ಕರ್ನಾಟಕ ಮಾತ್ರವಲ್ಲ ಇಡೀ ಭಾರತದಾದ್ಯಂತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸದ್ದು ಮಾಡ್ತಿದೆ. ಹೌದು ರಾಜ್ಯ ಮಾತ್ರವಲ್ಲದೆ ದೇಶದಲ್ಲೂ ಕೂಡ ಈ ಪ್ರಕರಣದ ಬಗ್ಗೆ ಸುಮಾರು 11 ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಆದ್ರೆ ಇಷ್ಟು ವರ್ಷಗಳು ಕಳೆದ್ರು ಕೂಡ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಮಾತ್ರವಲ್ಲ ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಪ್ರಮುಖ ಆರೋಪಿ ಅಂತ ಬಿಂಬಿಸಿ ಬಂಧಿಸಲಾಗಿದ್ದ ಸಂತೋಷ್ ರಾವ್ ಅನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಈ ಬೆಳವಣಿಗೆ ಬಳಿಕ ಮತ್ತೆ ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು ಎಲ್ಲ ಕಡೆ ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಜಸ್ಟಿಸ್ ಫಾರ್ ಸೌಜನ್ಯ ಅಭಿಯಾನ ಆರಂಭ ಆಗಿದೆ. ಇನ್ನೊಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವ್ರ ವಿರುದ್ಧವೂ ಕೆಲವರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಅಲ್ದೇ ಇನ್ನೊಂದು ಕಡೆ ಎಸ್‌ಐಟಿ ತನಿಖೆ ಆಗಬೇಕು ಅಂತ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಹೌದು ಸಿಬಿಐ ಅಧಿಕಾರಿಗಳು ತನಿಖೆಯನ್ನು ಸೂಕ್ತವಾಗಿ ನಡೆಸಿಲ್ಲ. ಹೀಗಾಗಿ ಮರು ತನಿಖೆ ಆಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ಆಗ್ತಿರುವ ವಿಚಾರ ಇದೀಗ ಎಲ್ಲರಿಗೂ ಗೊತ್ತಿದೆ. ಆದ್ರೆ ಈ ಮಧ್ಯೆ ಇದೀಗ ಸ್ಯಾಂಡಲ್ವುಡ್ ನಲ್ಲೂ ಕೂಡ ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಅಂತ ಸೌಜನ್ಯ ಪರ ಒಂದು ರೀತಿಯ ಅಭಿಯಾನ ಸೃಷ್ಟಿಯಾಗುವಂತೆ ಕಾಣುತ್ತಿದ್ದು, ನಟ ದುನಿಯಾ ವಿಜಯ್ ಕೂಡ ಸೌಜನ್ಯ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದು, ಫೇಸ್‌ಬುಕ್ ಖಾತೆಯಲ್ಲಿ ಧರ್ಮಸ್ಥಳಕ್ಕೆ ತೆರಳದೆ ಇರಲು ನಿರ್ಧರಿಸಿದ್ದಾರೆ. ಈ ಕುರಿತು ಒಂದಷ್ಟು ಸಾಲುಗಳನ್ನು ಸಹ ಬರೆದುಕೊಂಡಿದ್ದಾರೆ.
ಹೌದು ಅಂದು ಅಕ್ಟೋಬರ್ 9, 2012ರಂದು ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಪ್ರಕರಣ ಇಡೀ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಸ್ಥಳೀಯ ನಿವಾಸಿ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ 17 ವರ್ಷದ ದ್ವಿತೀಯ ಪುತ್ರಿ ಸೌಜನ್ಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇನ್ನು ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದರು. ಆದ್ರೆ ಅಂದು ಕಾಲೇಜು ಮುಗಿಸಿ ನಡೆದುಕೊಂಡು ಬರುವಾಗ ಕಾಣಿಯಾಗಿ, ಮಾರನೇ ದಿನ ಸೌಜನ್ಯ ದಾರಿ ಮಧ್ಯದ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ನೀರ್ದೋಷಿ ಸಂತೋಷ್ ರಾವ್ ನನ್ನ ಆರೋಪಿ ಅಂತ ಬಿಂಬಿಸಿ ಆತನನ್ನ ಜೈಲಿಗೆ ಕಳುಹಿಸಿ ಪ್ರಕರಣದಲ್ಲಿ ದಿಕ್ಕನ್ನೇ ಬದಲಾಯಿಸಲು ಕೆಲವು ಕಾಣದ ಕೈಗಳು 11ವರ್ಷ ಪ್ರಯತ್ನ ಪಟ್ರು ಆದ್ರೆ ಸತ್ಯ ಯಾವತ್ತಿದ್ರೂ ಬೂದಿ ಮುಚ್ಚಿದ ಕೆಂಡದಂತೆ ಇದೀಗ ಸೌಜನ್ಯ ಅತ್ಯಾಚಾರ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಈ ಪ್ರಕರಣದ ಆರೋಪಿ ಸಂತೋಷ್ ರಾವ್ ಅನ್ನು ಖುಲಾಸೆಗೊಳಿಸಿದ್ದ ಬೆನ್ನಲ್ಲೇ ಹತ್ಯೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಲಾಗುತ್ತಿದೆ.
ಇದನ್ನೂ ಓದಿ: ಎಲ್ಲಾ ಮಹಿಳೆಯರೆ ಗಮನಿಸಿ! ಗೃಹಲಕ್ಷ್ಮೀ 2000 ಹಣ ಈ ದಿನ ಬರುತ್ತೆ!? ತಪ್ಪದೇ ನೋಡಿ
ಸೌಜನ್ಯ ಪರ ಧ್ವನಿ ಎತ್ತಿದ ಸ್ಟಾರ್ ನಟ ದುನಿಯಾ ವಿಜಯ್
ಸದ್ಯ ಧರ್ಮಸ್ಥಳದಲ್ಲಿ ಆರಂಭ ಆದ ಈ ಕೂಗು ಈಗ ಬೆಂಗಳೂರಿನವರೆಗೂ ಬಂದು ನಿಂತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಸೌಜನ್ಯ ಕುಟುಂಬಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಸೌಜನ್ಯ ಹಾಗೂ ಕುಟುಂಬಕ್ಕೆ ನ್ಯಾಯ ಸಿಗದೇ ಹೊರತು ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದಿದ್ದಾರೆ. ಹೌದು ದುನಿಯಾ ವಿಜಯ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ, ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು -ಬುದ್ಧ ಎಂದು ಬರೆದು ಫೋಸ್ಟ್ ಮಾಡಿದ್ದರು. ಈ ಮೂಲಕ ಸೌಜನ್ಯ ಕುಟುಂಬಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ ಅಂತಲೇ ಹೇಳಬಹುದು.
ಈಗಾಗ್ಲೇ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ವ್ಯಾಪಿ ಪ್ರತಿಭಟನೆಗಳು ಟೀಕೆಗಳು ಮತ್ತು ಖಂಡನೆ ವ್ಯಕ್ತವಾಗುತ್ತದೆ. ಇದೇ ವಿಚಾರಕ್ಕೆ ಈಗಾಗಲೇ ಹಲವು ಸಂಘ ಸಂಸ್ಥೆಗಳು ಬೀದಿಗೆ ಇಳಿದು ಹೋರಾಟವನ್ನು ಮಾಡುತ್ತಿವೆ. ಸದ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ ರಾವ್ ನನ್ನ ನಿರ್ದೋಷಿ ಅಂತ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಹಾಗಾದರೆ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಹೇಗೆ ನಡೆಯಿತು ಎಂಬ ಅನ್ನೋ ಪ್ರಶ್ನೆಗೆ ಸಂಬಂಧಪಟ್ಟಂತೆ ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ನಡೆಯಬೇಕು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ನಟ ಸೌಜನ್ಯ ಪರ ಮಾತನಾಡಿರೋದು ಒಂದು ರೀತಿಯ ಒತ್ತಡ ಏರುವ ಕೆಲ್ಸವಾಗಿದ್ದು ಸಾಧ್ಯವಾದಷ್ಟು ಬೇಗ ಸೌಜನ್ಯ ಸಾವಿಗೆ ನ್ಯಾಯ ಸಿಗುತ್ತೆ ಅಂತ ಕೆಲವರು ಹೇಳ್ತಿದ್ದರೆ. ಇನ್ನು ಕೆಲವರು ನೀವು ಹೇಳಿದ್ದು ಸತ್ಯ ಮತ್ತು ಕೆಲವರು ಕಾಣದ ಕೈಗಳು ಮಾಡಿದ ಕೆಲ್ಸಕ್ಕೆ ದೇವರನ್ನ ಹೊಣೆ ಮಾಡೋದು ಸರಿಯಲ್ಲ ಅಂತಿದ್ದಾರೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರಕರಣ ಯಾವ ಹಂತಕ್ಕೆ ತಲುಪುತ್ತೋ ನೋಡೋಣ.
ಇದನ್ನೂ ಓದಿ: ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆ ವೈಬ್ಸ್; ಅದ್ದೂರಿಯಾಗಿ ನಡೀತು ಸಂಜು ವೇಡ್ಸ್ ಪಲ್ಲವಿ ಮದುವೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram