Siddaramaiah wife: ಸಿದ್ದರಾಮಯ್ಯ ಅವರ ಹೆಂಡತಿ ಫೋಟೋವನ್ನ ಪೋಲೀಸರು ಡಿಲೀಟ್ ಮಾಡಿಸಿದ್ಯಾಕೆ?

ಕರ್ನಾಟಕದಲ್ಲಿ ಜಾತಿ, ಧರ್ಮ, ಮತ ಭೇದಗಳನ್ನ ಹೊರತುಪಡಿಸಿ ಹೇಳುವುದಾದ್ರೆ ಯಾವುದೇ ಅಕ್ರಮ ಆಸ್ತಿ ಚಿಂತೆ ಇಲ್ಲದೆ ಇನ್ಕಮ್ ಟ್ಯಾಕ್ಸ್ ಭಯ ಇಲ್ಲದೆ ರಾತ್ರಿ ನೆಮ್ಮದಿಯಿಂದ ಮಲಗುವ ಕೆಲವೇ ಕೆಲವು ನಾಯಕರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಬ್ಬರು. ಹೌದು ಕರ್ನಾಟಕ ದಲ್ಲಿ ರಾಜಕೀಯವಾಗಿ ಮನಸಾಕ್ಷಿಯಿಂದ ಪ್ರಾಮಾಣಿಕ ಕೆಲಸ ಮಾಡುವವರಲ್ಲಿ ಇವರು ಒಬ್ಬರು. ಆದ್ರೆ ಮಾತು ಸ್ವಲ್ಪ ಒರಟಾದರೂ ಇವರ ಹೃದಯ ಮಾತ್ರ ಹೂವಿನಂತದ್ದು. ಹೌದು ಕರ್ನಾಟಕದ ಮಾಜಿ ಸಿಎಂ ಆಗಿದ್ರು ಇವ್ರ ಮಕ್ಕಳನ್ನ ಹೊರತುಪಡಿಸಿದ್ರೆ ಸ್ವತಃ ಇವ್ರ ಧರ್ಮಪತ್ನಿ ಅವರನ್ನು ಕೂಡ ಬಹುಶ ನಾವೆಲ್ಲಿಯೂ ನೋಡಿರ್ಲಿಕ್ಕಿಲ್ಲ. ಗೂಗಲ್ ನಲ್ಲಿಯೂ ಸಹ ಇವ್ರ ಮಡದಿಯ ಫೋಟೋ ಸಿಗೋದು ಬಹಳ ಕಷ್ಟ. ಸಿಕ್ಕಿರುವ ಒಂದು ಅಥವಾ ಎರಡು ಫೋಟೋಗಳಷ್ಟೇ ಕಣ್ಣಿಗೆ ಕಾಣೋದು.

WhatsApp Group Join Now
Telegram Group Join Now

ಮೈಸೂರು ಜಿಲ್ಲೆ ವರುಣ ಹೋಬಳಿಯ ಸಿದ್ದರಾಮನ ಹುಂಡಿ ಅನ್ನೋ ಒಂದು ಚಿಕ್ಕ ಹಳ್ಳಿ ಯಲ್ಲಿ ರೈತನ ಮಗನಾಗಿ ಸಿದ್ದರಾಮಯ್ಯ ಅವ್ರ ಜನನವಾಗುತ್ತೆ. ವಿಶೇಷ ಎಂಬಂತೆ ಸಿದ್ದರಾಮಯ್ಯ ಅವ್ರು ಅವ್ರಿಗೆ ಹತ್ತು ವರ್ಷದ ಆಗೋವರೆಗೂ ಶಾಲೆಗೆ ಹೋಗಿಲ್ಲ. ನಂತರ ನೇರವಾಗಿ 5ನೇ ತರಗತಿಗೆ ಪ್ರವೇಶ ಪಡೆದು ಶಾಲೆಗೆ ಕಾಲಿಡುತ್ತಾರೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ LLB ಮಾಡಿ ಜೂನಿಯರ್ ಲಾಯರ್ ಆಗಿ ಕೆಲಸ ವನ್ನ ಪ್ರಾರಂಭ ಮಾಡ್ತಾರೆ. ಕೆಲವರ ಪ್ರಭಾವ ದಿಂದ ಅಂದ್ರೆ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿ ಕೊಂಡು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ. ಸಾಕಷ್ಟು ಏಳು ಬೀಳುಗಳ ನಂತರವೇ ಕೊನೆಗು ಹಠ ಬಿಡದೆ ಕರ್ನಾಟಕದ ಪೂರ್ಣವಧಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಹೌದು 1970 ರ ದಶಕದಲ್ಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಂದ್ರೆ ಕೆಪಿಸಿಸಿ ಸದಸ್ಯರಾಗಿ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನ ವನ್ನು ಪ್ರಾರಂಭ ಮಾಡ್ತಾರೆ. ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದು,1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ದಿಂದ ಸ್ಪರ್ದಿಸಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ್ರು. ಇನ್ನು ಅನೇಕ ಬಾರಿ ವಿಧಾನಸಭೆಗೆ ಆಯ್ಕೆಯಾಗಿ ರಾಜ್ಯ ಸರ್ಕಾರ ದಲ್ಲಿ ಹಣಕಾಸು, ಗ್ರಾಮೀಣಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಖಾತೆಗಳು ಸೇರಿದಂತೆ ವಿವಿಧ ಸಚಿವ ಖಾತೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ 2013 ರಲ್ಲಿ, ಸಿದ್ದರಾಮಯ್ಯ ಅವರು ಕರ್ನಾಟಕ ದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ನಂತರ ರಾಜ್ಯದ 22 ನೇ ಮುಖ್ಯಮಂತ್ರಿಯು ಆಗ್ತಾರೆ. ಇದೀಗ ಕಾಂಗ್ರೆಸ್ ಪಕ್ಷ ದಲ್ಲಿ ಪ್ರಮುಖ ನಾಯಕರಾಗಿ ಮುಂದುವರೆದಿದ್ದು ಪ್ರಸ್ತುತ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟ ನಟಿ ಕವಿತಾ ಗೌಡ.! ಮದುವೆ ಸುಂದರ ಕ್ಷಣಗಳು!

ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಮಾಡಿದ ಕೆಲಸಗಳು

ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಬಹಳ ಜನಪರ ಕೆಲಸಗಳನ್ನ ಮಾಡಿದ್ದು ಅತ್ಯುತ್ತಮ ಯೋಜನೆ ಗಳನ್ನ ಜಾರಿಗೆ ತಂದಿದ್ದು ಜನಮೆಚ್ಚಿದ ನಾಯಕರಾಗಿಯೂ ತಮ್ಮ ಸೇವೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಈಗಲೂ ಸಿದ್ದರಾಮಯ್ಯ ಅವ್ರ ಜನ ಪ್ರಿಯ ಯೋಜನೆಗಳು ಜನರ ಮನಸ್ಸಿನಲ್ಲಿ ಹಾಗೆ ಉಳಿದಿವೆ. ಹೌದು ಇವ್ರ ಅಧಿಕಾರವಧಿಯಲ್ಲಿ ಬಡವರಿಗೆ ಸಬ್ಸಿಡಿ ದರದಲ್ಲಿ ಅನ್ನ ಭಾಗ್ಯ ಯೋಜನೆ, ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ ಸೇರಿದಂತೆ ರಾಜ್ಯದ ಜನತೆಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅಲ್ದೆ ಬೆಂಗಳೂರು ಮೆಟ್ರೋ ನಿರ್ಮಾಣ ಮತ್ತು ರಾಜ್ಯದ ವಿಮಾನ ನಿಲ್ದಾಣಗಳ ಅಭಿವೃದ್ಧಿ ಸೇರಿ ದಂತೆ ರಾಜ್ಯದಲ್ಲಿ ಹಲವಾರು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭ ಮಾಡಿ ಜನಪ್ರಿಯ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡು 5ವರ್ಷಗಳ ಪೂರ್ಣ ಅವಧಿಯ ನಾಯಕನಾಗಿ ಜನಪ್ರಿಯರಾದ್ರು.

ಇಷ್ಟೆಲ್ಲ ಸಾಧನೆ ಜನಪ್ರಿಯತೆ ಪಡೆದಿರುವ ಸಿದ್ದರಾಮಯ್ಯ ಕುಟುಂಬದವರು ಮೀಡಿಯಾ ಮುಂದೆ ಬರೋದು ತುಂಬಾ ವಿರಳದಲ್ಲಿ ವಿರಳ. ಹೌದು ಇವರ ಕುಟುಂಬದ ಯಾರು ಕ್ಯಾಮರಾ ಮುಂದೆ ಹೆಚ್ಚಾಗಿ ಬರುವುದಿಲ್ಲ. ಅದರಲ್ಲೂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಒಂದು ಬಾರಿಯೂ ಮೀಡಿಯಾ ಮುಂದೆ ಬಂದಿಲ್ಲ. ಅಲ್ದೆ ತಮ್ಮ ಪತಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡೋವಾಗ್ಲೂ ಕೂಡ ಪಾರ್ವತಿ ಅವ್ರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲು ಅಷ್ಟೇ ಒಮ್ಮೆಯೂ ವಿಧಾನಸೌಧದ ಮೆಟ್ಟಿಲು ಸಹ ಹತ್ತಿಲ್ಲ.. ಪತಿ ಅಧಿಕಾರದಲ್ಲಿದ್ರೆ ತಮ್ಮದೇ ದರ್ಬಾರ್ ನಡೆಸುವ ಎಷ್ಟೋ ರಾಜಕೀಯ ನಾಯಕರ ಪತ್ನಿಯರ ಮಧ್ಯೆ ಸಾಮಾನ್ಯ ಮಹಿಳೆಯಂತೆ ಜೀವನ ನಡೆಸುವ ಪಾರ್ವತಿ ಅವ್ರು ಎಲ್ಲರಿಗೂ ಮಾದರಿ ಅಂದ್ರೆ ತಪ್ಪಿಲ್ಲ.

ಇದರ ಮಧ್ಯೆ ಇನ್ನೊಂದು ಇಂಟರ್ಸ್ಟ್ಟಿಂಗ್ ವಿಷಯ ಏನ್ ಗೊತ್ತಾ ನಿಮಗೆ ಆಗ್ಲೇ ಹೇಳಿದ ಹಾಗೆ ಪಾರ್ವತಿ ಅವ್ರು ಎಲ್ಲಿಯೂ ಕಾಣಿಸಿಕೊಳ್ಳಲ್ಲ ಅದರಲ್ಲೂ ಮೀಡಿಯಾ ದಿಂದ ಅವ್ರು ತುಂಬಾ ದೂರ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕು ಬರುವಂತೆ ಸಿದ್ದರಾಮಯ್ಯ ಹೇಳಿದ್ರಂತೆ ಆದ್ರೆ ಪಾರ್ವತಿ ಅವ್ರು ಅದನ್ನ ನಿರಾಕರಿಸಿ ಕಾರ್ಯಕ್ರಮಕ್ಕೂ ಹೋಗಿಲ್ವಂತೆ. ಅಲ್ದೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಲ್ಲಿ ಸಿದ್ದರಾಮಯ್ಯ ಸಾಧಕರ ಖುರ್ಚಿಯಲ್ಲಿ ಕುಳಿತಾಗಲು ವೀಕೆಂಡ್ ತಂಡ ಎಷ್ಟೇ ಪ್ರಯತ್ನ ಮಾಡಿದ್ರು ಪಾರ್ವತಿ ಅವ್ರನ್ನ ಕರೆ ತರೋದು ಸಾಧ್ಯವಾಗಲೇ ಇಲ್ಲ.. ಹೌದು ತುಂಬಾ ನಾಚಿಕೆ ಸ್ವಭಾವದವರಾಗಿರುವ ಪಾರ್ವತಿ ಯವರು ಹೊರಗಡೆ ಬರೋದು ತೀರಾ ವಿರಳ ಬಂದರು ಸಾಮಾನ್ಯ ಮಹಿಳೆ ಯಂತೆ ಬಂದು ಕೆಲಸ ಮುಗಿಸಿ ಮನೆ ಸೇರಿಕೊಂಡು ಬಿಡುತ್ತಾರೆ.

ಸಿದ್ದರಾಮಯ್ಯ ಪತ್ನಿ ಫೋಟೋ ತೆಗೀಬಾರದು ಯಾಕ್ ಗೊತ್ತಾ?

ಜೊತೆಗೆ ಸಿದ್ದರಾಮಯ್ಯ ಅವ್ರ ಜೊತೆಗೆ ಒಮ್ಮೆ ಚಾಮುಂಡೇಶ್ವರಿ ಅಮ್ಮ ನವರ ದರ್ಶನ ಪಡೆಯಲು ಹೋಗಿದ್ದಾಗ ಅವ್ರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಯಿತ್ತಂತೆ ಆದ್ರೂ ಪಾರ್ವತಿ ಅವ್ರು ಸಾಮಾನ್ಯರಂತೆ ನಿಂತು ದೇವಿಯ ದರ್ಶನ ಪಡೆದಿದ್ರಂತೆ ಆಗ ಮೀಡಿಯಾ ದವರಿಗೆ ವಿಷಯ ಗೊತ್ತಾಗಿ ಫೋಟೋ ಗಳನ್ನ ಕ್ಲಿಕ್ಕಿಸಿದ್ರಂತೆ ಇದು ಪೊಲೀಸ್ ನವರಿಗೆ ಗೊತ್ತಾಗಿ ಮೀಡಿಯಾದವರ ಜೊತೆ ಮಾತಾಡಿ ಫೋಟೋ ಡಿಲೀಟ್ ಮಾಡಿಸೋದ್ರಾ ಒಳಗೆ ಪಾರ್ವತಿ ಅವ್ರು ಅಲ್ಲಿಂದ ಮಾಯಾವಾಗಿ ಬಿಟ್ಟಿದ್ರು. ಅಷ್ಟು ನಾಚಿಕೆ ಸ್ವಭಾವದ ವ್ಯಕ್ತಿ ಪಾರ್ವತಿ ಯವರು. ಹೀಗಾಗಿಯೇ ಸಿದ್ದರಾಮಯ್ಯ ಅವ್ರು ಸಹ ಮಡದಿಯನ್ನ ಯಾವ ಕಾರ್ಯಕ್ರಮಕ್ಕೂ ಕರೆಯೋದು ಇಲ್ಲ, ಬರುವಂತೆ ಒತ್ತಾಯ ಮಾಡೋದು ಇಲ್ಲ.

ಶ್ರೀಮತಿ ಪಾರ್ವತಿ ಅವ್ರ ಹೆಸರಲ್ಲಿರುವ ಆಸ್ತಿ ಎಷ್ಟು?

ಇನ್ನು ಇಷ್ಟು ನಾಚಿಕೆ ಸ್ವಭಾದವರಾಗಿರುವ, ಮನೆ ಬಿಟ್ಟು ಬಾರದ ಪಾರ್ವತಿಯವರ ಆಸ್ತಿ ಅಂದ್ರೆ ಅವ್ರ ಹೆಸರಲ್ಲಿ ಎಷ್ಟು ಆಸ್ತಿ ಇರಬಹು ಅನ್ನೋ ಸಾಮಾನ್ಯ ಕುತೂಹಲ ಎಲ್ಲರಲ್ಲೂ ಇರುತ್ತದೆ.ಇದರ ಬಗ್ಗೆ ಹೇಳೋದಾದ್ರೆ ಸಿದ್ದರಾಮಯ್ಯ ಅವ್ರ ಮಡದಿ ಪಾರ್ವತಿ ಅವ್ರ ವಾರ್ಷಿಕ ಆದಾಯ 1ಲಕ್ಷದ 92ಸಾವಿರ ರೂಪಾಯಿ ಇದೆ. ಹಾಗೂ ಇವ್ರ ಹೆಸರಲ್ಲಿ 40ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಸೇರಿದಂತೆ 7ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಅಂತ ಸ್ವತಃ ಸಿದ್ದರಾಮಯ್ಯ ಅವ್ರೇ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಸ್ನೇಹಿತರೆ ಅಧಿಕಾರ ಇದೆ ಅಂತ ದರ್ಪ ಮಾಡಿ, ಅಧಿಕಾರ ದುರ್ಬಳಕೆ ಮಾಡ್ಕೊಂಡು ಮೋಜು ಮಸ್ತಿ ಮಾಡೋರ ಮಧ್ಯೆ ಸಿದ್ದರಾಮಯ್ಯ ಅವ್ರ ಮಡದಿ ನಿಜಕ್ಕೂ ಗ್ರೇಟ್ ಅಲ್ವಾ..

ಇದನ್ನೂ ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?