Puneeth Rajkumar: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ; ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ..

Puneeth Rajkumar: ದಿವಗಂತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಘೋಷಿಸಿದ್ದು, ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥವಾಗಿ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೌದು ಕರ್ನಾಟಕ ರತ್ನ ಡಾ|| ಪುನೀತ್‌ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ Automated External Defibrillators ಗಳನ್ನ ಅಂದ್ರೆ AED ಅಳವಡಿಸಲಾಗುವುದು ಅಂತ ಹೇಳಿದ್ದಾರೆ. ಅಲ್ದೇ ಇದಕ್ಕಾಗಿ ಆರು ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು ಅಂತಲೂ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. 

WhatsApp Group Join Now
Telegram Group Join Now

ಹೌದು ಹಠಾತ್ ಹೃದಯಾಘಾತ ಸಾವು ತಡೆಗೆ ಯೋಜನೆ ರೂಪಿಸಲು ಮುಂದಾಗಿರೋ ರಾಜ್ಯ ಸರ್ಕಾರದ ಈ ಯೋಜನೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲೆ ಈ ಜವಾಬ್ದಾರಿ ಬೀಳಲಿದೆ. ಪುನೀತ್ ರಾಜ್ ಕುಮಾರ್ 29 ಅಕ್ಟೊಬರ್ 2021 ರಂದು ಹೃದಯಾಘಾತದಿಂದ ನಿಧನರಾದ್ರು. ಹೀಗಾಗಿ ಇವರ ಹೆಸರಿನಲ್ಲಿ ಹೃದಯಾಘಾತವನ್ನ ತಡೆಯವ ನಿಟ್ಟಿನಲ್ಲಿ ಈ ಅನುದಾನ ನೀಡಲಾಗಿದೆ. ಹೌದು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಎಲ್ಲಾ ಜಿಲ್ಲಾ ಆಸ್ಪತ್ರೆಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹಠಾತ್ ಹೃದಯ ಸ್ತಂಭನ ತಡೆಗೆ ನೆರವಾಗಲು ಆಟೋಮೇಟೆಡ್ ಎಕ್ಸ್ ಟರ್ನಲ್ ಡಿಫಿಬ್ರಿಲೇಟರ್ ಅಂದ್ರೆ ಎಇಡಿ ಅಳವಡಿಸೋದಕ್ಕಾಗಿ ಸುಮಾರು 6 ಕೋಟಿ ರೂಪಾಯಿ ಅನುದಾನವನ್ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದ್ದು, ಯುವಕರು ಹಾಗೂ ಪುನೀತ್ ಅಭಿಮಾನಿಗಳಿಗೆ ಈ ಯೋಜನೆ ತೃಪ್ತಿ ತಂದಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯನ್ನ 2023 ರ ಹೊಸ ಬಜೆಟ್ ನಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಹೌದು ಕರ್ನಾಟಕ ರತ್ನ, ಪವರ್ ಸ್ಟಾರ್‌ ಡಾ||ಪುನೀತ್‌ ರಾಜ್‌ ಕುಮಾರ್‌(Puneeth Rajkumar) ಅವರು ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾದ್ರು. ಇನ್ನು ಪುನೀತ್ ಅವರ ನಿಧನಕ್ಕೆ ಕರ್ನಾಟಕ ಮಾತ್ರವಲ್ಲದೇ ಇಡೀ ರಾಷ್ಟ್ರವೇ ಕಂಬನಿ ಮಿಡಿದಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಅಂತ ಒಳ್ಳೆ ವ್ಯಕ್ತಿ ಇನ್ನಿಲ್ಲವದ್ರಲ್ಲ ಅಂತ ಪ್ರತಿಯೊಬ್ಬರೂ ಕಣ್ಣೀರು ಸುರಿಸಿದ್ರು ಅದಾದ ಬಳಿಕ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸಾಕಷ್ಟು ಒಳ್ಳೊಳ್ಳೆ ಕೆಲಸ ಕಾರ್ಯಗಳನ್ನ ಅವ್ರ ಅಭಿಮಾನಿಗಳು ಮಾಡುತ್ತ ಬಂದಿದ್ರು ಅದೇ ನಿಟ್ಟಿನಲ್ಲಿ ಇದೀಗ ಅವರ ಹೆಸರಿನಲ್ಲಿ ಯೋಜನೆಯೊಂದನ್ನು ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥವಾಗಿ ಹಠಾತ್‌ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಅಥವಾ ಎಇಡಿ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಸಲಾರ್ ಟೀಸರ್ ನೋಡಿ ಟ್ವೀಟ್ ಮಾಡಿದ ಕಿಚ್ಚ ಸುದೀಪ್; ಟೀಸರ್ ಬಗ್ಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಹೃದಯಾಘಾತ ತಡೆಯಲು ರಾಜ್ಯ ಸರ್ಕಾರದಿಂದ ಹೊಸ ಪ್ಲಾನ್

ಹೌದು ಪುನೀತ್ ರಾಜಕುಮಾರ್ ಸ್ಮರಣಾರ್ಥ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಸರ್ಕಾರ 6 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಹಠಾತ್‌ ಹೃದಯಾಘಾತ ತಪ್ಪಿಸಲು ಆಸ್ಪತ್ರೆಗಳಲ್ಲಿ ಎಇಡಿ ವ್ಯವಸ್ಥೆ ಮಾಡಲಾಗುತ್ತದೆ ಮತ್ತು, ಉಚಿತ ಸ್ಕ್ಯಾನಿಂಗ್ ಸೇವೆಗಳನ್ನು ಒದಗಿಸುವ ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 15 CT ಮತ್ತು 6 MRI ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಲಿದ್ದು ಈ ಸೇವೆಗಳನ್ನು ಈಗ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಹೌದು ಹೃದಯಾಘಾತ ತಡೆಯಲು ಅಪ್ಪುಹೆಸರಿನಲ್ಲಿ ಸ್ವಯಂಚಾಲಿತ ಆರೋಗ್ಯ ಯಂತ್ರವನ್ನ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಠಾತ್‌ ಹೃದಯ ಸಂಬಂಧ ಸಾವುಗಳನ್ನು ತಡೆಗಟ್ಟಲು ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು ಅಂತ ಸಿಎಂ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಇದಕ್ಕಾಗಿ ಆರು ಕೋಟಿ ರೂಪಾಯಿ ಅನುದಾನವನ್ನು ಸಹ ನೀಡಲಾಗುವುದು ಅಂತ ಘೋಷಿಸುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಪುನೀತ್ ಅವರ ಹೆಸರು ಅಜರಾಮರವಾಗಿ ಇಡುವಂತ ಕಾರ್ಯಕ್ಕೆ ಕೈ ಹಾಕಿದ ಸರ್ಕಾರ

ಹೌದು ಈ ಬಾರಿಯ ಬಜೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರ ಪವರ್‌ಸ್ಟಾರ್‌ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಅಜರಾಮರವಾಗಿ ಇಡುವಂತಹ ಕಾರ್ಯಕ್ಕೆ ಕೈ ಹಾಕಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಅತ್ಯುತ್ತಮ ಯೋಜನೆಯನ್ನ ಜಾರಿಗೊಳಿಸಲು ಪಣ ತೊಟ್ಟಿದ್ದೆ. ಹೀಗಾಗಿ ರಾಜ್ಯದಲ್ಲಿ 15 ಸಿಟಿ ಸ್ಕ್ಯಾನಿಂಗ್‌ ಮತ್ತು ಆರು ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರಗಳನ್ನು ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಈಗಾಗಲೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಿ, ಉಚಿತ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುತ್ತಿದೆ. ಈ ಸೇವೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಅಸ್ಪತ್ರೆಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ ಜೊತೆಗೆ ಇದೇ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದ್ರೆ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್‌ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು ಈಗಾಗಲೇ ಅಸ್ತಿತ್ವದಲ್ಲಿರುವ 173 ಡಯಾಲಿಸಿಸ್‌ ಕೇಂದ್ರಗಳನ್ನ 219 ಹೆಚ್ಚಿಸಿ ಆದೇಶ ಹೊರಡಿಸಿದ್ದು, ಇದಕ್ಕಾಗಿಯು ಬಜೆಟ್‌ನಲ್ಲಿ 92 ಕೋಟಿ ರೂಪಾಯಿ ಒದಗಿಸಲಾಗುತ್ತದೆ ಅಂತ ರಾಜ್ಯದ ಜನತೆಗೆ ಸಿದ್ದು ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram