ಆಧಾರ್ ಕಾರ್ಡ್ ಒಂದು ಸಾಮಾನ್ಯ ಗುರುತಿನ ಚೀಟಿಯಂತೆ ಎಲ್ಲರ ಬಳಿಯೂ ಮೊದ ಮೊದಲು ಇತ್ತು ಆದ್ರೆ ಕಳೆದ ಕೆಲ ವರ್ಷದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಆಧಾರ್ ಕಡ್ಡಾಯ ಮಾಡಿರೋದ್ರಿಂದ ಆಧಾರ್ ಕಾರ್ಡ್ ಅಂದ್ರೆ ಸಾಕು ಒಂದು ವಿಶಿಷ್ಟ ಗುರುತಿನ ಚೀಟಿ ಅಂತ ಎಲ್ಲರು ಅಂದುಕೊಂಡಿದ್ದಾರೆ. ಅದ್ರ ಪ್ರಮುಖ್ಯತೆಯ ಬಗ್ಗೆ ಆರೀತಿರುವ ಪ್ರತಿಯೊಬ್ಬರ ಬಳಿಯೂ ಆಧಾರ್ ಇದ್ದೇ ಇರುತ್ತೆ. ಮೊದಲೆಲ್ಲ ಆಧಾರ್ ಕಾರ್ಡ್ ಮಾಡಿಸೋದು ಅಷ್ಟು ಕಷ್ಟ ಏನಿರಲಿಲ್ಲ. ಆದ್ರೂ ಈಗ ಕಾಲ ಬದಲಾಗಿದೆ ಹೀಗಾಗಿ ಆಧಾರ್ ಮಾಡಿಸಿಕೊಳ್ಳೋದ್ರಲ್ಲೂ ಬದಲಾವಣೆ ಆಗಿದೆ ಅಂತ ಹೇಳಬಹುದು. ಹೌದು ಕೇಂದ್ರ ಸರ್ಕಾರವು ಪ್ರತಿಯೊಂದು ಸರ್ಕಾರಿ ಕಾರ್ಯಕ್ಕೂ ಆಧಾರ್ ಕಾರ್ಡ್ನ್ನು ಕಡ್ಡಾಯಗೊಳಿಸಿದೆ. ಇದೀಗ ಆಧಾರ್ ಕಾರ್ಡ್ಗೆ ಮೋದಿ ಸರ್ಕಾರವು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ಇನ್ಮುಂದೆ ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿವಿಧ ಬದಲಾವಣೆಗಳು ಉಂಟಾಗಲಿದೆ.
ರಾಜ್ಯ ಸರ್ಕಾರವು ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡುವವರ ವೆರಿಫಿಕೇಷನ್ ಮಾಡಲಿದೆ. ಪಾಸ್ಪೋರ್ಟ್ ದೃಢೀಕರಣ ಮಾಡಲು ಯಾವೆಲ್ಲ ಹಂತಗಳನ್ನು ಅನುಸರಿಸಲಾಗುತ್ತದೆಯೋ ಅದೇ ಮಾದರಿಯಲ್ಲಿಯೇ ಆಧಾರ್ ಕಾರ್ಡ್ ವೆರಿಫಿಕೇಷನ್ ವ್ಯವಸ್ಥೆಯನ್ನೂ ಇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಆಧಾರ್ ಕಾರ್ಡ್ ವೆರಿಫಿಕೇಷನ್ ಮಾಡುತ್ತಿತ್ತು. ಇನ್ಮುಂದೆ ಈ ಜವಾಬ್ದಾರಿಯು ಆಯಾ ರಾಜ್ಯ ಸರ್ಕಾರಗಳ ಮೇಲೆ ಇರಲಿದೆ. ಹಾಗಾದ್ರೆ ಇನ್ಮುಂದೆ ಆಧಾರ್ ಪಡೆಯೋದು ಹೇಗೆ, ಅರ್ಜಿ ಸಲ್ಲಿಸಿದ ಎಷ್ಟು ದಿನಕ್ಕೆ ಆಧಾರ್ ನಮ್ಮ ಕೈ ಸೇರುತ್ತೆ ಅದಕ್ಕಾಗಿ ಏನೆಲ್ಲಾ ಮಾಡಬೇಕು ಪ್ರತಿಯೊಂದು ಮಾಹಿತುಯನ್ನ ನೋಡೋಣ ಬನ್ನಿ., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಆಧಾರ್ ಕಾರ್ಡ್ ಪಡೆಯೋದು ಇನ್ಮುಂದೆ ಕಷ್ಟ ಕಷ್ಟ
ಹೌದು ಇನ್ಮುಂದೆ ಆಧಾರ್ ಕಾರ್ಡ್ 180 ದಿನ ಪಡೆಯಲು ಬೇಕಾಗಬಹುದು ಅಂತ ಹೇಳಲಾಗುತ್ತಿದೆ. ಈ ಹೊಸ ನಿಯಮಗಳ ಬಳಿಕ ಇನ್ಮೇಲೆ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ನ್ನು ಪಡೆಯಲು 180 ದಿನಗಳ ಕಾಲ ಕಾಯಬೇಕಾಗಿ ಬರಲಿದೆ. ನೀವು ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ಬಳಿಕ ಯುಐಡಿಎಐ ಅರ್ಜಿಯನ್ನು ನೀವು ತಿಳಿಸಿದ ವಿಷಯವು ಸರಿಯಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಲಿದೆ. ಇದಾದ ಬಳಿಕ ಅರ್ಜಿಯನ್ನು ಸರ್ವೀಸ್ ಪ್ಲಸ್ ಪೋರ್ಟಲ್ಗೆ ವರ್ಗಾವಣೆ ಮಾಡಲಿದೆ. ಇದಾದ ಬಳಿಕ ನಿಮ್ಮ ಅರ್ಜಿಯ ಭೌತಿಕ ದೃಢೀಕರಣ ಕಾರ್ಯ ನಡೆಯಲಿದೆ. ಬಳಿಕ ಎಸ್ಡಿಎಂ ಮಟ್ಟದಲ್ಲಿ ನಿಮಗೆ ಆಧಾರ್ ಕಾರ್ಡ್ ನೀಡಲು ಅನುಮತಿ ಸಿಗಲಿದೆ. ಒಂದು ವೇಳೆ ಆಧಾರ್ಗಾಗಿ ನೀವು ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ದೋಷಗಳು ಕಂಡು ಬಂದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಹೌದು 18 ವರ್ಷ ತುಂಬಿದವರಿಗೆ ಹೊಸ ವ್ಯವಸ್ಥೆಯನ್ನ ಜಾರಿ ಮಾಡಲಾಗ್ತಿದೆ. ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರ ನೀಡಿರುವ ಸೂಚನೆಯ ಪ್ರಕಾರ 18 ವರ್ಷ ತುಂಬಿದವರಿಂದ ಈ ಹೊಸ ಪ್ರಕ್ರಿಯೆಯು ಆರಂಭಗೊಳ್ಳಲಿದೆ. ಆದರೆ ಈಗಾಗಲೇ ಯಾರ್ಯಾರ ಬಳಿಯಲ್ಲಿ ಆಧಾರ್ ಕಾರ್ಡ್ ಇದೆಯೋ ಅವರು ಈ ಹೊಸ ವ್ಯವಸ್ಥೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಹೊಸದಾಗಿ ಆಧಾರ್ ಕಾರ್ಡ್ ಪಡೆದುಕೊಳ್ಳಬೇಕು ಅಂದುಕೊಂಡವರು ಈ ವಿಷಯವನ್ನ ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಇನ್ಮುಂದೆ ಆಧಾರ್ ಕಾರ್ಡ್ಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ ಪಡೆಯಲು ಕಡ್ಡಾಯವಾಗಿ 180 ದಿನಗಳ ಕಾಲ ಕಾಯಬೇಕಿದೆ ಇದು ಅನಿವಾರ್ಯ ಕೂಡ. ಯಾಕಂದ್ರೆ ಈಗಾಗ್ಲೇ ತಿಳಿಸಿರುವಂತೆ ಆಧಾರ್ ಕಾರ್ಡ್ ಅರ್ಜಿ ಸಲ್ಲಿಕೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಅರ್ಜಿದಾರರು ಇವುಗಳನ್ನ ಪಾಲಿಸಲೇಬೇಕು. ಅದರಲ್ಲೂ ಆಧಾರ್ ಗಾಗಿ ಅರ್ಜಿ ಸಲ್ಲಿಸುವಾಗ ಸ್ಥಳದಲ್ಲಿ ನಿಮ್ಮ ಉಪಸ್ಥಿತಿ ಅತೀ ಮುಖ್ಯವಾಗುತ್ತದೆ. ಹೌದು ಭೌತಿಕ ದೃಢೀಕರಣ ನಡೆಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು ಹಾಜರಿರುವುದು ಕಡ್ಡಾಯವಾಗಿದೆ. ಹೀಗಾಗಿ ನೀವು ನಿಮ್ಮ ಆಧಾರ್ ಅರ್ಜಿ ಸಲ್ಲಿಸಿದ ಸ್ಥಳದಿಂದ ದೂರದಲ್ಲಿ ವಾಸ್ತವ್ಯ ಹೂಡಿರುವ ವ್ಯಕ್ತಿಯಾಗಿದ್ದರೆ ನಿಮಗೆ ಭೌತಿಕ ವೆರಿಫಿಕೇಷನ್ಗೆ ಬರುವಂತೆ ಮೊದಲೇ ಸೂಚನೆ ನೀಡಲಾಗುತ್ತದೆ. ಅನಂತರ ರಾಜ್ಯ ಸರ್ಕಾರದ ಅನುಮತಿ ಇದಕ್ಕೆ ಅನಿವಾರ್ಯವಾಗಿದ್ದು, ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರದ ನಿರ್ದೇಶನದ ಅನುಸಾರ ರಾಜ್ಯ ಸರ್ಕಾರವು ಫಿಸಿಕಲ್ ವೆರಿಫಿಕೇಶನ್ಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ಸಬ್ ಡಿವಿಷನ್ ಮಟ್ಟದಲ್ಲಿ ಎಸ್ಡಿಎಂ ಅಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ವಹಿಸಲಿದೆ. ಈ ಅಧಿಕಾರಿಗಳು ನಿಮ್ಮ ಹೊಸ ಆಧಾರ್ ಕಾರ್ಡ್ ಅರ್ಜಿಯ ವೆರಿಫಿಕೇಷನ್ ಮಾಡಲಿದ್ದಾರೆ, ಇಲ್ಲಿ ನಿಮ್ಮ ಆಧಾರ್ ಅರ್ಜಿಗೆ ದೃಢೀಕರಣ ಸಿಕ್ಕ ಬಳಿಕವೇ ಹೊಸ ಆಧಾರ್ ಕಾರ್ಡ್ ನಿಮ್ಮ ಕೈ ಸೇರಲಿದ್ದು, ಇದೀಗ ಹೊಸ ಬದಲಾವಣೆಯೊಂದಿಗೆ ನೀವು ಆಧಾರ್ ಪಡೆಯಬೇಕಿರೋದು ಅನಿವಾರ್ಯದ ಜೊತೆಗೆ ಅಷ್ಟೇ ಅವಶ್ಯಕ ಕೂಡ.
ಇದನ್ನೂ ಓದಿ: ‘ಯುವನಿಧಿ’ ಯೋಜನೆಯ ಚಾಲನೆಗೆ ಕ್ಷಣಗಣನೆ, ನೀವು ಅರ್ಹರಾಗಿದ್ದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
ಇದನ್ನೂ ಓದಿ: ತಿಂಗಳಿಗೆ 1500 ಹೂಡಿಕೆ ಮಾಡಿ 31ಲಕ್ಷ ಆದಾಯ ಗಳಿಸಿ; ಇದು ಪೋಸ್ಟ್ ಅಫೀಸ್ ನಲ್ಲಿ ಲಭ್ಯವಿರುವ ಹೊಸ ಯೋಜನೆ