ಸೌಜನ್ಯ ಕೇಸ್ ನಲ್ಲಿ ಸಂತೋಷ್ ರಾವ್ ಪರ ನಿಂತ ಈ ವಕೀಲರು ಯಾರು ಗೊತ್ತಾ? ಒಂದು ರೂಪಾಯಿ ಹಣ ಪಡೆಯದೇ ಸಂತೋಷ್ ರಾವ್ ಪರ ನಿಂತಿದ್ದೇಕೆ?

ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ್ದ ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನಿರ್ದೋಷಿ ಅಂತ ಬಿಡುಗಡೆಗೊಳಿಸಿರೋದು ನಿಮ್ಮೆಲ್ಲರಿಗೂ ಗೊತ್ತಿರುವಂಥ ವಿಚಾರ. ಬರೋಬ್ಬರಿ 11 ವರ್ಷದ ನಂತರ ಸಿಬಿಐ ನ ವಿಶೇಷ ನ್ಯಾಯಾಲಯ ತೀರ್ಪನ ನೀಡಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012ರಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಅಂತ ರಾಜ್ಯಾದ್ಯಂತ ಹೋರಾಟಗಳು ಭುಗಿಲೆತ್ತಿದ್ವು. ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದ ಸೌಜನ್ಯಾಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿ ಎಸೆದು ಹೋಗಿರುವ ಘಟನೆಗೆ ಸಂಬಂಧಪಟ್ಟಂತೆ ಬೆಳ್ತಂಗಡಿ ತಾಲೂಕಿನ ಅತ್ಯಂತ ಹೋರಾಟಗಳು ತೀವ್ರವಾದ್ವು. ಅಲ್ದೇ ಸೌಜನ್ಯ ತಂದೆ ತನ್ನ ಮಗಳು ಕಾಣೆಯಾಗಿದ್ದಾಳೆ ಅಂತ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಿದ್ರು. ಅಲ್ಲಿ ಬಸ್ ಇಳಿದು ಬಂದಂತಹ ಸಂದರ್ಭದಲ್ಲಿ ಸೌಜನ್ಯ ಎಲ್ಲಿ ಹೋಗಿರಬಹುದು ಅಂತ ಎಲ್ಲಾ ಕಡೆ ಸುತ್ತಾಡಿದ್ರು ಆದ್ರೆ ಮರುದಿನ ಅದೇ ಜಾಗದ ಮನ್ನಸಂಕ ಅನ್ನುವಲ್ಲಿ ಸೌಜನ್ಯಾಳ ಮೃತ ದೇಹ ಅರೆಬೆತ್ತಲೆಯಾಗಿ ಬಿದ್ದಿತ್ತು.

WhatsApp Group Join Now
Telegram Group Join Now

ಇನ್ನು ಹಿಂದಿನ ದಿನ ಭಾರಿ ಮಳೆಯಾಗಿದ್ದರೂ ಕೂಡ ಸೌಜನ್ಯ ಬಟ್ಟೆ ಒದ್ದೆಯಾಗದ ಕಾರಣ ತನಿಖೆಯನ್ನು ಬಹಳ ಗಂಭೀರವಾಗಿ ಪೋಲಿಸ್ರು ತೆಗೆದುಕೊಳ್ಳುವ ಅನಿವಾರ್ಯವಾಗಿತ್ತು. ಹೀಗಾಗಿ ಪೊಲೀಸರು ತನಿಖೆಯನ್ನು ಕೈಕೊಂಡ್ರು. ಆಗ ನಾಲ್ಕು ದಿನಗಳ ಬಳಿಕ ಬಾಹುಬಲಿ ಬೆಟ್ಟದಲ್ಲಿ ಮಲಗಿದ್ದಂತಹ ಸಂತೋಷ್ ರಾವ್ ನನ್ನ ಅನುಮಾನಾಸ್ಪದವಾಗಿ ಪೊಲೀಸರು ಬಂಧಿಸ್ತಾರೆ. ನಂತರ ರಾಜ್ಯಾದ್ಯಂತ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಸಂತೋಷ ರಾವ್ ಆರೋಪಿ ಅಂತ ನಿರ್ಧಾರ ಮಾಡಿ ಸಿಬಿಐ ತನಿಖೆಗೆ ವಹಿಸಲಾಗುತ್ತೆ. ಅದ್ರಿಗ ಬರೋಬ್ಬರಿ 11ವರ್ಷದ ಬಳಿಕ ಸಂತೋಷ್ ರಾವ್ ಆರೋಪಿ ಅಲ್ಲ, ನಿರ್ದೋಷಿ ಅಂತ ಪರಿಗಣಿಸಿ ಬಿಡುಗಡೆ ಮಾಡಿದ್ದಾರೆ. ಇದೆಲ್ಲಾ ಇಂತವರಿಗೂ ಗೊತ್ತಿರುವ ವಿಚಾರ ಬಿಡಿ. ಅಲ್ದೇ ಆತನನ್ನ ಬಿಡಬಾರದಾಗಿತ್ತು ಅಂತಲೂ ಸಾಕಷ್ಟು ಜನ ಮಾತನಾಡಿಕೊಂಡಿದ್ದಾರೆ. ಆದ್ರೆ ಅಸಲಿಗೆ ಸ್ನೇಹಿತರೆ ಸಂತೋಷ್ ರಾವ್ ಆರೋಪಿಯೇ ಅಲ್ಲ ಆತನಿಗೂ ಸೌಜನ್ಯ ಅವ್ರ ಕೊಲೆಗೂ ಸಂಬಂಧವೆ ಇಲ್ಲ ಅನ್ನೋದನ್ನ ಸಾಬೀತು ಮಾಡಿದ ಆ ವಕೀಲ ಯಾರು? ಆರೋಪಿ ಅಂತ ಹೇಳ್ತಿದ್ದ ಸಂತೋಷ್ ರಾವ್ ಬಳಿ ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ಆತನನ್ನ ಈ ಚಕ್ರವ್ಯೂಹದಿಂದ ಹೊರಗೆ ಕರೆತಂದಿದ್ದು ಯಾಕೆ ಅನ್ನೋ ಕುತೂಹಲಕಾರಿ ವಿಚಾರವನ್ನ ನೋಡೋಣ ಬನ್ನಿ.

ಇದನ್ನೂ ಓದಿ: ಸೌಜನ್ಯ ಕೊಲೆ ಕೇಸ್ ಬರಲಿದ್ಯಾ ತೆರೆ ಮೇಲೆ; ಸ್ಟೋರಿ ಆಫ್ ಸೌಜನ್ಯ ಆಗಿ ತೆರೆ ಮೇಲೆ ಬರಲಿದೆ ಚಿತ್ರ

ಒಂದು ರೂಪಾಯಿ ಪಡೆಯದೆ ಸಂತೋಷ್ ರಾವ್ ನಿಂತ ಈ ವಕೀಲರು

ಹೌದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳುಸುವಂತೆ ಮಾಡಿದ್ದ ಸೌಜನ್ಯಳ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನನ್ನ ಆರೋಪಿ ಮಾಡ್ಲೇಬೇಕು ಅಂತ ನಿರ್ಧರಿಸಿದ ಕೆಲವೊಂದು ವ್ಯವಸ್ಥೆಗಳು ಆತನಿಗೆ ಕೊಟ್ಟ ಚಿತ್ರ ಹಿಂಸೆ ಅಷ್ಟಿಸ್ಟಲ್ಲ ಬಿಡಿ. ದೇವರ ದರ್ಶನಕ್ಕೆ ಬಂದು ರೂಮ್ ಸಿಗದೇ ಬಾಹುಬಲಿ ಬೆಟ್ಟದ ಮೇಲೆ ಆಗ ತಾನೇ ಬಂದು ಮಲಗಿದ ವ್ಯಕ್ತಿಯನ್ನ ಅಲ್ಲಿನ ಒಂದಷ್ಟು ಜನ ಹಿಡಿದು ಮನಸ್ಸಿಗೆ ಬಂದಂತೆ ತಾಳಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ. ರಾಜ್ಯದಲ್ಲಿ ಪ್ರತಿಭಟನೆ ಹೋರಟಗಳು ಹೆಚ್ಚಾಗುತ್ತಿದ್ದ ಕಾರಣ ಪೊಲೀಸರಿಗೂ ಅದೇ ಬೇಕಾಗಿದದ್ದು ಅವ್ನನ್ನ ಹಿಡಿದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಕೊಡಬಾರದ ಹಿಂಸೆ ಮತ್ತು ನರಕ ತೋರಿಸಿ ಕೊನೆಗೆ ಅಪ್ಪಟ ದೈವ ಭಕ್ತರಾಗಿದ್ದ ಸಂತೋಷ್ ಕೊನೆಗೆ ತಾನೇ ಆರೋಪಿ ಅಂತ ಒಪ್ಪಿಕೊಳ್ಳುವಂತೆ ಮಾಡಿ ಪೊಲೀಸರು ಕೈ ತೊಳೆದುಕೊಳ್ಳುತ್ತಾರೆ.

