ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಹಲವಾರು ಯೋಜನೆಗಳನ್ನು ನಿರ್ಮಿಸುತ್ತಿದೆ ಅದರಲ್ಲಿ ಈ ಶುಚಿ ಯೋಜನೆಯು ಕೂಡ ಒಂದು. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಶುಚಿತ್ವದ ಬಗ್ಗೆ ತಿಳಿಸಿಕೊಡುವುದು ಇದರ ಉದ್ದೇಶವಾಗಿದೆ. ಹೆಂಗಸರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ತಿಳಿ ಹೇಳುವುದು ಮತ್ತು ಇದರ ಬಗ್ಗೆ ಅಗತ್ಯ ವಸ್ತುಗಳನ್ನ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕೆಲವು ಹಳ್ಳಿಯ ಹೆಣ್ಣು ಮಕ್ಕಳಿಗೆ ಅಥವಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಕೆಲವೊಂದು ಕಾರಣಗಳಿಂದ ಆರ್ಥಿಕವಾಗಿ ಹಿಂದು ಉಳಿಯುವಿಕೆ ಆಗಿರಬಹುದು ಅಥವಾ ಕೆಲವೊಂದು ಮೌಡ್ಯಗಳಿಂದ ಹೀಗೆ ಹಲವಾರು ವಿದ್ಯಾರ್ಥಿನಿಯರು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದಾಗಿ ಅನೇಕ ರೀತಿಯ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನ ಸುಧಾರಿಸುವುದು ಸರ್ಕಾರದ ಕರ್ತವ್ಯವಾಗಿದೆ. ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಸಚಿವರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಹಳ್ಳಿಗಳಿಲ್ಲಿರುವ ಪ್ರತಿ ಮನೆಗಳಿಗೂ ಹೋಗಿ ಸ್ಯಾನಿಟರಿ ಪ್ಯಾಡ್ ಬಗ್ಗೆ ವಿಸ್ತರಿಸಿ ತಿಳಿಹೇಳುವ ಹಾಗೆ ಸೂಚನೆಯನ್ನು ಕೊಟ್ಟಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಶುಚಿ ಯೋಜನೆಯ ಉದ್ದೇಶವೇನು?
10 ವರ್ಷದಿಂದ ಹಿಡಿದು 18 ವರ್ಷದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಹಂಚುವ ಮೂಲಕ ಮುಟ್ಟಿನ ಅನೈರ್ಮಲ್ಯದ ಬಗ್ಗೆ ತಿಳಿಸಿಕೊಡುವುದು. ಮನೆಯಲ್ಲಿ ಪಾಲಕರು ಪಾಲಿಸುವ ಕೆಲವೊಂದು ಮೌಡ್ಯಗಳಿಂದ ಹೆಣ್ಣು ಮಕ್ಕಳನ್ನು ಹೊರತರುವುದು ಇದರ ಉದ್ದೇಶವಾಗಿದೆ. ಮುಟ್ಟಿನ ಸಮಯದಲ್ಲಿ ಶುಚಿತ್ವವನ್ನು ಕಾಪಾಡದೇ ಕೆಲವೊಂದು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸದೆ ಹೋದಲ್ಲಿ ಹೀಗೆ ಮುಂದುವರೆದುಕೊಂಡು ಹೋಗುವ ಶಂಕೆ ಇದೆ. ಇದನ್ನರಿತ ಸರಕಾರವು ಹತ್ತರಿಂದ ಹದಿನೆಂಟು ವರ್ಷದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನ ಹಂಚುತ್ತಿದೆ.
ಸ್ಯಾನಿಟರಿ ಪ್ಯಾಡ್ ಗಳನ್ನ ಬಳಸುವುದರಿಂದ ಮುಟ್ಟಿನ ಅನೈರ್ಮಲ್ಯವನ್ನ ಕಾಪಾಡಬಹುದು. ಹಾಗೂ ಸ್ವಚ್ಛತೆಯೊಂದಿಗೆ ವಿದ್ಯಾರ್ಥಿನಿಯರು ಆ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ತೆರಳಬಹುದು. ಹಾಗೂ ಕೆಲವೊಂದು ಸೋಂಕುಗಳಿಂದ ದೂರ ಇರಬಹುದು. ಮುಟ್ಟಿನ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡದೇ ಇದ್ದರೆ ಮಾರಣಾಂತಿಕ ಕಾಯಿಲೆಗಳಿಗೂ ತುತ್ತಾಗುವ ಸಾಧ್ಯತೆ ಇರುತ್ತದೆ.
ಇದರ ಬಗ್ಗೆ ತಿಳಿ ಹೇಳುವುದು ಅವಶ್ಯಕವಾಗಿದೆ ನಮ್ಮ ರಾಜ್ಯದಲ್ಲಿ ಎಷ್ಟೋ ಹೆಣ್ಣು ಮಕ್ಕಳು ಕೆಲವು ತಿಳುವಳಿಕೆಗಳ ಅಭಾವದಿಂದ ಮುಟ್ಟಿನ ಸಮಯದಲ್ಲಿ ಕೆಲವು ಅನೈರ್ಮಲ್ಯವಾದ ವಸ್ತುವನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಕೆಲವು ಸೋಂಕುಗಳಿಗೆ ಗುರಿಯಾಗುತ್ತಿದ್ದು ಮಾರಣಾಂತಿಕ ಕಾಯಿಲೆಗಳು ಕೂಡ ಹೆಚ್ಚಾಗುತ್ತಿವೆ. ಇದೇ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಂಡ ಸರ್ಕಾರ 10 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಅನ್ನು ಒದಗಿಸುತ್ತಿದೆ.
ಈ ಕೆಲಸಕ್ಕಾಗಿ ಸರ್ಕಾರವು ಸುಮಾರು 47 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ ಈಗಾಗಲೇ 19 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಅನ್ನು ವಿತರಿಸಿದ್ದು, ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಮುಂದುವರಿದಿದೆ. ಇದನ್ನು ಉಪಯೋಗಿಸುವುದರಿಂದ ಮುಟ್ಟಿನ ಸಮಯದಲ್ಲಿ ಆಗುವ ತೊಂದರೆಗಳನ್ನು ಕೂಡ ತಪ್ಪಿಸಬಹುದು. ನೀವು ಸುಲಭವಾಗಿ ಕ್ಲಾಸ್ ಗಳನ್ನು ಅಟೆಂಡ್ ಮಾಡಬಹುದು.
ಮುಟ್ಟಿನ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಆರೋಗ್ಯದಿಂದ ಕೂಡಿದ್ದು ಹೆಚ್ಚಿನ ವಿದ್ಯೆಯನ್ನ ಕಲಿತು ಹೆಣ್ಣು ಮಕ್ಕಳನ್ನು ಮುಂದೆ ತರುವುದು ಸರ್ಕಾರದ ಉದ್ದೇಶವಾಗಿದೆ. ಹೆಣ್ಣು ಮಕ್ಕಳು ಕಲಿತರೆ ಮುಂಬರುವ ದಿನಗಳಲ್ಲಿ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಒಂದು ಆಸ್ತಿ ಆಗುತ್ತಾರೆ. ಈ ನಿಟ್ಟಿನಲ್ಲಿ ಸರಕಾರ ಬೆಂಬಲವಾಗಿ ನಿಂತು ಸ್ಯಾನಿಟರಿ ಪ್ಯಾಡ್ ಒದಗಿಸುವ ಮೂಲಕ ಹೆಣ್ಣು ಮಕ್ಕಳನ್ನು ಅಭಿವೃದ್ಧಿಗೊಳಿಸುವತ್ತ ನೆರವಾಗಿದೆ. ಹೆಣ್ಣು ಮಕ್ಕಳು ಕೂಡ ಸರಕಾರದ ಉದ್ದೇಶವನ್ನು ಅರಿತು, ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಶಿಕ್ಷಣದಲ್ಲಿ ಸಾಧನೆಯನ್ನ ಮಾಡುವತ್ತ ಹೆಜ್ಜೆಯನ್ನಿಡಬೇಕು.
ಇದನ್ನೂ ಓದಿ: ಹೀರೊ ಸ್ಪ್ಲೆಂಡರ್ 80 ಮೈಲೇಜಿನೊಂದಿಗೆ, ಬಜಾಜ್ ಮತ್ತು ಹೋಂಡಾ ಗೇಮ್ ಕೊನೆಗೊಳ್ಳುತ್ತಿದೆ.
ಇದನ್ನೂ ಓದಿ: ಹೊಸ ವಿನ್ಯಾಸದೊಂದಿಗೆ ಹೋಂಡಾ ಶೈನ್ 125, ಮಾರುಕಟ್ಟೆಯಲ್ಲಿ ಭಾರಿ ಮೈಲೇಜ್ ನೊಂದಿಗೆ ಮಿಂಚಲಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram