ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂದರೆ ಪಾಸ್ ಪೋರ್ಟ್ ಹಾಗೂ ವೀಸಾ ಬಹಳ ಮುಖ್ಯ. ಯಾವುದೇ ದೇಶದ ಏಷ್ಟು ಪ್ರತಿಷ್ಠಿತ ವ್ಯಕ್ತಿ ಆಗಿದ್ದರೂ ಸಹ ಇದು ನಿಯಮ. ಆದರೆ ಭಾರತದ ನಾಗರಿಕರಿಗೆ ಪಾಸ್ಪೋರ್ಟ್ ಒಂದು ಇದ್ದರೆ ಕೆಲವು ದೇಶಗಳು ಪ್ರಯಾಣ ಮಾಡಲು ಅನುಮತಿ ನೀಡುತ್ತದೆ. ಹಾಗಾದರೆ ಅದು ಯಾವ ಯಾವ ದೇಶಗಳು ಎಂಬ ಕುತೂಹಲ ನಿಮಗೆ ಇದ್ದರೆ ಈ ಲೇಖನವನ್ನು ಪೂರ್ತಿ ಓದಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವೀಸಾ ಮುಕ್ತ ದೇಶಗಳು ಹಾಗೂ ಏಷ್ಟು ದಿನದ ವೀಸಾ ಮುಕ್ತ ಪ್ರಯಾಣಕ್ಕೆ ಅನುಮತಿ ಸಿಗುತ್ತದೆ ಎಂಬ ಪಟ್ಟಿ ಇಲ್ಲಿದೆ:-
1) ಇರಾನ್:- ಇರಾನ್ ಒಂದು ಮುಸ್ಲಿಂ ದೇಶ. ಪಶ್ಚಿಮ ಏಷ್ಯಾ ಖಂಡದ ಒಂದು ದೇಶವಾಗಿದೆ. ಇರಾನ್ ದೇಶದಲ್ಲಿ ಪ್ರಾಚೀನ ಸ್ಥಳಗಳು, ಪರ್ಷಿಯನ್ ಇತಿಹಾಸದ ಸ್ಥಳಗಳು ಹಾಗೂ ರೋಮಾಂಚಕ ಬಜಾರ್‌ಗಳನ್ನು ಅನ್ವೇಷಣೆ ಮಾಡಬಹುದು. ಇಲ್ಲಿನ ವಾಸ್ತುಶಿಲ್ಪ ಬಹಳ ಅದ್ಭುತವಾಗಿದೆ. ಈ ಕಾರಣಕ್ಕೆ ಪ್ರವಾಸಕ್ಕೆ ಭಾರತೀಯರು ಇರಾನ್ ದೇಶಕ್ಕೆ ಹೋಗುತ್ತಾರೆ. ಅಂತಾ ಭಾರತೀಯ ಪ್ರವಾಸಿಗರಿಗೆ ಇರಾನ್ ದೇಶವು 15 ದಿನಗಳವರೆಗೆ ವೀಸಾ-ಮುಕ್ತ ಪ್ರಯಾಣಕ್ಕೆ ಅನುಮತಿ ನೀಡಿದೆ.
2) ಮಲೇಷ್ಯಾ :- ಇದು ಸಹ ಪಶ್ಚಿಮ ಏಷ್ಯಾ ಖಂಡದ ಒಂದು ದೇಶವಾಗಿದೆ. ಮಲೇಷ್ಯಾದ ಉಷ್ಣವಲಯದ ಸ್ವರ್ಗದ ಕಡಲತೀರಗಳು, ಮಳೆಕಾಡುಗಳು ನೋಡಲು ಬಲು ಸುಂದರ. ಹಾಗೂ ಇಲ್ಲಿ ನಗರಗಳು ಬಹಳ ಗಲಭೆಯಿಂದ ಕೂಡಿರುತ್ತದೆ. ಮಲೇಷಿಯಾದ ಪ್ರಾಚೀನ ಆಹಾರವು ಬಹಳ ರುಚಿಕರವಾಗಿತ್ತವೆ. ವೈವಿಧ್ಯಮಯ ಸಂಸ್ಕೃತಿಗಳನ್ನು ಅನ್ವೇಷಣೆ ಮಾಡಬಹುದು. 30 ದಿನಗಳ ಕಾಲ ಮಲೇಷಿಯಾ ದೇಶದ ವೀಸಾ-ಮುಕ್ತ ಪ್ರಯಾಣಕ್ಕೆ ಅನುಮತಿ ಇದೆ.
3)ಕೀನ್ಯಾ:- ಇದು ಆಫ್ರಿಕಾ ಖಂಡದ ಒಂದು ದೇಶವಾಗಿದೆ. ಕೀನ್ಯಾ ದೇಶದಲ್ಲಿ ವನ್ಯಜೀವಿ ಸಫಾರಿಗೆ ಹೋಗುವ ಸಲುವಾಗಿ ಈ ದೇಶಕ್ಕೆ ಪ್ರವಾಸಿಗರು ಹೋಗುತ್ತಾರೆ. ಇಲ್ಲಿ ಸಿಂಹಗಳು, ಜಿರಾಫೆಗಳು ಮತ್ತು ಜೀಬ್ರಾಗಳು ಮುಕ್ತವಾಗಿ ವಿಹರಿಸುವ ದೃಶ್ಯ ನೀಡುವುದು ಕಣ್ಣಿಗೆ ಒಂದು ಹಬ್ಬ.. ಕೀನ್ಯಾ ದೇಶಕ್ಕೆ ಹೋಗುವ ಎಲ್ಲಾ ಸಂದರ್ಶಕರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅನುಮತಿ ಇದೆ. ಕೀನ್ಯಾ ದೇಶಕ್ಕೆ ಸಾಹಸಕ್ಕೆ ಹೋಗುವ ಸಂದರ್ಶಕರು ಅಥವಾ ಸಾಹಸಿಗಳು passport ಮಾತ್ರ ಹೊಂದಿದ್ದಾರೆ ಸಾಕು.
4) ಥೈಲ್ಯಾಂಡ್:- ಇದು ಆಗ್ನೇಯ ಏಷ್ಯಾದ ಒಂದು ರಾಷ್ಟ್ರವಾಗಿದೆ. ಇಲ್ಲಿನ ದೇವಾಲಯಗಳು, ಕಡಲತೀರಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರ. ರುಚಿಕರವಾದ ಆಹಾರಗಳು ರಸ್ತೆಯ ಬದಿಗಳಲ್ಲಿ ಇರುತ್ತವೆ. ಇಲ್ಲಿನ ಪ್ರಾಚೀನ ಥಾಯ್ ಕಲೆಯು ಬೌದ್ಧ ಕಲೆಯಿಂದ ಮತ್ತು ಭಾರತೀಯ ಮಹಾಕಾವ್ಯಗಳ ದೃಶ್ಯಗಳಿಂದ ಪ್ರಭಾವಿತವಾಗಿದೆ. ಮೇ 2024 ರವರೆಗೆ ವೀಸಾ-ಮುಕ್ತ ವಾಸ್ತವ್ಯಕ್ಕೆ ಅನುಮತಿ ಇದೆ.
5) ವಿಯೆಟ್ನಾಂ:- ಇದು ಆಗ್ನೇಯ ಏಷ್ಯಾದ ಪೂರ್ವ ಅಂಚಿನಲ್ಲಿರುವ ಒಂದು ದೇಶವಾಗಿದೆ. ವಿಯೆಟ್ನಾಂನ ದೇಶದಲ್ಲಿ ಸುಂದರವಾದ ಪ್ರಾಚೀನ ನಗರಗಳನ್ನು ಕಾಣಬಹುದು., ಇಲ್ಲಿನ ಸುತ್ತಲಿನ ವಾತಾವರಣವು ಮನಸ್ಸಿಗೆ ಬಹಳ ಹಿತ ನೀಡುತ್ತದೆ. ಇಲ್ಲಿನ ಅನನ್ಯ ಪಾಕಪದ್ಧತಿಯನ್ನು ಸವಿಯುವುದು ಒಂದು ರೀತಿಯ ಅನುಭವ. ಇದು ವೀಸಾ-ಮುಕ್ತ ಪ್ರಯಾಣಕ್ಕೆ ಅನುಮತಿ ನೀಡಿದೆ.
6) ಶ್ರೀಲಂಕಾ :- ಶ್ರೀಲಂಕಾ ಮತ್ತು ಭಾರತ ಪುರಾಣ ಕಾಲದಿಂದಲೂ ವಿಶೇಷ ಭಾಂದವ್ಯ ಹೊಂದಿದೆ. ಶ್ರೀಲಂಕಾದ ಸಂಸ್ಕೃತಿಯ ಬಹಳ ಶ್ರೀಮಂತವಾಗಿದೆ. ಸೊಂಪಾದ ಚಹಾ ತೋಟಗಳನ್ನು ನೋಡಬಹುದು. ಕಡಲತೀರಗಳ ಇಷ್ಟ ಪಡುವ ಜನರಿಗೆ ಈ ದೇಶ ಕಂಡಿತಾ ಇಷ್ಟ ಆಗುತ್ತದೆ., ಮಾರ್ಚ್ 2024 ರವರೆಗೆ ವೀಸಾ-ಮುಕ್ತ ಪ್ರಯಾಣವನ್ನು ಆನಂದಿಸಬಹುದು.
ಇದನ್ನೂ ಓದಿ: 35 ಗಂಟೆಗಳ ಬ್ಯಾಟರಿಯೊಂದಿಗೆ ಹೊಸ Honor Choice X5 ಇಯರ್ ಬಡ್ಸ್ ಅನ್ನು ಪಡೆಯಿರಿ, ಅದೂ ಕೇವಲ ಕೈಗೆಟುಕುವ ಬೆಲೆಯಲ್ಲಿ
ಇದನ್ನೂ ಓದಿ: 25,000ಗಳ ರಿಯಾಯಿತಿಯನ್ನು ಹೊಂದಿರುವ Ola electric ಸ್ಕೂಟರ್ ನ ವಿವಿಧ ರೂಪಾಂತರದ ಬೆಲೆ ಎಷ್ಟು?