Shivaraj Kumar: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?

Shivaraj Kumar: ನಟ ಕಿಚ್ಚ ಸುದೀಪ್ ಹಾಗೂ ಕುಮಾರ್ ಅವ್ರ ಜಗಳ ಈಗ ನ್ಯಾಯಾಲಯದವರೆಗೂ ಹೋಗಿರೋದು ನಿಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಹೌದು ನಟ ಸುದೀಪ್ ಅವರ ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ ಅವರು ಸಾಕಷ್ಟು ಆರೋಪಗಳನ್ನು ಮಾಡಿ ಮಾಧ್ಯಮದ ಮುಂದೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡು ತಮಗಾಗಿರುವ ಅನ್ಯಾಯ ಸರಿಪಡಿಸಬೇಕು ಅಂತ ಕೇಳಿಕೊಂಡಿದ್ರು ಆದ್ರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ‘ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ದೇ ನಿರ್ಮಾಪಕ ಎಂಎನ್ ಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಇದರಿಂದಾಗಿ ಇದೀಗ ನಿರ್ಮಾಪಕ ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಧರಣಿ ಕುಳಿತು ಸಮಸ್ಯೆ ಬಗೆಹರಿಸುವಂತೆ ಸಿನಿರಂಗದ ಹಿರಿಯ ಕಲಾವಿದರ ಮೊರೆ ಇಟ್ಟಿದ್ರು. ಅಲ್ದೇ ದೊಡ್ಮನೆ ಶಿವಣ್ಣ ಅವ್ರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡಿದ್ರು. ಇದೀಗ ಶಿವಣ್ಣ ಕೂಡ ಈ ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಸಮಸ್ಯೆ ಬಗೆಹರಿಸೋಣ ಅಂತ ಹೇಳಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ್ನ ಹೀಗೆ ಸಲ್ಲಿಸಬೇಕು! ಎಲ್ಲಿ ಬೇಕಾದರಲ್ಲಿ ಅರ್ಜಿಸಲ್ಲಿಸೋಕಾಗಲ್ಲ!?

ರವಿ ಸರ್ ಜೊತೆ ಮಾತಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ

ಹೌದು ನಿರ್ಮಾಪಕ ಎಂ ಎನ್‌ ಕುಮಾರ್ ವಿರುದ್ಧ ನಟ ಕಿಚ್ಚ ಸುದೀಪ್ ಅವರು ಈಗಾಗಲೇ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಇತ್ತ ಸುದೀಪ್ ಅವರ ವಿರುದ್ಧ ಅನೇಕ ಆರೋಪಗಳನ್ನು ಮಾಡಿರುವ ನಿರ್ಮಾಪಕ ಎಂ ಎನ್‌ ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಧರಣಿ ಕುಳಿತು, ‘ಶಿವಣ್ಣ ಅವರಲ್ಲಿ ನಾನು ಬೇಡಿಕೊಳ್ಳುತ್ತೇನೆ. ದಯವಿಟ್ಟು ಶಿವಣ್ಣ ಅವರು ಮುಂದಾಳತ್ವವಹಿಸಿ, ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ಅವರ ಬರುವವರೆಗೂ ನಾನು ಇಲ್ಲೇ ಇರುತ್ತೇನೆ’ ಅಂತ ಕುಮಾರ್ ಧರಣಿ ಕುಳಿತಿದ್ರು ಈ ವಿಚಾರವಾಗಿ ರವಿಚಂದ್ರನ್ ಅವ್ರು ಮಧ್ಯ ಪ್ರವೇಶಿಸಿ ಧರಣಿ ಕೈ ಬಿಟ್ಟು, ಸಮಸ್ಯೆ ಬಗೆಹರಿಸುವತ್ತ ಯೋಚನೆ ಮಾಡಬೇಕು ಮೊದಲು ಕುಮಾರ್ ಧರಣಿ ಬಿಟ್ಟು ಬರ್ಲಿ ನಾನು ಮಾತಾಡ್ತೀನಿ ಅದು ಬಿಟ್ಟು ಬಿಡಿ ಜಗಳ ಮಾಡೋದ್ರಿಂದ ಯಾರಿಗೂ ಏನು ಲಾಭ ಇಲ್ಲ ಅಂದಿದ್ರು.

ಇದೀಗ ಶಿವರಾಜ್ ಕುಮಾರ್(Shivaraj Kumar) ಕೂಡ ಈ ವಿಚಾರವಾಗಿ ಮಾತನಾಡಿದ್ದು, ನಮ್ದು ಒಂದೇ ಕುಟುಂಬ ಇದೆಲ್ಲಾ ಜಾಸ್ತಿ ದಿನ ಇರಲ್ಲ ಎಲ್ಲ ಸರಿಹೋಗುತ್ತೆ ಅಂತ ಬಹಳ ವಿನಮ್ರವಾಗಿ ಮಾತನಾಡಿದ್ದಾರೆ. ಸಮಸ್ಯೆ ಸರಿಹೋಗುತ್ತೆ ನಾನು ಕೂಡ ಮಾತಾಡ್ತೀನಿ. ನಮ್ಮ ಮನೆ ಸರಿ ಹೋದ್ರೆ ಸಾಕು. ಯಾಕಂದ್ರೆ ಅಪ್ಪಾಜಿ ಅವ್ರು ಹೇಳ್ತಿದ್ರು ನಮ್ದು ಒಂದೇ ಕುಟುಂಬ ಅಂತ ಅವ್ರು ಹಾಕೊಟ್ಟಿರೋ ದಾರಿಯಲ್ಲೇ ಹೋಗ್ತಿದ್ದೀವಿ ಹಾಗಾಗಿ ನಮ್ಮ ಮನೆಯಲ್ಲಿ ಸಮಸ್ಯೆ ಬಂದಾಗ ಬಗೆಹರಿಸಿ ಸಮಸ್ಯೆ ತಿಳಿಗೊಳಿಸುವ ಕೆಲಸ ಮಾಡಬೇಕು ಮಾಡ್ತೀವಿ ಅಂತ ಹೇಳಿದ್ದಾರೆ.

ಅನ್ನದಾತರಿಗೆ ಅನ್ಯಾಯ ಆಗಬಾರದು, ಸುದೀಪ್ ಕೂಡ ಒಳ್ಳೆಯವರು

ನೀವು ಗ್ಯಾಂಗ್ ಸ್ಟಾರ್ ಆಗಿ ಸಮಸ್ಯೆ ಬಗೆಹರಿಸಬೇಕು ಅಂತ ಮಧ್ಯಮದವರು ಕೇಳಿದಾಗ ಅಯ್ಯೋ ಅದು ಸಿನಿಮಾ ಟೈಟಲ್ ಅಷ್ಟೆ ನಾನು ನಿಮ್ಮಂತೆ ಸಾಮಾನ್ಯ ಮನುಷ್ಯ. ಏನಿದ್ಯ ವಿಚಾರ ವಿಚಾರಿಸಿ ಆಮೇಲೆ ನಾನು ರವಿ ಸರ್ ಸೇರಿ ತೀರ್ಮಾನ ಮಾಡ್ತೀವಿ. ನಾನಿನ್ನು ರವಿ ಸರ್ ಜೊತೆ ಮಾತಾಡಿಲ್ಲ ಮೊದಲು ಅವ್ರ ಜೊತೆ ಮಾತಾಡ್ತೇನೆ. ಆಮೇಲೆ ಉಳಿದದ್ದು ಎಂದಾಗ ರವಿಚಂದ್ರನ್ ಅವ್ರು ದೊಡ್ಮನೆ ನಿರ್ಧಾರನೆ ಫೈನಲ್ ಎಂದಿದ್ದಾರೆ ಅಂದಿದ್ದಕ್ಕೆ ಅದು ಅವ್ರ ದೊಡ್ಡ ಗುಣ. ನಿರ್ಮಾಪಕರು ಅನ್ನದಾತರು ಅವ್ರಿಗೂ ಅನ್ಯಾಯ ಆಗಬಾರದು ಆಗಂತ ಸುದೀಪ್ ಸರ್ ಬಗ್ಗೆ ಮಾತನಾಡತಿಲ್ಲ ಅವ್ರು ಕೂಡ ಒಳ್ಳೆಯವರೇ ಆದ್ರೆ ವಿಷಯ ಏನಾಗಿದೆ ಅನ್ನೋ ಮಾಹಿತಿ ಇಲ್ಲ.

ಇದೆಲ್ಲಾ ಕುಳಿತು ಮಾತಾಡಿ ಬಗ್ಗೆ ಹರಿಸಬೇಕು. ವಿಷಯ ಅದೇನಿದ್ಯ ಅದನ್ನ ಮಾತಾಡ್ತೀವಿ ದುಡ್ಡಿನ ವಿಚಾರ ನಮಗೆ ಗೊತ್ತಿಲ್ಲ.. ರವಿಚಂದ್ರನ್ ಅವ್ರ ಅಪ್ಪ ಕೂಡ ದೊಡ್ಡ ಪ್ರಡ್ಯೂಸರ್ ಅವ್ರನ್ನ ನಮ್ಮ ಅಪ್ಪಾಜಿ ಸಾಹುಕಾರು ಅಂತ ಕರಿತ್ತಿದ್ರು ರವಿ ಸರ್ ಅಷ್ಟೆ. ನಟರು ಮತ್ತೆ ನಿರ್ಮಾಪಕರು ಎರಡು ಪಿಲ್ಲರ್, ಮತ್ತೆ ಎರಡು ಕಣ್ಣು ಇದ್ದಾಗ ಒಂದನ್ನ ಆಯ್ಕೆ ಮಾಡಿಕೊಳ್ಳೋದು ಕಷ್ಟ ಎರಡು ಕಣ್ಣು ಬೇಕು, ಅಂಗೇ ನಮಗೆ ಇಬ್ಬರು ಬೇಕು ಅಂತ ಹೇಳಿರುವ ಶಿವಣ್ಣ ರವಿ ಸರ್ ಹೇಳಿದ ಆಗ್ಗೆ ಮಾಡ್ತೇವೆ ಅಂತ ಬಹಳ ವಿನಯದಿಂದಲೇ ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ವಿಚಾರ ಸದ್ಯ ಸ್ಯಾಂಡಲ್ವುಡ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಇದೀಗ ನಟ ರವಿಚಂದ್ರನ್ ಹಾಗೂ ಶಿವಣ್ಣ ಮಧ್ಯಾಪ್ರವೇಶ ಕೊಂಚ ನಿರಾಳ ಮೂಡಿಸಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಯುವ ಸೂಚನೆ ಇದೆ. ಆದ್ರೆ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ಯಾವ ರೀತಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಮತ್ತೊಂದು ಮದುವೆ ಬಗ್ಗೆ ಮೇಘನಾ ಹೇಳಿದ್ದೇನು? ಮುಂದಿನ ಜೀವನದ ಬಗ್ಗೆ ಮನೆ ಬಿಚ್ಚಿ ಮಾತನಾಡಿದ ಮೇಘನಾ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram