ಪೊಲೀಸ್ ಇಲಾಖೆಯಲ್ಲಿ ಆಗಾಗ ಸಿವಿಲ್ ಕಾನ್‌ಸ್ಟೇಬಲ್, ಸಶಸ್ತ್ರ ಕಾನ್‌ಸ್ಟೇಬಲ್, ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ಹೀಗೆ ಸಾಕಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿರುತ್ತಾರೆ. ಇದೀಗ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಸಾವಿರಾರು ಹುದ್ದೆಗಳು ಖಾಲಿ ಇದ್ದು ಆಗಾಗ ಕಾಲಕ್ರಮೇಣ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೌದು ಸಿಬ್ಬಂದಿ ನೇಮಕಾತಿ ಆಯೋಗವು ನವೆಂಬರ್ 24 ರಂದು ಬರೋಬರಿ 75,000 ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಅಂದ್ರೆ ಜೆನೆರಲ್ ಡ್ಯೂಟಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್, ಇತರೆ ಪಡೆಗಳಲ್ಲಿ ಭರ್ತಿ ಮಾಡಲಾಗುತ್ತದೆ. ಇನ್ನು ಸ್ಟಾಫ್ ಸೆಲೆಕ್ಷನ್ ಕಮಿಷನ್ 75,768 ಜಿಡಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನವೆಂಬರ್ 24 ರಂದು ನೋಟಿಫಿಕೇಶನ್ ಬಿಡುಗಡೆ ಮಾಡಲಿದೆ. ಅಂದಿನಿಂದ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕೇವಲ ಎಸ್‌ಎಸ್‌ಎಲ್‌ಸಿ ಅಂದ್ರೆ 10ನೇ ತರಗತಿ ವಿದ್ಯಾರ್ಹತೆ ಇರುವವರು ಕೂಡ ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಾರ ಕಾನ್ಸ್‌ಟೇಬಲ್ ಇನ್ ಸಿಎಪಿಎಫ್, ಎನ್‌ಐಎ, ಎಸ್‌ಎಸ್ಎಫ್ ಮತ್ತು ರೈಫಲ್‌ಮೆನ್, ಅಸ್ಸಾಂ ರೈಫಲ್ಸ್ ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಹಲವು ಪಡೆಗಳ ಹುದ್ದೆಗಳು ಸೇರಿ ಒಟ್ಟು 75,768 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ ಆಸಕ್ತ ಅರ್ಹರು ಅರ್ಜಿಯನ್ನ ಸಲ್ಲಿಸಬಹುದು. ಅರ್ಜಿ ಸಲ್ಲೋಸೋದು ಹೇಗೆ? ಏನೆಲ್ಲಾ ಮಾಡಬೇಕು? ಆಗೇ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಏನೆಲ್ಲಾ ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸಲು ಕೊನೆ ದಿನ
ಹೌದು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇದೆ ವಾರ ನೋಟಿಫಿಕೇಶನ್ ಹೊರಬೀಳಲಿದ್ದು, ಮುಖ್ಯವಾಗಿ SSC ಕಾನ್ಸ್‌ಟೇಬಲ್ ಹುದ್ದೆಗಳ ವಿವರದ ಬಗ್ಗೆ ಅಂದ್ರೆ ಖಾಲಿ ಇರುವ ವಿವಿಧ ಪಡೆಗಳ ವಿವರ ನೋಡೋದಾದ್ರೆ,
- ಗಡಿ ಭದ್ರತಾ ಪಡೆ – 27875
- ಕೇಂದ್ರ ಮೀಸಲು ಪೊಲೀಸ್ ಪಡೆ – 25427
- ಕೇಂದ್ರ ಕೈಗಾರಿಕಾ ಭದ್ರತಾ ಪಡೆ – 8598
- ಸಶಸ್ತ್ರ ಸೀಮಾ ಬಲ್ – 5278
- ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ – 3006
- ಅಸ್ಸಾಂ ರೈಫಲ್ಸ್ – 4776
- ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್ – 583 ಸೇರಿದಂತೆ
- ಒಟ್ಟು 75,768 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
- ಇನ್ನು ಅಪ್ಲಿಕೇಶನ್ ಸ್ವೀಕರಿಸುವ ಆರಂಭಿಕ ದಿನಾಂಕ : 24-11-2023
- ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 28-12-2023 ರ ರಾತ್ರಿ 11 ಗಂಟೆವರೆಗೆ ನಿಮಗೆ ಕಾಲಾವಕಾಶ ನೀಡಲಾಗಿದೆ.
- ಆನ್‌ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ : 29-12-2023 ರ ರಾತ್ರಿ 11 ಗಂಟೆ ಸಮಯ ನಿಗಧಿ ಮಾಡಿದ್ದಾರೆ.
- ಇನ್ನು ಚಲನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ 29-12-2023 ಆಗಿರುತ್ತದೆ.
- ಅಪ್ಲಿಕೇಶನ್ ಶುಲ್ಕ ಎಷ್ಟಿರುತ್ತೆ ಅಂದ್ರೆ ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 100ರೂಪಾಯಿ ಆದ್ರೆ ST / SC / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಇನ್ನು ಅಪ್ಲಿಕೇಶನ್ ಶುಲ್ಕವನ್ನು ನೆಟ್‌ಬ್ಯಾಂಕಿಂಗ್, ಎಸ್‌ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಕೂಡ ನೀವು ಪಾವತಿ ಮಾಡಬಹುದು.
ಹೌದು ನವೆಂಬರ್ 24 ರಿಂದ ಡಿಸೆಂಬರ್ 28 ರವರೆಗೆ ಈ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಮಾಡಲಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 2024 ರ ಫೆಬ್ರುವರಿ ತಿಂಗಳಲ್ಲಿ ನಡೆಸಲಾಗುತ್ತದೆ. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ, 10ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣ ಆಗಿದ್ರೆ ಸಾಕು ಅಂತವರು ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ವಯೋಮಿತಿ ಕನಿಷ್ಠ ವಯಸ್ಸು, 18 ವರ್ಷ ಇನ್ನು
ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 23 ವರ್ಷ ಮಾತ್ರ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದ್ದು ಕೆಲವೊಂದು ನಿಯಮಗಳು ಅನ್ವಯವಾಗಲಿವೆ ಅಂತ ತಿಳಿಸಲಾಗಿದೆ.
ಹೀಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ ವಿಳಾಸ https://ssc.nic.in ಒಂದು ಸಲ ಭೇಟಿ ನೀಡಿದ್ರೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತೆ. ಇನ್ನು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ವಿಧಾನ ಯಾವ ರೀತಿ ಇರುತ್ತೆ ಅಂದ್ರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಪಿಎಸ್‌ಟಿ, ಪಿಇಟಿ, ದಾಖಲೆಗಳ ಪರಿಶೀಲನೆ, ಮೆಡಿಕಲ್ ಟೆಸ್ಟ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತೆ ಅಂತ ತಿಳಿಸಿದ್ದು ಆಸಕ್ತರು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಪಡೆಯಬಹುದು.
ಇದನ್ನೂ ಓದಿ: ಬಿಬಿಎಂಪಿಯಿಂದ 1ಲಕ್ಷದವರೆಗೂ ಪ್ರೋತ್ಸಾಹ ಧನ; ಸ್ವಯಂ ಉದ್ಯೋಗ ಮಾಡಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram