ಇದೇ ಬರುವ ಮಾರ್ಚ್ 25 ಸೋಮವಾರದಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪರೀಕ್ಷಾ ಕೇಂದ್ರದಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಲೂ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಗೊಳಿಸಲಾಗಿದೆ. ಸೆಕ್ಷನ್ 144 ರ ಪ್ರಕಾರ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇದಾಜ್ಞೆ ಘೋಷಣೆ ಮಾಡಲಾಗಿದೆ ಜೊತೆಗೆ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೂ ಸಹ ಕೆಲವು ನಿಯಮಗಳನ್ನು ರೂಪಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಇಲಾಖೆಯು ಸೂಚಿಸಿರುವ ನಿಯಮಗಳ ಬಗ್ಗೆ ತಿಳಿಯೋಣ.
ಪರೀಕ್ಷಾ ಕೇಂದ್ರದ ಸುತ್ತ ಮುತ್ತಲಿನ ಪ್ರದೇಶಗಳಿಗೆ ಯಾವ ಯವ ನಿಯಮಗಳನ್ನು ಜಾರಿಗೊಳಿಸಲಾಗಿದೆ?: ಪರೀಕ್ಷಾ ಕೇಂದ್ರದ ಸುತ್ತ ಮುತ್ತಲು ಇರುವ ಜೆರಾಕ್ಸ್ ಅಂಗಡಿಗಳು ಕಿರಾಣಿ ಅಂಗಡಿಗಳು ಹಾಗೂ ಸಣ್ಣ ಪುಟ್ಟ ತಿಂಡಿ ಅಂಗಡಿಗಳನ್ನು ಮುಚ್ಚಬೇಕು ಎಂಬುದು ಇಲಾಖೆಯ ಅದೇಶವಾಗಿದೆ. ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯಬಾರದು ಹಾಗೂ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಗಲಾಟೆಗಳು ಅಥವಾ ಇನ್ನಿತರ ಸನ್ನಿವೇಶಗಳು ,ಸಂಭಾಷಣೆಗಳು ಕೇಳಬಾರದು ಎಂಬ ನಿಟ್ಟಿನಲ್ಲಿ ಈ ನಿಯಮವು ಜಾರಿಯಲ್ಲಿ ಇದೆ. ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ತಿಳಿಯಲೇ ಬೇಕಾದ ಕೆಲವು ವಿಷಯಗಳು :-
- ಪರೀಕ್ಷೆಗೆ ಬಳಸುವ calculater ಸರಳವಾಗಿ ಇರಬೇಕು. ಯಾವುದೇ ಸೈಂಟಿಫಿಕ್ ವ್ಯವಸ್ಥೆ ಇರುವ calculater ಬಳಕೆಯನ್ನು ನಿಷೇಧಿಸಲಾಗಿದೆ.
- ಸ್ಟ್ಯಾಟಿಸ್ಟಿಕ್ಸ್ ವಿಷಯದಲ್ಲಿ ಮಾತ್ರ ಸೈಂಟಿಫಿಕ್ calculater ಬಳಕೆಗೆ ಅನುಮತಿ ನೀಡಲಾಗಿದೆ.
- ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಅಂತಿಮ ಬೆಲ್ ಹೊಡೆಯುವ ಮುನ್ನ ಬರಬೇಕು. ಅಂತಿಮ ಬೆಲ್ ಹೊಡೆದ ನಂತರದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಸೇರಿಸಲಾಗುವುದಿಲ್ಲ.
- ಪರೀಕ್ಷಾ ಕೊಠಡಿಗೆ ಬರುವಾಗ ಪೆನ್, ಪೆನ್ಸಿಲ್, ಅಥವಾ ಜಾಮಿಟ್ರಿ ಬಾಕ್ಸ್ ಹಾಗೂ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪರೀಕ್ಷಾ ಕೊಠಡಿಯಲ್ಲಿ ಬೇರೆ ವಿದ್ಯಾರ್ಥಿಗಳಿಂದ ಯಾವುದೇ ವಸ್ತುಗಳನ್ನು ಕೇಳುವಂತೆ ಇಲ್ಲ.
- ಪರೀಕ್ಷಾ ಕೊಠಡಿಗೆ ಯಾವುದೇ ಎಲೆಕ್ಟ್ರಿಕ್ ಯಂತ್ರಗಳನ್ನು ತರುವಂತೆ ಇಲ್ಲ.
- ಮೊಬೈಲ್ ಬಳಕೆ ನಿಷೇಧಿಸಿದೆ.
- ಪರೀಕ್ಷಾ ಅವಧಿ ಮುಗಿಯದ ಹೊರತು ಪರೀಕ್ಷಾ ಕೊಠಡಿ ಬಿಟ್ಟು ಹೋಗುವಂತೆ ಇಲ್ಲ.
- ಯಾವುದೇ ಕಾರಣಕ್ಕೂ ಒಮ್ಮೆ ಉತ್ತರ ಪತ್ರಿಕೆ ಕೊಠಡಿಯ ಮೇಲ್ವಿಚಾರಕರಿಗೆ ನೀಡಿದ ಮೇಲೆ ಮತ್ತೆ ವಾಪಸ್ ಕೇಳುವಂತೆ ಇಲ್ಲ.
- ಯಾವುದೇ ಚೀಟಿ ಅಥವಾ ಕೈ ಮೇಲೆ ಕಾಲಿನ ಮೇಲೆ ಉತ್ತರಗಳನ್ನು ಬರೆದುಕೊಂಡು ಬರುವಂತೆ ಇಲ್ಲ.
- ಪರೀಕ್ಷಾ ಕೊಠಡಿಯಲ್ಲಿ ಇರುವ ಇತರ ವಿದ್ಯಾರ್ಥಿಗಳಿಗೆ ತೊಂದರೆ ನೀಡಬಾರದು.
- ಉತ್ತರ ಪತ್ರಿಕೆಯಲ್ಲಿ ನಿಮ್ಮ ರೋಲ್ ನಂಬರ್ ಶಾಲೆಯ ಕೊಡ್ ಅನ್ನು ಸರಿಯಾಗಿ ಬರೆಯಬೇಕು.
- ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಯ ಕೆಳಗೆ ನೀಡಿರುವ ಸ್ಥಳದಲ್ಲಿಯೇ ಉತ್ತರ ಬರೆಯಬೇಕು.
- ಪರೀಕ್ಷಾ ಕೊಠಡಿಗೆ ಬರುವಾಗ ಮತ್ತು ಹೋಗುವಾಗ ಶಿಸ್ತುಬದ್ಧವಾದ ವರ್ತನೆ ಮಾಡಬೇಕು.
ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ :-
- ಮಾರ್ಚ್ 25 -ಸೋಮವಾರ – ಪ್ರಥಮ ಭಾಷೆ.
- ಮಾರ್ಚ್ 27- ಬುಧವಾರ – ಸಮಾಜ ವಿಜ್ಞಾನ.
- ಮಾರ್ಚ್ 30 – ಶನಿವಾರ – ವಿಜ್ಞಾನ.
- ಏಪ್ರಿಲ್ 2- ಮಂಗಳವಾರ – ಗಣಿತ.
- ಏಪ್ರಿಲ್ 4 – ಗುರುವಾರ – ತೃತೀಯ ಭಾಷೆ.
- ಏಪ್ರಿಲ್ 6 – ಶನಿವಾರ – ದ್ವಿತೀಯ ಭಾಷೆ.
ಇದನ್ನೂ ಓದಿ: 5,8,9ನೇ ಕ್ಲಾಸ್ ನ ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಪ್ರಕಟ ಇಲ್ಲಿದೆ ನೋಡಿ
ಇದನ್ನೂ ಓದಿ: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಯಾವ ಯಾವ ಬ್ಯಾಂಕ್ ಗಳು ಸಾಲ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.