ನಂತರ ಪ್ರಕರಣ ಸಿಬಿಐ ಅಂಗಳ ತಲುಪುತ್ತೆ ಇದಾದ ಬಳಿಕ 2016ರಲ್ಲಿ ಅಂದ್ರೆ 4ವರ್ಷಗಳ ಬಳಿಕ ಹಿರಿಯ ವಕೀಲರ ಮಾತಿನಂತೆ ಪುತ್ತೂರಿನ ಕೊಳೆತಿಗೆಯ ವಕೀಲ ಮೋಹಿತ್ ಕುಮಾರ್ ಸಂತೋಷ್ ಪರ ನಿಂತು ಕೇಸ್ ವಹಿಸಿಕೊಳ್ಳುತ್ತಾರೆ. ಇವ್ರಿಗೆ ನವೀನ್ ಕುಮಾರ್ ಎನ್ನುವ ಮತ್ತೊಬ್ಬರು ವಕೀಲರು ಸಾಥ್ ಕೊಡ್ತಾರೆ. ಒಂದು ವರ್ಷದ ವಾದ ವಿವಾದಗಳ ನಂತರ ಈ ಕೇಸ್ ನಲ್ಲಿ ಮೋಹಿತ್ ಕುಮಾರ್ ಗೆಲ್ತಾರೆ ಸಿಬಿಐ ನ್ಯಾಯಾಲಯ ಸಂತೋಷ್ ರಾವ್ ನನ್ನ ನೀರ್ದೋಷಿ ಅಂತ ನಿರ್ಧಾರ ಮಾಡಿ ಆತನಿಗೆ ಕೇಸ್ ನಿಂದ ಮುಕ್ತಿ ಸಿಗುವಂತೆ ಮಾಡಿತ್ತು. ಆದ್ರೆ ಇಲ್ಲಿ ಸಂತೋಷ್ ಪರ ನಿಂತ ವಕೀಲರಿಗೆ ಸವಾಲುಗಳು ಸಾಕಷ್ಟಿದ್ವು.

ಆದ್ರೂ ಕೂಡ ಅದನ್ನೆಲ್ಲ ಭೇಧಿಸಿ, ಸಂತೋಷ್ ಆರೋಪಿ ಅಲ್ಲ ಅನ್ನೋದನ್ನ ಸಾಬೀತು ಮಾಡಿದ್ರು. ಸ್ಥಳದಲ್ಲೇ ಇಲ್ಲದ ಸಂತೋಷ್ ನನ್ನ ಆರೋಪಿಯನ್ನಾಗಿ ಮಾಡಿದ್ದು, ಯಾವುದೇ ವೈದ್ಯಕೀಯ ವರದಿಗಳಿಲ್ಲದೆ ಸಂತೋಷ್ ನನ್ನ ಆರೋಪಿಯನ್ನಾಗಿ ಮಾಡಿದ್ದು, ಸಂತೋಷ್ ರಾವ್ ನ ತಂದೆ ಮತ್ತು ಅಣ್ಣ ನನ್ನ ಕರ್ಸಿ ಎದುರಿಸಿ ಬೆದರಿಸಿ ಕೃತ್ಯ ಮಾಡಿದ್ದು ತಾನೇ ಎಂಬಂತೆ ಸಂತೋಷ್ ನನ್ನ ಒಪ್ಪಿಸಿದ್ದು ಎಲ್ಲವು ಕೂಡ ಬಯಲಾಗುತ್ತೆ. ಆದ್ರೆ ಸ್ನೇಹಿತರೆ ಇಲ್ಲಿ ಮತ್ತೊಂದು ಇಂಟರ್ಸ್ಟ್ಟಿಂಗ್ ವಿಚಾರ ಏನ್ ಗೊತ್ತಾ ಸಂತೋಷ್ ರಾವ್ ನ ಪರ ವಾದ ಮಂಡಿಸಿದ ವಕೀಲ ಅವರಿಂದ ಒಂದು ರೂಪಾಯಿ ಹಣ ತೆಗೆದುಕೊಂಡಿರಲಿಲ್ಲ. ಕಾರಣ ಸಂತೋಷ್ ಬಳಿ ಹಣ ಇರಲಿಲ್ಲ. ತಂದೆ ತಾಯಿ ಇಬ್ರು ಕೂಡ ಗೌರವನ್ವಿತ ಸ್ಥಾನದಲ್ಲಿದ್ದವರೇ ಆಗಿದ್ರು ಅಂತಹ ಶ್ರೀಮಂತರಾಗಿರಲಿಲ್ಲ.

ಸಂತೋಷ್ ಮತ್ತು ಕುಟುಂಬ ಅನುಭವಿಸಿದ ನರಕ ಯಾರಿಗೂ ಗೊತ್ತಿಲ್ಲ!

ಇನ್ನು ಮಗ ಅತ್ಯಾಚಾರದ ಆರೋಪ ಹೊತ್ತು ಜೈಲಿಗ್ ಸೇರಿದ ಬೆನ್ನೆಲೆ ತಾಯಿ ಕೊನೆಯುಸಿರು ಎಳೆಯುತ್ತಾರೆ. 2017ರಲ್ಲಿ ಜಾಮೀನಿನ ಮೇಲೆ ಹೊರ ಬಂದ ಸಂತೋಷ್ ಪುಟ್ಟದಾದ ದೇವಸ್ಥಾನ ಒಂದರಲ್ಲಿ ಪೂಜೆ ಪುನಸ್ಕಾರ ಗಳನ್ನ ಮಾಡಲು ಆರಂಭಿಸಿದ್ದು ಈಗಲೂ ಕೂಡ ತಾಯಿ ಇಲ್ಲದ ಮನೆಗೆ ತನು ಹೋಗಲ್ಲ ಅಂತ ಅಲ್ಲಿಯೇ ಜೀವನ ದೂಡುತ್ತಿದ್ದಾರೆ. ಆದ್ರೆ ಈ 11ವರ್ಷದಲ್ಲಿ ಸಂತೋಷ್ ಹಾಗೂ ಆತನ ಕುಟುಂಬ ಅನುಭವಿಸಿದ ಕಷ್ಟಕ್ಕೆ ಖಂಡಿತಾ ಬೆಲೆ ಕಟ್ಟೋಕೆ ಆಗೋದಿಲ್ಲ. ಆದ್ರೆ ಈ ಮಧ್ಯೆ ವಕೀಲ ಮೋಹಿತ್ ಕುಮಾರ್ ಮಾಡಿದ ಸಹಾಯ ಇದ್ಯಲ್ಲ ನಿಜಕ್ಕೂ ಮೆಚ್ಚುವಂತದ್ದು. ಒಳ್ಳೆಯವರು ಅನ್ನೋರ ಬಳಿ ಜನ ನಿಲ್ತಾರೆ. ಆದ್ರೆ ಕೆಟ್ಟವರು ಅಂದಾಗ ಯಾರು ಇರಲ್ಲ ಅಂತಹ ಸಂದರ್ಭದಲ್ಲಿ ನಿಜಕ್ಕೂ ಸೊಂತೋಷ್ ರಾವ್ ಮತ್ತು ಕುಟುಂಬಕ್ಕೆ ಯಾವುದೇ ಪ್ರತಿಫಲ ಇಲ್ಲದೆ ಜೊತೆಯಾಗಿ ನಿಂತು ಒಳಿತನ್ನ ಮಾಡಿದವ್ರು ವಕೀಲ್ ಮೋಹಿತ್ ಕುಮಾರ್.

ಇದನ್ನೂ ಓದಿ: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ; ಸಾಂಸಾರಿಕ ಜೀವನದ ಮೇಲೆ ಸಿತಾರಗೆ ಯಾಕಿಷ್ಟು ಜಿಗುಪ್ಸೆ!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram