ಹಲವಾರು ಸಂಘ ಸಂಸ್ಥೆಗಳು, ಟ್ರಸ್ಟಿಗಳು, ಧಾರ್ಮಿಕ ಕ್ಷೇತ್ರಗಳು ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತೆ ಸಾಮೂಹಿಕ ಮದುವೆಯನ್ನು ಮಾಡುತ್ತಾರೆ. ಹಿಂದುಳಿದ ಸಮಾಜದ ಬಗ್ಗೆ ಹೆಚ್ಚಿನ ಕನಿಕರ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಲಿತ ಸಂಘಟನೆಗಳ ಮುಖಂಡರ ಜೊತೆಗೆ 2024-2025 ನೇ ಸಾಲಿನ ಸರಳ ವಿವಾಹ ಯೋಜನೆಯ(Simple Marriage Scheme) ಬಗ್ಗೆ ಚರ್ಚಿಸಲಾಯಿತು.
ಸರಳ ವಿವಾಹ ಯೋಜನೆಯಲ್ಲಿ ಸಾಮೂಹಿಕ ಮದುವೆ ಆಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ 50,000 ಸಹಾಯಧನವನ್ನು ಸರ್ಕಾರ ನೀಡುತ್ತದೆ . ಸರಳ ವಿವಾಹ ಯೋಜನೆಯು 2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸರಕಾರ ಘೋಷಣೆ ಮಾಡಿತ್ತು. ಈ ಹಣವೂ ವಧು ವರರ ಜಾಯಿಂಟ್ ಅಕೌಂಟ್ ಗೆ ಜಮಾ ಆಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಿಎಂ ಸ್ವ ನಿಧಿ ಯೋಜನೆಯಿಂದ ಬೀದಿ ವ್ಯಾಪಾರಿಗಳಿಗೆ 50,000 ರೂಪಾಯಿಗಳ ವರೆಗೆ ಸಾಲ ಸಿಗಲಿದೆ.
ಸರಳ ವಿವಾಹ ಯೋಜನೆಯ ಷರತ್ತುಗಳು :-
- ದಂಪತಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ್ದು, ಸಾಮೂಹಿಕ ವಿವಾಹ ಆಗಿರಬೇಕು.
- ಸಾಮೂಹಿಕ ವಿವಾಹದಲ್ಲಿ ಕನಿಷ್ಟ 10 ಜೋಡಿಗಳು ಇರಬೇಕು.
- ವಧುವಿಗೆ ಕನಿಷ್ಟ 18 ವರ್ಷ ಹಾಗೂ ವರನಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು. ಬಾಲ್ಯ ವಿವಾಹ ನಿಷೇಧ.
- ಇಬ್ಬರ ವಾರ್ಷಿಕ ಆದಾಯದ ಒಟ್ಟು ಮೊತ್ತ 2 ಲಕ್ಷ ಮೀರಬಾರದು.
- ಜೀವನದಲ್ಲಿ ಒಮ್ಮೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಎರಡನೇ ಮದುವೆ ಅಥವಾ ಮರು ಮದುವೆಗೆ ಈ ಯೋಜನೆ ಲಭ್ಯವಿಲ್ಲ.
- ಜಿಲ್ಲಾ ನೋಂದಣಿ ಕಛೇರಿಯಲ್ಲಿ ಈಗಾಗಲೇ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್ ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವಂತೆ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು ಹಾಗೂ ಸಮಸ್ಯೆಗಳು ವಿವಾಹ ಆಯೋಜಕರು ಇಲಾಖೆಗೆ ವಿವಾಹ ನೋಂದಣಿ ಪಾತ್ರವನ್ನು ಸಲ್ಲಿಸಿರಬೇಕೂ.
- ಮದುವೆ ಆದ ಬಳಿಕ ವಿಳಾಸದ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು.
- ಆಯೋಜನರಿಂದ ಸಾಮೂಹಿಕ ವಿವಾಹ ಫೋಟೋ ಪಡೆದುಕೊಂಡು ಅರ್ಜಿಯ ಜೊತೆಗೆ ಲಗತ್ತಿಸಬೇಕು.
- ಬೇರೆ ಬೇರೆ ಜಾತಿಯ ವಧು ವರರು ವಿವಾಹ ಆಗುತ್ತಿದ್ದರೆ ಅಂತರ್ ಜಾತಿ ವಿವಾಹದ ಪ್ರೋತ್ಸಾಹ ಧನಕ್ಕೆ ಇಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ಇದನ್ನೂ ಓದಿ: ನಿರುದ್ಯೋಗಿ ಯುವಕ ಯುವತಿಯರಿಗೆ ಸರ್ಕಾರದಿಂದ ರಾಜ್ಯ ಮಟ್ಟದ ಉದ್ಯೋಗ ಮೇಳದ ನೋಂದಣಿ ಕಾರ್ಯ ನಡೆಯುತ್ತಿದೆ. ಈಗಲೇ ರಿಜಿಸ್ಟರ್ ಆಗಿ.
ಇದನ್ನೂ ಓದಿ: ಉದ್ಯೋಗಿಗಳಿಗೆ ಸಿಹಿ ಸುದ್ದಿ, EPF ಬಡ್ಡಿ ದರದಲ್ಲಿ ಶೇಕಡ 8.25 ರಷ್ಟು ಹೆಚ್ಚಳ