ಶಾಲಾ ಶಿಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬದಲಾಯಿಸಿದೆ.

SSLC Exam 2 Date Postponed

ಈಗಾಗಲೇ SSLC ಪರೀಕ್ಷೆ- 1 ರ ಫಲಿತಾಂಶ ಪ್ರಕಟ ಆಗಿದ್ದು, SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಪರೀಕ್ಷೆಯ ಮೊದಲು ಶಿಕ್ಷಕರು ಮಕ್ಕಳಿಗೆ ಮತ್ತೆ ಮರು ಪಾಠ ನಡೆಸಬೇಕು ಎಂದು ಹೈಸ್ಕೂಲ್ ಶಿಕ್ಷಕರಿಗೆ ಸರ್ಕಾರ ತಿಳಿಸಿತ್ತು. ಆದರೆ ಈ ಸಮಯವನ್ನು ಮುಂದೂಡುವಂತೆ ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ ಬರೆದ ಹಿನ್ನೆಲೆಯಲ್ಲಿ ಈಗ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಹಾಗೂ ಬೋಧನಾ ವೇಳೆಪಟ್ಟಿಯನ್ನು ಬದಲಿಸಿದೆ.

WhatsApp Group Join Now
Telegram Group Join Now

ಸರ್ಕಾರ ನೀಡಿದ ವೇಳಾಪಟ್ಟಿ ಹಾಗೂ ಬೋಧನಾ ವೇಳಾಪಟ್ಟಿ ಹೀಗಿತ್ತು :- ಸರ್ಕಾರದ ಆದೇಶದ ಪ್ರಕಾರ ಮೇ 15 ರಿಂದ ಫೇಲ್ ಆದ ಮಕ್ಕಳಿಗೆ ಮತ್ತೊಮ್ಮೆ ಭೋಧನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಜೊತೆಗೆ ಜೂನ್ 7 ರಿಂದ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನೂ ಇಲಾಖೆ ಬಿಡುಗಡೆ ಮಾಡಿತ್ತು.

ಮುಂದೂಡಿದ ವೇಳಾಪಟ್ಟಿಯ ವಿವರ ಹೀಗಿದೆ :- ಶಿಕ್ಷಕರ ಒತ್ತಾಯದ ಮೇರೆಗೆ ಮೇ 15 ರಿಂದ ಆರಂಭ ಆಗಬೇಕಾಗಿದ್ದ ಬೋಧನಾ ತರಗತಿಯನ್ನು ಮೇ 29 ರಿಂದ ಆರಂಭಿಸಲಾಗುವುದು ಹಾಗೂ ಜೂನ್ 7 ರಿಂದ ನಡೆಯಬೇಕಾಗಿದ್ದ ಪರೀಕ್ಷೆಯು ಜೂನ್ 13 ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪರೀಕ್ಷೆ ಮುಂದೂಡುವಂತೆ ಶಿಕ್ಷಕರ ಒತ್ತಾಯ ಏಕೆ?

ಏಪ್ರಿಲ್ ಮತ್ತು ಮೇ ಶಿಕ್ಷಕರಿಗೆ ರಜಾ ಅವಧಿ ಆದರೆ ಈ ಬಾರಿ ಲೋಕಸಭಾ ಚುನಾವಣೆ ಇದ್ದ ಕಾರಣ ರಾಜ್ಯದಲ್ಲಿ ಅನೇಕ ಶಿಕ್ಷಕರು ಚುನಾವಣಾ ಕರ್ತವ್ಯಗಳಾದ ಚೆಕ್‌ಪೋಸ್ಟ್ ಮತ್ತು ಸೆಕ್ಟರ್ ಹಾಗೂ ಮಾಸ್ಟರ್ ಟ್ರೈನರ್ ಬಿ.ಎಲ್.ಓ ಆಗಿ ಕೆಲಸ ಮಾಡಿದ್ದಾರೆ. ಜೊತೆಗೆ ಹಲವಾರು ಶಿಕ್ಷಕರು SSLC ಪರೀಕ್ಷೆ -1 ರ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದರು. ಆದ್ದರಿಂದ ಅವರ ರಜೆಯ ಅವಧಿಯು ಸಹ ಸರಕಾರಿ ಕೆಲಸದಲ್ಲಿ ತೊಡಗಿದ್ದಾರೆ. ಇದೆ ಕಾರಣದಿಂದ ಮೇ 15 ರಿಂದ ಜೂನ್ 6 ರ ವರಗೆ ವಿಶೇಷ ಬೋಧನೆ ಮಾಡಿದರೆ ಶಿಕ್ಷಕರಿಗೆ ರಜೆಯೇ ಸಿಗುವುದಿಲ್ಲ. ಶಿಕ್ಷಕರಿಗೆ ಮಕ್ಕಳೊಡನೆ ತಮ್ಮ ಕುಟುಂಬದ ಜೊತೆ ಸಮಯ ಕಲಿಯಲು ಹಾಗೂ ತಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವೇ ಇಲ್ಲದಂತೆ ಆಗುತ್ತದೆ. ಇದೆ ಕಾರಣಕ್ಕೆ ಸರ್ಕಾರದ ಆದೇಶವನ್ನು ಪ್ರಶ್ನಿಸಿದರು.

ವಿಶೇಷ ಬೋಧನಾ ಕ್ರಮ ಏಕೆ?: ಈ ಬಾರಿಯ SSLC ಪರೀಕ್ಷೆ -1 ರ ಫಲಿತಾಂಶ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಕ್ಕಳಿಗೆ ಇನ್ನೊಮ್ಮೆ ವಿಷಯಗಳನ್ನು ಬೋಧನೆ ಮಾಡುವ ಮೂಲಕ ಅವರ ಭವಿಷ್ಯವನ್ನು ರೂಪಿಸಬೇಕು ಎಂದು ಶಿಕ್ಷಕರಿಗೆ ವಿಶೇಷ ತರಗತಿಯನ್ನು ನಡೆಸಬೇಕು ಎಂದು ತಿಳಿಸಿದೆ. 

ಈ ಬಾರಿ ಗ್ರೇಸ್ ಅಂಕ ನೀಡಿದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು :- ಕೋವಿಡ್ ಪ್ಯಾಂಡಮಿಕ್ ಸಮಯದಲ್ಲಿ ರಾಜ್ಯದಲ್ಲಿ ಮಕ್ಕಳಿಗೆ 5-10 ಮಾರ್ಕ್ಸ್ ಗ್ರೇಸ್ ಆಗಿ ನೀಡಿ ಪಾಸ್ ಮಾಡಿ ಎಂದು ಸರ್ಕಾರ ಸೂಚಿಸಿತ್ತು. ಆದರೆ ಈಗ ಯಾವುದೇ ಪ್ಯಾಂಡಮಿಕ್ ಇಲ್ಲದೆ ಇದ್ದರೂ ಸರ್ಕಾರದ ಅನುಮತಿಯನ್ನು ಕೇಳದೆಯೇ ಶಿಕ್ಷಣ ಮಂಡಳಿ ಮಕ್ಕಳಿಗೆ 20 ಮಾರ್ಕ್ಸ್ ಗ್ರೇಸ್ ನೀಡಿರುವ ಬಗ್ಗೆ ತಿಳಿದು ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಹಾಗೂ ಮುಂದಿನ ವರುಷದಿಂದ ಯಾವುದೇ ಮಕ್ಕಳಿಗೆ ಹೆಚ್ಚಿನ ಅಂಕವನ್ನು ಗ್ರೇಸ್ ಮಾರ್ಕ್ಸ್ ಆಗಿ ನೀಡಲೇ ಬಾರದು ಎಂದು ಆದೇಶ ನೀಡಿದರು. 20 ಮಾರ್ಕ್ಸ್ ಗ್ರೇಸ್ ನೀಡಿದರೂ ಸಹ ರಾಜ್ಯದ ಫಲಿತಾಂಶ ಕಡಿಮೆ ಆಗಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.

ಇದನ್ನೂ ಓದಿ: ಮುಂಬರುವ ವರ್ಷದಿಂದ SSLC ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ತೀರ್ಮಾನಿಸಿದ ರಾಜ್ಯ ಸರ್ಕಾರ

ಇದನ್ನೂ ಓದಿ: ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!