ಸಾಮಾನ್ಯವಾಗಿ ಎಲ್ಲರ ಬಳಿಯೂ ಎರಡು ಸಿಮ್ ಇರುತ್ತದೆ. ಕೆಲವೊಬ್ಬರು ಬ್ಯುಸಿನೆಸ್ ವಿಷಯಕ್ಕೆ ಒಂದು ಸಿಮ್ ಕಾರ್ಡ್ ಹಾಗೂ ಪರ್ಸನಲ್ ವಿಷಯಕ್ಕೆ ಒಂದು ಸಿಮ್ ಕಾರ್ಡ್ ಎಂದು ಉಪಯೋಗಿಸುತ್ತಾರೆ. ಹಾಗೆಯೇ ಕೆಲವರು ಆಫರ್ ಗಳು ಇವೆ ಎಂಬ ಕಾರಣಕ್ಕೆ ಒಂದು ಸಿಮ್ ಇನ್ನೊಂದು ದಾಖಲಾತಿಗಳಲ್ಲಿ ಇದೆ ಸಂಖ್ಯೆ ಇದೆ ಎಂದು ಇನ್ನೊಂದು ಸಿಮ್ ಹೀಗೆ ಅವರದ್ದೇ ಆದ ಕಾರಣಗಳಿಗೆ ಎರಡು ಕಂಪನಿಯ ಸಿಮ್ ಬಳಸುತ್ತಾರೆ. ಅಂತವರಿಗೆ ಈ ಸುದ್ದಿ ನಿಜಕ್ಕೂ ಶಾಕಿಂಗ್ ಆಗುತ್ತದೆ.
ಎರಡೆರಡು ಸಿಮ್ ಹೊಂದಿದ್ದರೆ ಹೆಚ್ಚು ಸುಂಕ ಕಟ್ಟಬೇಕು? ಹೌದು ಇಷ್ಟು ದಿನ ನೀವು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ರೀಚಾರ್ಜ್ ಮಾಡಿಸುತ್ತಿದ್ದೀರಿ. ಎರಡು ಸಿಮ್ ಕಾರ್ಡ್ ಇದ್ದರೂ ನಿಮಗೆ ಇದು ಹೊರೆ ಆಗಿರಲಿಲ್ಲ. ಆದರೆ ಇನ್ನೂ ಮುಂದೆ ಪ್ರತಿ ಸಿಮ್ ಕಾರ್ಡ್ ಗೆ ನೀವು ಹೆಚ್ಚಿನ ರೀಚಾರ್ಜ್ ಮಾಡಿಸುವ ಮೊತ್ತದ ಜೊತೆಗೆ ಹೆಚ್ಚಿನ ಸುಂಕ ಪಾವತಿಸಬೇಕು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಯಾವ ಯಾವ ಕಂಪನಿಗಳ ಸಿಮ್ ಗೆ ಹೆಚ್ಚಿನ ಸುಂಕ ನೀಡಬೇಕಾಗಬಹುದು?
ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಹಾಗೂ ಐಡಿಯಾ ಟೆಲಿಕಾಂ ಕಂಪನಿಗಳು ಹೆಚ್ಚಿನ ಸುಂಕ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಸುಂಕ ಮುಂದಿನ ಕೆಲವು ತಿಂಗಳುಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೇ ಜೊತೆಗೆ ಟೆಲಿಕಾಂ ಸಂಸ್ಥೆಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳ ಮೊತ್ತವನ್ನು ಹೆಚ್ಚಿಸಬಹುದು ಎಂದು ಉದ್ಯಮ ತಜ್ಞರು ಹೇಳಿಕೆ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಿಮ್ ಸಕ್ರಿಯವಾಗಿ ಇಡಲು ಹೆಚ್ಚಿನ ಹಣ ಪಾವತಿಸಬೇಕು :- ನೀವು ಎರಡು ಸಿಮ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ನೀವು ಸಿಮ್ ಅನ್ನು ಸಕ್ರಿಯವಾಗಿಡಲು ಹೆಚ್ಚಿನ ಮೊತ್ತದ ರೀಚಾರ್ಜ್ ಮಾಡಿಸಬಲಾಗುತ್ತದೆ. ಈಗಾಗಲೇ , ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ active ಆಗಿ ಇರ್ಬೇಕು ಎಂದರೆ ನೀವು ಕನಿಷ್ಠ 150 ರೂಪಾಯಿ ಪಾವತಿಸಬೇಕು. ಇದರ ಜೊತೆಗೆ ಸುಂಕ ಹೆಚ್ಚಳ ಆದರೆ ನಂತರ ಸಿಮ್ ಅನ್ನು ಆಕ್ಟಿವೇಟ್ ಮಾಡಿಸಲು ನೀವು 180 ರಿಂದ 200 ರೂಪಾಯಿಗಳ ವರೆಗೆ ಕನಿಷ್ಠ ಹಣ ಪಾವತಿಸಬೇಕಾಗುತ್ತದೆ. ನೀವು ಎರಡು ಸಿಮ್ ಹೊಂದಿದ್ದರೆ ತಿಂಗಳಿಗೆ ಕನಿಷ್ಠ 400 ರೂಪಾಯಿಗಳನ್ನು ಸಿಮ್ ಆಕ್ಟಿವ್ ಆಗಿ ಇರಿಸಲು ಪಾವತಿಸಬೇಕು.
ಇದನ್ನೂ ಓದಿ: ಯಾವುದೇ ಪರೀಕ್ಷೆ ಇಲ್ಲದೆಯೇ KREIS ವಸತಿ ಶಾಲೆಗಳಲ್ಲಿ ಬರೋಬ್ಬರಿ 20,000 ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಟೆಲಿಕಾಂ ಸಂಸ್ಥೆಗಳು 5g recharge ಪ್ಲಾನ್ ಆರಂಭಿಸುವ ಸಾಧ್ಯತೆ ಇದೆ:-
ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಹಾಗೂ ಏರ್‌ಟೆಲ್ ಕಂಪನಿಗಳು ಅತಿ ಶೀಘ್ರದಲ್ಲೇ 5G ರೀಚಾರ್ಜ್ ಯೋಜನೆಯನ್ನು ಆರಂಭ ಮಾಡುವ ಸಾಧ್ಯತೆ ಕಂಡುಬಂದಿದೆ. ಈಗ ಎರಡು ಟೆಲಿಕಾಂ ಸಂಸ್ಥೆಗಳು 5ಜಿ ಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿವೆ. ಉಚಿತ ಎಂದರೆ ಹೆಚ್ಚಿನ ದರ ಇಲ್ಲ. ನೀವು 4ಜಿ ಸಿಮ್ ಗೆ ಏಷ್ಟು ಹಣ ಪಾವತಿ ಮಾಡಬೇಕೋ ಅಷ್ಟೇ ಬೆಲೆಯಲ್ಲೇ 5ಜಿ ಕೂಡ ಲಭ್ಯವಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ 5g ಸಿಮ್ ಗೆ ಹೆಚ್ಚಿನ ಹಣವನ್ನು ನೀಡಬೇಕಾಗುವ ಸಾಧ್ಯತೆ ಇದೆ ಎಂದು ತಜ್ನರ ಅಭಿಪ್ರಾಯ ಆಗಿದೆ. ಹಾಗಾದರೆ 5g ಸಿಮ್ ಉಪಯೋಗ ಮಾಡುತ್ತಿರುವರು ಇನ್ನು ಹೆಚ್ಚಿನ ಮೊತ್ತದ ರೀಚಾರ್ಜ್ ಮಾಡಿಸಬೇಕು.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲಾತಿಗಳು ಬೇಕೆ ಬೇಕು