ಈಗಾಗಲೇ 1,000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಮಾಡುವುದಾಗಿ ಕಂದಾಯ ಸಚಿವರು ತಿಳಿಸಿದ್ದಾರೆ. ಅಭ್ಯರ್ಥಿಗಳು ಇಲಾಖೆಯಿಂದ ನೀಡಲಾದ ಸೂಚನೆಗಳ ಅನುಸಾರವಾಗಿ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರತಿಯಲ್ಲಿ ಯಾವ ಯಾವ ಅಂಶಗಳನ್ನು ತಿಳಿಸಲಾಗಿದೆ ಎಂಬುದನ್ನು ತಿಳಿಯೋಣ.
ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅಂಶಗಳು :-
- ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಪ್ರಾಧಿಕಾರಕ್ಕೆ ಹಕ್ಕು ಇರುವುದಿಲ್ಲ. ಅಭ್ಯರ್ಥಿಯ ನೇಮಕಾತಿಯ ನೇರವಾಗಿ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರ ಹಾಗೂ ನೇಮಕಾತಿ ಪ್ರಾಧಿಕಾರ ಹೇಳಿರುವ ನಿಯಮದ ಪ್ರಕಾರ ನಡೆಯುತ್ತದೆ.
- ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಿದವರು ಪರೀಕ್ಷೆ ಹಾಜರಾಗಿ ನಿಯಮದ ಪ್ರಕಾರ ಅಂಕಗಳನ್ನು ಗಳಿಸಿರಬೇಕು.
- ಹುದ್ದೆಗೆ ಅರ್ಜಿ ಸಲ್ಲಿಸುವಾಗ ಒಬ್ಬ ಅಭ್ಯರ್ಥಿಯು ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಪಿಯುಸಿ ಮತ್ತು ತತ್ಸಮಾನ ಅಭ್ಯರ್ಥಿಯ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
ಇದನ್ನೂ ಓದಿ: ಪದವೀಧರರಿಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3000 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..
ಅರ್ಜಿ ಸಲ್ಲಿಸುವ ವಿಧಾನ :-
ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಮಾರ್ಚ್ 04-2024 ರಿಂದ ಏಪ್ರಿಲ್ 03-2024 ರ ಬರೆಗೆ ಅರ್ಜಿ ಸಲ್ಲಿಸಬಹುದು. ಇಲಾಖೆಯ ಅಧಿಕೃತ ವೆಬ್ಸೈಟ್ kea.kar.nic ಗೆ ತೆರಳಿ, ಮುಖಪುಟದಲ್ಲಿ ಗ್ರಾಮ ಅಡಳಿತಾಧಿಕಾರಿ ಹುದ್ದೆಗೆ ನೇಮಕಾತಿ ಎಂಬ notification ಇರಲಿದೆ. ಅದರ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ನಿಮಗೆ ಜಿಲ್ಲಾವಾರು ಏಷ್ಟು ಹುದ್ದೆಗಳ ಲಭ್ಯತೆ ಇದೆ ಮೀಸಲಾತಿವಾರು ಸೀಟುಗಳ ಹಂಚಿಕೆಯ ಬಗ್ಗೆ ಸಂಪೂರ್ಣ ವಿವರ ಸಿಗುತ್ತದೆ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಸಂಪೂರ್ಣವಾಗಿ ಇರಲಿದೆ. ಅರ್ಜಿ ನಮೂನೆಯಲ್ಲಿ
ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ವಿದ್ಯಾರ್ಹತೆ ಹಾಗೂ ನಿವು ಯಾವ ಜಿಲ್ಲೆ ಗೆ ಅರ್ಜಿ ಹಾಕುತ್ತಾ ಇದ್ದೀರಿ ಎಂಬ ವಿವರಗಳನ್ನು ನಮೂದಿಸಬೇಕು. ನಂತರ ಆನ್ಲೈನ್ ಮೂಲಕ ಶುಲ್ಕವನ್ನು ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಂತರ ನೀವು ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರಲಿದೆ ಹಾಗೂ ನೀವು ಅರ್ಜಿ ಪರೀಕ್ಷಾ ಪ್ರವೇಶ ಪತ್ರವೂ ನಿಮಗೆ ಇದೆ ವೆಬ್ಸೈಟ್ ನಲ್ಲಿ ಲಭ್ಯವಿದೆ. ಗ್ರಾಮ ಆಡಳಿತ ಅಧಿಕಾರಿ ಲಿಖಿತ ಪರೀಕ್ಷೆಯು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ ಆದರೆ ಇದು ಎಲ್ಲರಿಗೂ ಕಡ್ಡಾಯವಲ್ಲ. ಹಾಗೂ ಪತ್ರಿಕೆ-1 ರಲ್ಲಿ ಸಾಮಾನ್ಯ ಜ್ಞಾನ ಹಾಗೂ ಪತ್ರಿಕೆ-2ರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಗಳ ಬಗ್ಗೆ ಪ್ರಶ್ನೆಗಳು ಇರುತ್ತದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಬಹು ಆಯ್ಕೆ ಮಾದರಿಯ 150 ಅಂಕಗಳ ಪ್ರಶ್ನೆಗಳು ಇರುತ್ತದೆ. ಪಾಸ್ ಆಗಬೇಕು ಎಂದರೆ 50 ಅಂಕ ಗಳಿಸಬೇಕು. ಆದರೆ ಈ ಪರೀಕ್ಷೆಯ ಅಂಕಗಳನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕು. ಸಾಮಾನ್ಯ ಜ್ಞಾನ ಪರೀಕ್ಷೆ 100 ಅಂಕಗಳಿಗೆ ಇರುತ್ತದೆ. ಎರಡು ಗಂಟೆಗಳ ಕಾಲಾವಧಿ ಇರುತ್ತದೆ. ಪ್ರಚಲಿತ ಘಟನೆ, ದೈನಂದಿನ ನಡೆಯುವ ವಿಷಯಗಳು , ಭಾರತದ ಸಂವಿಧಾನದ ವಿಷಯ, ಕರ್ನಾಟಕದ ಇತಿಹಾಸ ಮತ್ತು ಭೌಗೋಳಿಕ ವಿಷಯ, ಅಭಿವೃದ್ದಿ ಕುರಿತು, ಹಾಗೂ ಪರಿಸರಕ್ಕೆ ಸಂಭಂದಿಸಿದ ಪ್ರಶ್ನೆಗಳು ಇರುತ್ತವೆ. ಪತ್ರಿಕೆ-2ರಲ್ಲಿ 100 ಅಂಕಗಳಿಗೆ ಪರೀಕ್ಷೆ ಬರೆಯಬೇಕು. ಎರಡು ಗಂಟೆಗಳ ಕಾಲಾವಧಿ ಇರುತ್ತದೆ. ಸಾಮಾನ್ಯ ಕನ್ನಡ ವಿಭಾಗದಲ್ಲಿ ವ್ಯಾಕರಣ, ಕನ್ನಡ ಸಾಹಿತ್ಯ ಅರಿವು, ಇತರೆ ವಿಷಯಗಳ ಬಗ್ಗೆ ಪ್ರಶ್ನೆ ಇರುತ್ತದೆ. ಸಾಮಾನ್ಯ ಇಂಗ್ಲಿಷ್ ವಿಭಾಗದಲ್ಲಿ ವ್ಯಾಕರಣ, ಹಾಗೂ ಪ್ಯಾಸೇಜ್ ಇರುತ್ತದೆ. ಕಂಪ್ಯೂಟರ್ ಜ್ಞಾನ ವಿಭಾಗದಲ್ಲಿ ಅಪ್ಲಿಕೇಶನ್‌ಗಳ ಬಳಕೆ ವಿಧಾನ, ಶಾರ್ಟ್ ಕಟ್ ಕೀಗಳು, ಎಂಎಸ್ ಆಫೀಸ್, ಎಕ್ಸೆಲ್, ಪ್ರಸ್ತುತ ಟ್ರೆಂಡಿಂಗ್ ಸಾಫ್ಟ್‌ವೇರ್ ಕುರಿತ ಪ್ರಶ್ನೆಗಳು ಇರುತ್ತವೆ.