ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗ ಬೇಕು ಅನ್ನೋ ಕನಸ್ಸು ಕಂಡಿದ್ರು ಆದ್ರೆ ಆಕಸ್ಮಿಕವಾಗಿ ಚಿತ್ರ ರಂಗ ಪ್ರವೇಶ ಮಾಡ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಸೌಮ್ಯ ಆಗಿದ್ದ ಸೌಂದರ್ಯ ಅವ್ರು ಆ ನಂತರ ಅಂದ್ರೆ ತಮ್ಮ ಮೊದಲ ಕೆಲವು ಚಿತ್ರಗಳ ಬಳಿಕ ಸೌಂದರ್ಯ ಅಂತ ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ. ಹೌದು ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರ ರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ಚಿತ್ರ ನಟಿಯಾಗಿ ನಿರ್ಮಾಪಕಿಯಾಗಿಯೂ ಬೆಳೆದು ಸಾಧನೆಯ ಶಿಖರವೇರಿದ್ದ ನಟಿ. ತಮ್ಮ ಸರಳತೆಯಿಂದಲೇ ಗುರುತಿಸಿಕೊಂಡಿದ್ದ ಅದ್ಭುತ ಪ್ರತಿಭೆ. ಆದ್ರೆ ಇಂತಹಾ ಮೇರು ನಟಿ ವಿಮಾನ ದುರಂತ ದಲ್ಲಿ ಅಕಾಲಿಕ ಮೃತ್ಯುವಿಗೀಡಾದದ್ದು ಮಾತ್ರ ಮರೆತರು ಮರೆಯಲಾಗದ ಘಟನೆ ಎನ್ನಬಹುದು. ಇದೀಗ ನಟಿ ಪ್ರೇಮ, ಸೌಂದರ್ಯ ಅವ್ರ ಸಾವಿನ ದಿನದ ಬಗ್ಗೆ ಮಾತಾನಾಡಿ ತುಂಬಾ ಭಾವುಕಾರಾಗಿದ್ದಾರೆ.
ಗಂಧರ್ವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಾರೆ. ಇದಕ್ಕೂ ಮೊದಲ ವೈದ್ಯೆಯಾಗಬೇಕು ಅನ್ನೋ ಕನಸ್ಸು ಹೊತ್ತಿದ್ದ ಇವರು MBBS ಪದವಿಯನ್ನ ಮೊದಲ ವರ್ಷಕ್ಕೆ ಬಿಟ್ಟು ಅಚಾನಕ್ಕಾಗಿ ಸಿನಿ ಜೀವನ ಶುರು ಮಾಡುತ್ತಾರೆ.. ತೂಗುವೆ ಕೃಷ್ಣನಾ ಸಿನಿಮಾ ನಂತರ ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಕನ್ನಡ ಚಿತ್ರ ಗಳಲ್ಲಿ ಅಭಿನಯಿಸಿ ನಂತರ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿಯು ನಟಿಸಿ ಬಹು ಬೇಡಿಕೆಯ ನಟಿಯಾಗುತ್ತಾರೆ. ಜೊತೆಗೆ ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮುಖೇನ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದ ಸೌಂದರ್ಯ ಅವರ ಮೊದಲ ನಿರ್ಮಾಣದ ಚಿತ್ರಕ್ಕೇ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಲಭಿಸುತ್ತದೆ. ದೋಣಿ ಸಾಗಲಿ ಚಿತ್ರಕ್ಕೂ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ ಕೂಡ ದೊರಕುತ್ತದೆ.
ಇದರ ಜೊತೆಗೆ ಸೌಂದರ್ಯ ಅವ್ರು ಡಾ. ಎಸ್. ಎಲ್. ಭೈರಪ್ಪನವರ ಶ್ರೇಷ್ಠ ಕಾದಂಬರಿ ‘ಗೃಹಭಂಗ’ ವನ್ನು ಕಿರುತೆರೆ ಯಲ್ಲಿ ಧಾರಾವಾಹಿಯಾಗಿ ಪರಿವರ್ತಿಸಿದ್ರು. ಇನ್ನು ಆಪ್ತಮಿತ್ರ ಚಿತ್ರ ಸೌಂದರ್ಯ ಅವರ ಕಡೆಯ ಚಿತ್ರವಾಗಿದ್ದು ಅದರಲ್ಲಿನ “ನಾಗವಲ್ಲಿ” ಪಾತ್ರ ಎಂದೆಂದಿಗೂ ಮರೆಯಲಾಗದು. ಡಾ. ವಿಷ್ಣುವರ್ಧನ, ಸೌಂದರ್ಯ ಮತ್ತು ಅವಿನಾಶ್ ದ್ವಾರಕೀಶ್ ಮೊದಲಾದವರು ನಟಿಸಿದ್ದ ಈ ಚಿತ್ರದಲ್ಲಿ ಸೌಂದರ್ಯ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 16 ವರ್ಷದ ಸಿನಿ ಬದುಕಿ ನಲ್ಲಿ 102 ಚಿತ್ರಗಳಲ್ಲಿ ನಟಿಸಿದ ಸೌಂದರ್ಯ ಅವರು ರಘು ಅನ್ನೋರನ್ನ ತಮ್ಮ ಸಾವಿಗೂ ಕೆಲವು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ರು.
ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿ ಫೋಟೋ ತೆಗೀಬಾರದು ಯಾಕ್ ಗೊತ್ತಾ? ಅವ್ರ ಹೆಸರಲ್ಲಿರುವ ಆಸ್ತಿ ಎಷ್ಟು?
ಎಂದಿಗೂ ಮರೆಯಾಲಾಗದು ಸೌಂದರ್ಯ ಸಾವಿನ ದಿನ!
ಕೇವಲ ಸಿನಿಮಾ ಗಳಲ್ಲಿ ಮಾತ್ರ ಇವ್ರು ನಾಯಕಿಯಲ್ಲ, ನಿಜ ಜೀವನದಲ್ಲಿಯೂ ಕೂಡ ಬಹಳಷ್ಟು ಜನರ ಕಷ್ಟಗಳಿಗೆ ಸ್ಪಂದಿಸಿ ಅವ್ರ ಪಾಲಿನ ದೈವವಾಗಿದ್ರು. ಹೌದು ಸಾಮಾಜಿಕ ಕಾಳಜಿ ಹೊಂದಿದ್ದ ನಟಿ ಸೌಂದರ್ಯ ತಾವು ಹುಟ್ಟಿದ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದ ಶಾಲೆಗಾಗಿ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇಂದಿಗೂ ಆ ಶಾಲಾ ಕಟ್ಟಡದ ಮೇಲೆ ನಟಿ ಸೌಂದರ್ಯ ಹೆಸರು ಶಾಶ್ವತವಾಗಿ ಉಳಿದಿದೆ.
ಅಲ್ಲದೆ ಬಡತನದ ಹಿನ್ನೆಲೆ ಯಿಂದ ಬಂದಿದ್ದ ಸೌಂದರ್ಯ ಅವ್ರು ಹುಟ್ಟೂರಿಗೆ ಬಂದಾಗಲೆಲ್ಲಾ ಸಂಬಂಧಿಗಳ ಮನೆಗೆ ತೆರಳಿ ಕಷ್ಟ ಸುಖ ವಿಚಾರಿಸಿ ಸಹಾಯ ಮಾಡುತ್ತಿದ್ದರಂತೆ. ಜೊತೆಗೆ ನಟಿ ಸೌಂದರು ಅವ್ರಿಗೆ ತನ್ನೂರಲ್ಲಿ ಒಂದು ಆಸ್ಪತ್ರೆ ತೆರೆಯಬೇಕು ಅನ್ನೋ ಆಸೆ ಇತ್ತಂತೆ ಆದ್ರೆ ಅದು ಕೊನೆಗೂ ಈಡೇರಲಿಲ್ಲ. ಇಂತಹ ಮಾನವೀಯ ಗುಣವಿದ್ದ, ಸರಳ, ಅದ್ಭುತ ಪ್ರತಿಭೆ 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರದ ಸಲುವಾಗಿ ಹೊಗುತ್ತಿದ್ದಾಗ ವಿಮಾನ ಪತನವಾಗಿ ಸಜೀವ ದಹನವಾಗಿ ಹೋದ್ರು, ಈ ದುರಂತ ದಲ್ಲಿ ನಟಿ ಸೌಂದರ್ಯ ಅವರ ಅಣ್ಣ ಅಮರನಾಥ್ ಕೂಡ ಸಾವನ್ನಪ್ಪಿದ್ದರು.
ನಟಿ ಸೌಂದರ್ಯಾ ಅವರ ಬದುಕಿ ನಲ್ಲಿ 2004 ರ ಏಪ್ರಿಲ್ 17 ಕರಾಳ ದಿನ. ಸೌಂದರ್ಯ ಅವ್ರ ಅಭಿಮಾನಿಗಳು ಸೀನಿಪ್ರೇಕ್ಷಕರಂತೂ ಅಂದು ಬಿಕ್ಕಿ ಬಿಕ್ಕಿ ಅತ್ತಿದ್ರು, ಕೇವಲ 31ರ ಪ್ರಾಯದಲ್ಲಿಯೇ ವಿಮಾನ ದುರಂತ ದಲ್ಲಿ ಇಹಲೋಕ ತ್ಯಜಿಸಿದಂತು ಈಗಲೂ ಮರೆತರು ಮರೆಯಲಾಗದ ಘಟನೆ ಅನ್ನಬಹುದು. ತಮ್ಮ 20ನೆ ವಯಸ್ಸಿಗೆ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ಚೆಲುವೆ ಕೇವಲ 10ವರ್ಷಗಳ ಅಂತರದಲ್ಲಿ ದೊಡ್ಡಮಟ್ಟದ ಸಾಧನೆ ಮಾಡಿದ್ದರು. ಇಡೀ ಕನ್ನಡದ ಜನತೆ ಹೆಮ್ಮೆಪಡುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಆದರೆ ಅವರ ಬದುಕಿನಲ್ಲಿ ವಿಧಿ ಆಟವಾಡಿದ್ರು ಕೂಡ ಸಿನಿಪ್ರಿಯರ ಮನದಲ್ಲಿ ಈಗಲೂ ಶಾಶ್ವತವಾಗಿ ಸ್ಥಾನ ಪಡೆದಿರುವಂತ ಮನೋಜ್ಞಾ ಪ್ರತಿಭೆ.
ದೇಹ ಮಾತ್ರ ಇತ್ತು ಮುಖ ಗುರುತಿಗೆ ಸಿಗಲಿಲ್ಲ-ನಟಿ ಪ್ರೇಮ
ಇದೀಗ ಸೌಂದರ್ಯ ಅವ್ರ ಸಾವಿನ ವಿಚಾರ ಮತ್ತೆ ವೈರಲ್ ಆಗ್ತಿದ್ದು ನಟಿ ಪ್ರೇಮಾ ಸೌಂದರ್ಯ ಅವ್ರ ಸಾವಿನ ದಿನದ ಕುರಿತು ಕಣ್ಣೀರು ಹಾಕಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸೌಂದರ್ಯ ಅವ್ರ ಜೊತೆ ಪ್ರೇಮ ತೆರೆಹಂಚಿಕೊಂಡಿದ್ದತಹ ನಟಿ, ಈಗಾಗಿ ಬಹಳ ಆಪ್ತರು ಕೂಡ ಆಗಿರ್ತಾರೆ. ಸಂದರ್ಶನದಲ್ಲಿ ಸೌಂದರ್ಯ ಅವ್ರ ಬಗ್ಗೆ ಮಾತನಾಡುತ್ತಾ ನಾವಿಬ್ಬರೂ ಆತ್ಮೀಯ ಸ್ನೇಹಿತೆಯರಾಗಿದ್ವಿ ಸೌಂದರ್ಯ ಜೊತೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದೆ ಇದರಲ್ಲಿ ಎರಡು ಕನ್ನಡ ಹಾಗೂ ಮತ್ತೆರಡು ತೆಲುಗು. ‘ನಾನು ನನ್ನ ಹೆಂಡ್ತೀರು’ ಹಾಗೂ ‘ಆಪ್ತಮಿತ್ರ’ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ವಿ. ಈ ಸಿನಿಮಾ ಶೂಟಿಂಗ್ ವೇಳೆ ಮತ್ತಷ್ಟು ಹತ್ತಿರವಾಗಿದ್ವಿ ಅಂತ ಪ್ರೇಮಾ ಹೇಳಿಕೊಂಡಿದ್ದಾರೆ. ಅಲ್ಲದೆ ಶೂಟಿಂಗ್ ವೇಳೆ ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡುತ್ತಿದ್ರು. ರಾಮ ನವಮಿ ಬಂತು ಅಂದ್ರೆ ಸಾಕು ಎಲ್ಲರಿಗೂ ಪಾನಕ ತರುತ್ತಿದ್ರು. ಅಲ್ಲದೆ ಸೌಂದರ್ಯದ ವಿಚಾರದಲ್ಲಂತೂ ತುಂಬಾನೇ ಕಾಳಜಿ ವಹಿಸುತ್ತಿದ್ದರು. ಆಹಾರವನ್ನೂ ಅಷ್ಟೇ ಮಿತವಾಗಿ ಬಳಸುತ್ತಿದ್ದರು. ಸೌಂದರ್ಯಾ ನಟನೆ ಕೂಡ ತುಂಬಾನೇ ಸಹಜವಾಗಿತ್ತು. ಕಣ್ಣಿನಿಂದಲೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಅಂತ ಹಿಂದಿನ ದಿನಗಳನ್ನ ನಟಿ ಪ್ರೇಮ ನೆನಸಿಕೊಂಡ್ರು.
ಆದರೆ ಇಂತಹ ಅದ್ಭುತ ಪ್ರತಿಭೆ ವಿಮಾನ ದುರಂತ ದಲ್ಲಿ ಕಣ್ಮರೆಯಾಗುತ್ತಾರೆ ಅಂತ ಕನಸ್ಸಲ್ಲೂ ಊಹಿಸಿರಲಿಲ್ಲ. ಹೌದು 2004 ರಲ್ಲಿ ಸೌಂದರ್ಯಾ ಚುನಾವಣ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಸೌಂದರ್ಯಾ ಸಹೋದರ ಅಮರ್‌ನಾಥ್ ಅವರೊಂದಿಗೆ ಪ್ರಚಾರಕ್ಕೆ ಮುಂದಾಗಿದ್ದರು. ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿತ್ತು. ಈ ಅಪಘಾತದಲ್ಲಿ ಸೌಂದರ್ಯಾ ಜೊತೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದ್ದರು. ಆ ದಿನ ನಾನು ಸೌಂದರ್ಯಾ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯಾ ಅವರ ಶವವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು. ಅದರಲ್ಲಿ ಆಕೆಯ ಶವವಿತ್ತು. ಆದರೆ, ಮುಖದ ಗುರುತೇ ಸಿಗಲಿಲ್ಲ. ಅದನ್ನು ನೋಡಿ ಬೆಚ್ಚಿಬಿದ್ದಿದ್ದೆ. ಆ ವೇಳೆ ಕಲಾವಿದರ ಜೀವನ ಇಷ್ಟೇನಾ? ಅಂತ ಅನಿಸಿತ್ತು” ಎಂದು ಪ್ರೇಮಾ ನಟಿ ಸೌಂದರ್ಯಾ ಅವರನ್ನು ನೆನೆದು ಭಾವುಕರಾಗಿದ್ದಾರೆ.
ಒಟ್ಟಿನಲ್ಲಿ ಎಷ್ಟೇ ಸಾಧನೇ ಮಾಡಿದ್ರು, ಅದೆಷ್ಟೇ ಒಳಿತನ್ನ ಮಾಡಿದ್ರು ಎಷ್ಟೇ ಬೆಳದಿದ್ರೂ ಗುರುತಿಸಿಕೊಂಡಿದ್ರು ಅಷ್ಟೇ ವಿಧಿ ಆಟದ ಮುಂದೆ ನಾವೆಲ್ಲಾ ಕೇವಲ ಆಟಗಾರರು ಅಷ್ಟೇ. ಆಟ ಮುಗಿದ ಮೇಲೆ ಗಂಟುಮುಟೆ ಕಟ್ಟಲೇಬೇಕು ಅನ್ನೋದು ಅಕ್ಷರ ಸಹ ಸತ್ಯದ ಮಾತು.. ಆದರೂ ಮಾಡಿದ ಕೆಲಸದ ಮೂಲಕ ಜನರ ಮನಸಲ್ಲಿ ಇಂದಿಗೂ ಚಿರಸ್ಥಾಯಿ ಆಗಿ ಉಳಿಯೋದಿದೆಯಲ್ಲ ಅದು ಸಾವಿಗೂ ಮೀರಿದ ಸಾಧನೆ.. ಆ ಸಾಧನೆಯನ್ನ ಸೌಂದರ್ಯ ಅವ್ರು ಮಾಡಿದ್ದಾರೆ ಅಲ್ವಾ? ಏನಂತೀರಾ?
ಇದನ್ನೂ ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?