ರು. ಇದೆಲ್ಲಾ ಆದ ನಂತರ ಇದೀಗ ಡಾ. ಬ್ರೋ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ ಕಾರಣ ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ ವಿವರ ಕೊಡಲು ಶುರುಮಾಡಿ, ಅಂತರಾಜ್ಯ, ದೇಶ, ವಿದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಅವ್ರ ಜೀವನ ಶೈಲಿ ಆಹಾರ ಪದ್ಧತಿ ಸೇರಿದಂತೆ ಎಲ್ಲವನು ಕೂಡ ನೋಡುಗರು ಮುಂದೆ ತಂದಿಡುತ್ತಿದ್ರು. ಇಂತ ವಿಷಯಗಳಿಂದಲೇ ಡಾ. ಬ್ರೋ ಗೆ ಅಭಿಮಾನಿ ವರ್ಗ ಹೆಚ್ಚಾಗಿದೆ. ದೇಶ ಮಾತ್ರ ಅಲ್ಲಾ ಪ್ರಪಂಚದಾದ್ಯಂತ ಇದೀಗ ಡಾ. ಬ್ರೋ ಸಕತ್ ಫೇಮಸ್ ಆಗಿದ್ದರು ಆದ್ರೆ ಕಳೆದ ಒಂದು ತಿಂಗಳಿನಿಂದ ಡಾ. ಬ್ರೋ ಎಲ್ಲಿಯೂ ಕಾಣಿಸಿಲ್ಲ, ವಿಡಿಯೋನು ಮಾಡಿಲ್ಲ ಎಲ್ಲಿ ಹೋಗಿಬಿಟ್ರು ಅಂತ ಎಲ್ರು ಕೇಳ್ತಿದ್ರು ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಡಾ ಬ್ರೋ ಎಲ್ಲಿಯೂ ಹೋಗಿಲ್ಲ ಇಲ್ಲೆ ಇದ್ದಾರೆ ನೋಡಿ ಅಂತ ಶೈನ್ ಶೆಟ್ಟಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ, ಮುಂದಿನ ವರ್ಷ 8ನೇ ತರಗತಿಯ ಮಕ್ಕಳಿಗೆ ಸೈಕಲ್ ವಿತರಣೆ
ಸಿನಿಮಾದಲ್ಲಿ ನಟಿಸುತ್ತಿರುವ ಡಾ ಬ್ರೋ
ಹೌದ ಜನಪ್ರಿಯ ಯೂಟ್ಯೂಬರ್ ಅಂತಲೇ ಫೇಮಸ್ ಆಗಿರುವ ಡಾ. ಬ್ರೋ ಇತ್ತೀಚಿಗೆ ಯಾವುದೇ ವಿಡಿಯೋಗಳನ್ನ ಅಪ್ಲೋಡ್ ಮಾಡ್ತಿಲ್ಲ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇದು ಅಭಿಮಾನಿಗಳಿಗೆ ಬಹಳಷ್ಟು ಬೇಸರ ತರಿಸಿತ್ತು, ಡಾ.ಬ್ರೋ ಕಾಣೆಯಾಗಿದ್ದಾರೆ ಹುಡುಕಿಕೊಡಿ ಅಂತೆಲ್ಲಾ ಅಭಿಮಾನಿಗಳು ಹೇಳ್ತಿದ್ರು. ಹೌದು ಡಾ. ಬ್ರೋ ಕಳೆದ ನವೆಂಬರ್ 14ರ ಮಕ್ಕಳ ದಿನಾಚರಣೆಯ ದಿನ ಮಕ್ಕಳನ್ನ ಮಾತಾಡಿಸುತ್ತ ವಿಡಿಯೋ ಮಾಡಿ ಹಾಕುದ್ರು ಅದೇ ಅವ್ರ ಕೊನೆ ವಿಡಿಯೋ ಅದಾದ ಮೇಲೆ ಗಗನ್ ಎಲ್ಲಿಯೂ ಕಾಣಿಸಿಕೊಂಡಿಲ್ಲ ಹೊಸದಾಗಿ ಯಾವ ವಿಡಿಯೋವನ್ನ ಕೂಡ ಮಾಡಿಲ್ಲ. ಅವ್ರ ಸಾಮಾಜಿಕ ಜಾಲತಾಣದ ಖಾತೆಗಳು ಕೂಡ ಸಕ್ರಿಯವಾಗಿರದ ಕಾರಣ ಅಭಿಮಾನಿಗಳು ಕೊಂಚ ಭಯದಲ್ಲಿಯೇ ಡಾ. ಬ್ರೋ ಗೆ ಏನಾಗಿದೆ, ಯಾರಾದ್ರು ತಿಳಿದುಕೊಂಡು ಹೇಳಿ ಅಂತೆಲ್ಲಾ ಹೇಳ್ತಿದ್ರು,
ಇದೀಗ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆ ಕಲಾವಿದ ಶೈನ್ ಶೆಟ್ಟಿ ಡಾ. ಬ್ರೋ ಅವ್ರನ್ನ ಹುಡುಕಿದ್ದು ಡಾ. ಬ್ರೋ ಎಲ್ಲಿಯೂ ಹೋಗಿಲ್ಲ ಇಲ್ಲೇ ಇದ್ದಾರೆ ನೋಡಿ ಅಂತ ಫೋಟೋಗಳನ್ನ ಹಂಚಿಕೊಂಡು ಸಿಹಿಸುದ್ದಿ ಕೊಟ್ಟಿದ್ದಾರೆ. ದೇವ್ರು, ಇಲ್ಲಿ ನೋಡಿ, ಯಾರಿದರೆ ಅಂತ, ನಮ್ಮ ಕನ್ನಡಿಗರ ಹೆಮ್ಮೆ, ಅದ್ಭುತ ಪ್ರತಿಭೆ, ಮುಗ್ಧ ಮನಸಿನ ಹುಡುಗ ಡಾ. ಬ್ರೋ ಗಗನ್ ಅವ್ರನ್ನ ನಮ್ಮ ಜಸ್ಟ್ ಮ್ಯಾರೀಡ್ ಶೂಟಿಂಗ್ ವೇಳೆ ಭೇಟಿಯಾದ ಕ್ಷಣ. ನಿಮ್ಮಗೆ ಒಳ್ಳೆದಾಗಲಿ, ಜಗತ್ತಿನಲ್ಲಿರೋ ಅಷ್ಟು ಜನರ ಪ್ರೀತಿಗೆ ನೀವು ಅರ್ಹರು ಅಂತ ಶೈನ್ ಶೆಟ್ಟಿ ಬರೆದುಕೊಂಡು ಡಾ. ಬ್ರೋ ಜೊತೆಗಿನ ಒಂದೆರೆಡು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇನ್ನು ಶೈನ್ ಶೆಟ್ಟಿ ಅವ್ರ ಪೋಸ್ಟ್ ನೋಡ್ತಿದ್ದಂತೆ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು ಖುಷಿಯಿಂದ ಥರೆವರಿ ಕಮೆಂಟ್ಸ್ ಹಾಕಿ ಡಾ. ಬ್ರೋ ಗೆ ವಿಶ್ ಮಾಡ್ತಿದ್ದಾರೆ.
View this post on Instagram
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಬಿಡುಗಡೆ