ಹಿರಿಯರು ಅಷ್ಟಿಲ್ಲದೇ ಹೆತ್ತಕರಳು ಅಂತ ಸುಮ್ನೆ ಹೇಳಿಲ್ಲ. ಹೌದು ಹೆತ್ತಮ್ಮನಿಗೆ ತನ್ನ ಮಗು ಏನ್ ಮಾಡ್ತಿದೆ, ಏನ್ ಬೇಕು, ಏನ್ ಬೇಡ ಇದೆಲ್ಲಾ ಅದು ಕೇಳೋಕೂ ಮೊದಲೇ ಗೊತ್ತಾಗುತ್ತಂತೆ, ಅದು ಕೇವಲ ಚಿಕ್ಕೋರಿದ್ದಾಗ ಮಾತ್ರ ಅಲ್ಲ ಅವ್ರು ಬೆಳೆದು ಎಷ್ಟೇ ದೊಡ್ಡೋರು ಆದ್ರು ಕೂಡ ಅಮ್ಮಾ ಅಮ್ಮಾನೆ. ಮಕ್ಕಳ ಬೇಕು ಬೇಡ ಎಲ್ಲವು ಅಮ್ಮನಿಗೆ ಮಾತ್ರ ಪರಿಪೂರ್ಣವಾಗಿ ಗೊತ್ತಿರುತ್ತೆ. ಸಾವಿರ ಜನರ ಮಧ್ಯೆ ಮಕ್ಕಳು ಇದ್ರೂ, ಎಷ್ಟೇ ಜನ ಇದ್ರೂ ಅದರಲ್ಲಿ ತನ್ನ ಮಕ್ಕಳು ಯಾರು ಅಂತ ಕಂಡು ಹಿಡಿಯೋದು ತಾಯಿಗೆ ಕಷ್ಟನೇ ಅಲ್ಲ. ಅದರಲ್ಲೂ ವೇಷ ಮರೆಸಿ, ಹೇಗೆ ಇದ್ರೂ, ಮತ್ಯಾಗೆ ಬಂದಿದ್ರು ಕೂಡ ತನ್ನ ಮಕ್ಕಳು ಯಾರು ಅನ್ನೋದು ಹೆತ್ತ ಕರುಳಿಗೆ ಬೇಗನೆ ಗೊತ್ತಾಗಿಬಿಡುತ್ತೆ. ಇವತ್ತಿನ ಸ್ಟೋರಿಯಲ್ಲೂ ಕೂಡ ಅಂತದ್ದೇ ಒಂದು ಘಟನೆ ನಡೆದಿದೆ. ಮುಖ ಕಾಣದ ಆಗೇ ಅಮ್ಮನ ಬಳಿ ಬಂದ ಮಗನನ್ನ ತಾಯಿ ಗುರುತಿಸಿ ಮಗನನ್ನ ಬಿಗಿದಪ್ಪಿ ಖುಷಿ ಪಟ್ಟಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗ್ತಿದೆ. ವಿಡಿಯೋ ನೋಡಿದ ನೆಟ್ಟಿಗರಂತೂ ಅಮ್ಮನ ಪ್ರೀತಿಗೆ ಸರಿ ಸಾಟಿ ಇಲ್ಲ ಸರಿಸಮರಿಲ್ಲ, ಆ ತಾಯಿ ಗ್ರೇಟ್ ಅಂತಿದ್ದಾರೆ. ಹಾಗಾದ್ರೆ ಅಷ್ಟು ನಡೆದಿರುವ ಘಟನೆ ಏನು ಎಲ್ಲಿ ನಡೆದಿರೋದು, ವಿಷಯ ಏನು ಎಲ್ಲವನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಗೃಹಲಕ್ಷ್ಮೀ 2ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ? ಈ ದಿನದಿಂದಲೇ ನಿಮ್ಮ ಖಾತೆಗೆ ಜಮೆ ಆಗುತ್ತೆ ಹಣ
ಮುಖ ಮುಚ್ಚಿಕೊಂಡು ಬಂದು ಸರ್ಪ್ರೈಸ್
ಹೌದು ಉಡುಪಿ ಜಿಲ್ಲೆ ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮಿತ್ರರಿಗೆ ಸರ್ಪ್ರೈಸ್ ನೀಡುವ ನಿಟ್ಟಿನಿಂದ ತಾವು ಬರುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಅಂತೆಯೇ ಮನೆಗೆ ಮರಳಿದಾಗ ಮನೆಯವರೆಲ್ಲ ರೋಹಿತ್ ನನ್ನ ನೋಡಿ ಖುಷಿಪಟ್ಟಿದ್ದಾರೆ. ಆದರೆ ತಾಯಿ ಮಾತ್ರ ಮನೆಯಲ್ಲಿ ಇರದಿರುವುದನ್ನು ಕಂಡು ಬೇಸರಗೊಂಡಿದ್ದ ರೋಹಿತ್, ನೇರವಾಗಿ ಗಂಗೊಳ್ಳಿ ಬಂದರು ಬಳಿ ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿದ್ದಾರೆ. ತಾಯಿ ಸುಮಿತ್ರಾ ಮೀನು ಮಾರುತ್ತಿದ್ದಲ್ಲಿಗೆ ತೆರಳಿದ್ದ ರೋಹಿತ್, ತಲೆಗೆ ಟೋಪಿ ಹಾಕಿ ಮುಖಕ್ಕೆ ಕರವಸ್ತ್ರ ಕಟ್ಟಿ ಕನ್ನಡಕ ಹಾಕಿ ಮೀನು ಖರೀದಿಯ ನಾಟಕವಾಡಿದ್ದಾರೆ. ಅದ್ರೆ ತನ್ನ ಬಳಿ ಮೀನು ಖರೀದಿಸಲು ಬಂದ ವ್ಯಕ್ತಿಯ ಹಾವಭಾವ ಗಮನಿಸಿದ ತಾಯಿಗೆ, ಇದು ತನ್ನ ಮಗನೇ ಅಂತ ಹೆತ್ತು ಕರುಳು ಹೇಳಿದೆ. ತಕ್ಷಣ ತನ್ನ ಮಗನನ್ನು ಬಿಗಿದಪ್ಪಿ ಆನಂದ ಬಾಷ್ಪ ಹರಿಸಿದ್ದಾರೆ.
ಈ ಎಲ್ಲಾ ದೃಶ್ಯಗಳನ್ನು ರೋಹಿತ್ ಗೆಳೆಯ ದೂರದಿಂದಲೇ ವೀಡಿಯೋ ಮಾಡಿದ್ದು, ಸದ್ಯ ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಹೌದು ಮೂರು ವರ್ಷಗಳ ಬಳಿಕ ಮುಖ ಮರೆಮಾಡಿಕೊಂಡು ಬಂದರೂ ತಾಯಿ ಮಗನನ್ನು ಗುರುತಿಸಿರುವುದನ್ನು ಕಂಡು ನೆಟ್ಟಿಗರು ವೀಡಿಯೋ ಶೇರ್ ಮಾಡುತ್ತಿದ್ದಾರೆ. ಅಲ್ದೇ ಮೂರು ವರ್ಷಗಳ ಬಳಿಕ ವಿದೇಶದಿಂದ ಊರಿಗೆ ಮರಳಿದ ಯುವಕ ತನ್ನ ತಾಯಿಗೆ ಸರ್ಪ್ರೈಸ್ ನೀಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು ಮನೆಯಲ್ಲಿ ಎಷ್ಟೇ ಜನ ಇದ್ರೂ ತಾಯಿಯೊಬ್ಬಳು ಮನೆಯಲ್ಲಿ ಇಲ್ಲ ಅಂದ್ರೆ ಮನೆ ಪೂರಾ ಖಾಲಿ ಅನ್ಸುತ್ತೆ. ಅದೇ ರೀತಿ ಮೂರು ವರ್ಷದ ಬಳಿಕ ದುಬೈನಲ್ಲಿ ಕೆಲಸಕ್ಕೆ ಇದ್ದ ಮಗ ಮನೆಗೆ ಬಂದ ತಕ್ಷಣ ಎಲ್ಲರೂ ಎದುರಾಗುತ್ತಾರೆ. ಹೌದು ಮನೆಯಲ್ಲಿರುವ ಪ್ರತಿಯೊಬ್ಬರು ಕೂಡ ಎದುರಿಗೆ ಬರ್ತಾರೆ, ಫ್ರೆಂಡ್ಸ್ ಕೂಡ ಸಿಕ್ತಾರೆ. ಆದ್ರೆ ತಾಯಿ ಮನೆಯಲ್ಲಿ ಇಲ್ಲ ಅಂದಾಗ ಮಗನಿಗೆ ಏನೋ ಒಂದು ಕಳೆದುಕೊಂಡ ಫೀಲ್, ಹೀಗಾಗಿ ಮಗ ತಕ್ಷಣ ತಾಯಿ ಮಾರಾಟ ಮಾಡ್ತಿದ್ದಂತಹ ಸ್ಥಳಕ್ಕೆ ಹೋಗ್ತಾನೆ. ಅಂದ್ರೆ ತಾಯಿ ಸುಮಿತ್ರಾ ಬಂದರೊಂದರಲ್ಲಿ ಮೀನು ಮಾರಾಟ ವೃತ್ತಿಯನ್ನು ಮಾಡ್ತಾ ಇರ್ತಾರೆ.
ಹೀಗಾಗಿ ತಾಯಿಗೆ ಸರ್ಪ್ರೈಸ್ ಕೊಡಬೇಕು ಅನ್ನೋ ನಿಟ್ಟಿನಲ್ಲಿ ಮಗ ಕಂಪ್ಲೀಟ್ ಆಗಿ ಮುಖವನ್ನ ಕವರ್ ಮಾಡ್ಕೊಂಡು ಅಮ್ಮನಿಗೆ ಗೊತ್ತಾಗದ ರೀತಿ ಹೋಗಿ ವ್ಯಾಪಾರ ಮಾಡುತ್ತಾರೆ. ಆದರೆ ಹೆತ್ತ ಕರುಳು ಯಾವತ್ತಿಗೂ ಕೂಡ ಮಗುವನ್ನ ಬಿಟ್ಟುಕೊಡಲ್ಲ ಅನ್ನೋದು ಇಲ್ಲಿ ಮತ್ತೆ ಸಾಬೀತಾಗಿರೋದಂತೂ ಸತ್ಯ. ಒಟ್ಟಿನಲ್ಲಿ ಈ ರೀತಿಯ ವಿಡಿಯೋಗಳನ್ನು ನೋಡಿದಾಗ ಪ್ರತಿಯೊಬ್ರ ಕಣ್ಣಂಚಿನಲ್ಲೂ ನೀರು ಬರುವುದಂತೂ ಸಹಜ. ಯಾಕಂದ್ರೆ ತಾಯಿ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಅಸಾಧ್ಯ ಶಕ್ತಿ, ಚೇತನ. ತಾಯಿ ಇಲ್ಲದ ಮನೆ ಎಂದಿಗೂ ಖಾಲಿ ಖಾಲಿ ಅನ್ನೋದು ಈ ಒಂದು ವಿಡಿಯೋ ನೋಡಿದ್ರೆ ಆ ಮಗನ ತುಡಿತದಲ್ಲೇ ಗೊತ್ತಾಗುತ್ತೆ.
ಇದನ್ನೂ ಓದಿ: BPL, APL ಕಾರ್ಡ್ ದಾರರಿಗೆ ಬಿಗ್ ಶಾಕ್; ಒಂದು ಲಕ್ಷದಷ್ಟು ತಿದ್ದುಪಡಿ ಅರ್ಜಿ ರಿಜೆಕ್ಟ್!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram