ತಪ್ಪಿನ ಅರಿವಾಗಿ ದಿಢೀರ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

ಟಿಕ್ ಟಾಕ್ ಸಾಕಷ್ಟು ಪ್ರತಿಭೆಗಳಿಗೆ ಒಂದು ವೇದಿಕೆ ಆಗಿತ್ತು ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡವರು ಇಂದು ಜನ ಮೆಚ್ಚುಗೆಯನ್ನು ಪಡೆದಿದ್ದಾರೆ ಹಾಗೆ ಅದರಿಂದ ಬೇಗ ಫೇಮಸ್ ಆಗಬೇಕೆಂದು ಏನೇನೋ ವಿಡಿಯೋ ಮಾಡಿದವರು ಮುಂದೆ ಟ್ರೋಲ್ ಆಗಿ ಇಂದು ಕಣ್ಣೀರಿಡುವ ಪರಿಸ್ಥಿತಿ ಬಂದಿದೆ ಹೌದು ಟಿಕ್ ಟಾಕ್ ಮೂಲಕ ಮೊದಮೊದಲು ಫೇಮಸ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಬಳಿಕ ಟ್ರೋಲ್ ಗೆ ಒಳಗಾಗಿ ಸಾಕಷ್ಟು ಖಾಸಗಿ ವಿಷಯಗಳು ಹೊರಬಂದವು. ಅದಕ್ಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೋನು ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್ಸ್ಟಾಗ್ರಾಮ್ ನಲ್ಲೂ ವಿಡಿಯೋ ಮಾಡಲು ಶುರು ಮಾಡಿದರು. ಕಳೆದ ವರ್ಷ ಬಿಗ್ ಬಾಸ್ ಓಟಿಟಿಯಲ್ಲೂ ಕೂಡ ಕಾಣಿಸಿಕೊಂಡ ಸೋನು ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ಕೂಡ ಹೇಳಿಕೊಂಡಿದ್ದರು ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಕೂಡ ಸಕ್ಕತ್ ಟ್ರೋಲ್ ಆದ ಸೋನು. ನಿನ್ನೆ ದಿಢೀರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಡುತ್ತಾ ತಮ್ಮ ಜೀವನದಲ್ಲಿ ಆಗುತ್ತಿರುವ ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: 3ದಶಕಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಹಿರಿಯ ನಟಿ ಮಹಾಲಕ್ಷ್ಮೀ ಇಷ್ಟು ದಿನ ಎಲ್ಲಿದ್ರೂ ಏನ್ ಮಾಡ್ತಿದ್ರು ಗೊತ್ತಾ?

ನನ್ನ ಟ್ರೋಲ್ ಮಾಡಿ ಫ್ಯಾಮಿಲಿ ಬಗ್ಗೆ ಮಾತನಾಡಬೇಡಿ

ನಿನ್ನೆ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡ ಸೋನು ಇತ್ತೀಚೆಗೆ ನನ್ನ ಬಗ್ಗೆ ಸಾಕಷ್ಟು ಟ್ರೋಲ್ ಮತ್ತು ರೋಸ್ಟ್ ಆಗುತ್ತಿದ್ದು ತುಂಬಾ ಬ್ಯಾಡ್ ಕಾಮೆಂಟ್ ಗಳು ಬರುತ್ತಿವೆ ಬ್ಯಾಡ್ ಕಾಮೆಂಟ್ ಮಾಡುವ ತಪ್ಪು ನಾನೇನು ಮಾಡಿದ್ದೇನೆ ಅನ್ನೋದು ನಿಜ ನನಗೆ ಗೊತ್ತಿಲ್ಲ ನಾನು ಎಷ್ಟು ಸ್ಟ್ರಾಂಗ್ ನನಗೆ ಅಷ್ಟೇ ಬೇಜಾರಾಗುತ್ತದೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ನಮ್ಮ ಫ್ಯಾಮಿಲಿಯಲ್ಲೂ ಕೂಡ ವಿಡಿಯೋ ನೋಡುತ್ತಿರುತ್ತಾರೆ. ನನ್ನ ಅಮ್ಮ ಯೂಟ್ಯೂಬ್ ನಲ್ಲಿ ನನ್ನ ಟ್ರೋಲ್ ವಿಡಿಯೋ ನೋಡುತ್ತಾ ಕಣ್ಣೀರಿಟ್ಟರು ಅಮ್ಮ ಅಳುತ್ತಿದ್ದನ್ನು ನೋಡಿ ತುಂಬಾ ಬೇಜಾರಾಯ್ತು ಅದೊಂದು ವಯಸ್ಸು ನಾನು ತಪ್ಪು ಮಾಡಿದ್ದೇನೆ ಆದ್ರೆ ಅದನ್ನು ತಿದ್ದಿಕೊಳ್ಳೋಕೆ ಅವಕಾಶ ಕೊಡಬೇಕು ಅಮ್ಮ ನನ್ನಿಂದ ಕಣ್ಣೀರು ಹಾಕಿ ಹುಷಾರು ತಪ್ಪಿದ್ದಾರೆ. ನನ್ನ ಟ್ರೋಲ್ ಮಾಡಿ ಫ್ಯಾಮಿಲಿ ವಿಷಯದ ಬಗ್ಗೆ ಮಾತನಾಡಬೇಡಿ ಎಂದು ಕಣ್ಣೀರಿಟ್ಟಿದ್ದಾರೆ.  

ಯಾರ್ಯಾರಿಗೋ ಸಾವು ಬಂತು ನಿಂಗೆ ಬರಲ್ಲ ಅಂತ ಕಾಮೆಂಟ್ ಮಾಡುತ್ತಾರೆ ನಾನು ಜನಗಳಿಗೆ ಮೋಸ ಮಾಡಿಲ್ಲ ಪಬ್ಲಿಕ್ ನಲ್ಲಿ ಯಾರಿಗಾದರೂ ಬೈದ್ದಿದೆನಾ, ಹೊಡ್ದಿದೆನಾ ಏನೋ ಗೊತ್ತಿಲ್ಲದ ವಯಸ್ಸಿನಲ್ಲಿ ತಪ್ಪು ಮಾಡಿದ್ದೇನೆ. ಆಗ ನನಗೆ 20 ವರ್ಷ ವಯಸ್ಸಾಗಿತ್ತು ಈಗ ನನಗೆ 24 ವರ್ಷ ಅದರಿಂದ ನಾನು ತುಂಬಾ ಪಶ್ಚಾತಾಪ ಪಡುತ್ತಿದ್ದೇನೆ. ನಮ್ಮ ಫ್ಯಾಮಿಲಿಯಲ್ಲಿ ಟ್ರೋಲ್ ಗಳನ್ನು ನೋಡಿ ಕೆಲವರು ನನನೂ ಮಾತನಾಡಿಸಲ್ಲ. ನನ್ನ ಬಗ್ಗೆ ಗೊತ್ತಿದ್ದವರು ಮಾತನಾಡಿಸುವರು ಓಕೆ. ಅಸಹ್ಯವಾಗಿ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ ಯಾರ್ಯಾರಿಗೋ ಕಂಪೇರ್ ಮಾಡುತ್ತಾರೆ ಎಂದು ಸೋನು ಶ್ರೀನಿವಾಸ ಗೌಡ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಹಾಕಿದ್ದಾರೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಸಮಯ; ಕಳಶ ಪ್ರತಿಷ್ಠಾಪನೆ ಮಾಡೋದು ಹೇಗೆ?

ಇದನ್ನೂ ಓದಿ: ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಮಗಳಿಗೆ ನಾಮಕರಣ ಮಾಡಿದ ಕಿರುತೆರೆ ನಟಿ ದಿವ್ಯ ಶ್ರೀಧರ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram