ಸ್ಪಂದನಾ ಮೃತದೇಹ ತರೋದಕ್ಕೆ ಯಾಕೆ ಇಷ್ಟು ಲೇಟಾಯ್ತು? ಇದಕ್ಕೆ ಇರೋ ರೂಲ್ಸ್ ಏನು? ಎಷ್ಟು ದುಡ್ಡು ಕೊಡಬೇಕು..

ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ್ರು. ಸ್ಪಂದನಾ ಅವರು ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸಕ್ಕೆ ತೆರಳಿದ್ದ ವಿಜಯ ರಾಘವೇಂದ್ರ ಪತ್ನಿ ನಿಧನರಾಗಿದ್ದು, ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಸಾಧ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಆದ್ರೆ ಮೃತಪಟ್ಟ 2ದಿನಗಳ ನಂತರ ಅವ್ರ ಮೃತದೇಹವನ್ನ ಬೆಂಗಳೂರಿಗೆ ತರಲಾಗಿದೆ. ಇನ್ನು ಸಂಬಂಧಿಕರ ಜೊತೆ ಸ್ಪಂದನ ಬ್ಯಾಂಕಾಕ್​ಗೆ ಹೋಗಿದ್ದರು. ಆದ್ರೆ ಅಲ್ಲಿ ಮಲಗಿದ್ದ ವೇಳೆ ಸ್ಪಂದನಾಗೆ ಲೋ ಬಿಪಿ ಆಗಿದ್ದು, ನಿಧನರಾಗಿದ್ದಾರೆ ಅಂತ ಹೇಳಲಾಗಿತ್ತು. ಅಲ್ದೆ ಸಂಬಂಧಿಕರ ಜೊತೆ ಸ್ಪಂದನಾ ಬ್ಯಾಂಕಾಕ್​ಗೆ ತೆರಳಿದ್ದರು, ಆಗ ವಿಜಯ ರಾಘವೇಂದ್ರ ಅವರಿಗೆ ಅಲ್ಲೇ ಶೂಟಿಂಗ್ ಇತ್ತು.

WhatsApp Group Join Now
Telegram Group Join Now

ಶೂಟಿಂಗ್ ಮುಗಿಸಿದ ನಂತರ ವಿಜಯ್ ಅವರು ಪತ್ನಿ ಸ್ಪಂದನಾ ಅವ್ರ ಜೊತೆಗೆ ಇದ್ರು. ಆದ್ರೆ ಬಳಿಕ ರಾತ್ರಿ ವೇಳೆ ಈ ಘಟನೆ ನಡೆದಿದೆ. ಆದ್ರೆ ಮೃತಪಟ್ಟ 2ದಿನಗಳ ಬಳಿಕ ಇದೀಗ ಮೃತದೇಹ ಬೆಂಗಳೂರಿಗೆ ಬಂದಿದೆ. 2ದಿನಗಳ ಕಾಲ ಅಲ್ಲೇ ನಡೆದಂತ ಪ್ರಕ್ರಿಯೆಗಳೇನು??? ಇಷ್ಟು ತಡವಾಗಿ ಎಲ್ಲವು ಆಗಿದ್ದೀಕೆ? ಅಲ್ಲಿ ನಡೆಯುವಂತಹ ಪ್ರಕ್ರಿಯೆಗಳಾದ್ರೂ ಏನು ಹೀಗೆ ಎಲ್ಲವು ಕೂಡ ನಮ್ಮಲ್ಲಿ ಪ್ರಶ್ನೆ ಮೂಡುತ್ತೆ. ಹಣ ಖರ್ಚು ಮಾಡೋಕಾಗದ ಪರಿಸ್ಥಿತಿಯಲ್ಲಿ ವಿಜಯ್ ರಾಘವೇಂದ್ರ ಕುಟುಂಬ ಇಲ್ಲ. ಸಲದಕ್ಕೆ ಎಲ್ಲಾ ರೀತಿಯ ಇನ್ಫ್ಲುಯೆನ್ಸ್ ಇರುವ ಕುಟುಂಬ ಹೀಗಾಗಿ ಇದೆಲ್ಲ ಇಷ್ಟು ತಡವಾದದ್ದು ಯಾಕೆ ಅನ್ನುವ ಅನುಮಾನಕ್ಕೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

ಬೇರೆ ದೇಶದಲ್ಲಿರೋ ನೀತಿ ನಿಯಮಗಳೇನು? ಎಷ್ಟು ಹಣ ಕೊಡಬೇಕು

ಹೌದು ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್​​​​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತದೇಹ ಸಾಧ್ಯ ಬೆಂಗಳೂರಿಗೆ ತಲುಪಿದೆ. ಇದಕ್ಕೆ ಕೆಲವೊಂದಷ್ಟು ನೀತಿ ನಿಯಮ ರೀತಿ ರಿವಾಜುಗಳಿದೆ. ಹೌದು ಥಾಯ್ಲೆಂಡ್​​​​ನಿಂದ ಭಾರತಕ್ಕೆ ಮೃತ ದೇಹ ತರಲು ಕೆಲವು ರೀತಿ ರಿವಾಜುಗಳಿವೆ. ಮೊದಲಿಗೆ ಆಸ್ಪತ್ರೆಯಿಂದ, ವೈದ್ಯಕೀಯ ವರದಿ, ಮರಣ ಪ್ರಮಾಣ ಪತ್ರ ಪಡೆಯಬೇಕು. ಆ ನಂತರ ಸಂಪೂರ್ಣವಾದ ಪೊಲೀಸ್ ರಿಪೋರ್ಟ್ ಪಡೆದುಕೊಳ್ಳಬೇಕು. ಆ ರಿಪೋರ್ಟ್ ಬೇರೆ ಭಾಷೆಯಲ್ಲಿದ್ದರೆ ಅದನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಿಸಬೇಕು. ಇದರ ಜೊತೆಗೆ ಮೃತರ ಪಾಸ್ ಪೋರ್ಟ್ ಹಾಗೂ ವೀಸಾ ಪ್ರತಿಯ ಜೆರಾಕ್ಸ್ ಕೊಡಬೇಕು. ಇಷ್ಟನ್ನು ಭಾರತೀಯ ಎಂಬಸ್ಸಿಗೆ ನೀಡಬೇಕು. ಇದಾದ ಬಳಿಕ‌ ಎಂಬಸ್ಸಿ ಮೃತದೇಹ ರವಾನೆಗೆ ಸಂಬಂಧಿಸಿದಂತೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಈ ಎಲ್ಲ ಪ್ರಕ್ರಿಯೆಗಳ ಬಳಿಕವೇ ಮೃತದೇಹ ರವಾನೆ ಮಾಡಲಾಗುತ್ತದೆ. ಇಷ್ಟು ಪ್ರಕ್ರಿಯೆಗಳು ನಡೆಯುವುದು ಅಷ್ಟು ಸುಲಭವಲ್ಲ.

ಇನ್ನು ವಿದೇಶದಲ್ಲಿ ಯಾವುದೇ ಪ್ರಜೆ ನಿಧನ ಹೊಂದಿದರೂ, ಅವರ ಮೃತದೇಹ ತರುವುದು ಸುಲಭವಲ್ಲ. ಅದರಲ್ಲೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ನಿಧನ ಹೊಂದಿದರೆ ಪ್ರಕ್ರಿಯೆ ಇನ್ನೂ ಕಠಿಣವಾಗಿರುತ್ತದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರವಾಸಕ್ಕೆಂದು ಬಂದು ಮೃತರಾದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ತಡವಾಗುವುದು ಸಾಮಾನ್ಯ. ಭಾರತದಂತೆಯೇ ಅಲ್ಲಿಯೂ ಕೂಡ ಸರಕಾರಿ ಆಸ್ಪತ್ರೆಗಳಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆ ವರದಿಯನ್ನು ಮೊದಲು ಪೊಲೀಸರು ಪಡೆದುಕೊಳ್ಳುತ್ತಾರೆ. ಪೊಲೀಸರಿಗೆ ಮರಣೋತ್ತರ ವರದಿ ಬಂದ ತಕ್ಷಣವೇ ಪರಿಶೀಲಿಸಿ ಅದು ಸಹಜ ಸಾವು ಎಂದು ತಿಳಿದ ಬಳಿಕ ಕುಟುಂಬದವರಿಗೆ ಮೃತದೇಹ ನೀಡಲಾಗುತ್ತದೆ.

ಮರಣೋತ್ತರ ವರದಿ, ಮರಣ ಪ್ರಮಾಣ ಪತ್ರ ಹಾಗೂ ಪೊಲೀಸ್‌ ವರದಿಗಳನ್ನು ಪಡೆದುಕೊಂಡು ವಿಜಯ್‌ ರಾಘವೇಂದ್ರ ಬ್ಯಾಂಕಾಕ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದ್ದಾರೆ. ತದನಂತರ ರಾಯಭಾರ ಕಚೇರಿ ಮತ್ತು ಸ್ಥಳೀಯ ಆಡಳಿತಗಳು ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಕಸ್ಟಮ್ಸ್‌ ಕ್ಲಿಯರೆನ್ಸ್‌ ನೀಡಿವೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರವಷ್ಟೇ ಮೃತದೇಹವನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ. ಅಲ್ಲಿಯೂ ಕೆಲವು ಪ್ರಕಿಯೆ ಮುಗಿಸಿಕೊಂಡು ಬೆಂಗಳೂರಿಗೆ ತರಬೇಕು. ಹಾಗಾಗಿ ಮೃತದೇಹವನ್ನು ತರೋದು ಇಷ್ಟು ತಡವಾಗಿದೆ ಅಂತ ಹೇಳಬಹುದು.

ಇದನ್ನೂ ಓದಿ: ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ; ಡಿಕೆಡಿ ವೇದಿಕೆಯಲ್ಲಿ ಕಣ್ಣಿರಿಟ್ಟಿದ್ದ ವಿಜಯ್ ರಾಘವೇಂದ್ರ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram