SSLC ಪರೀಕ್ಷೆ-2 ಪರೀಕ್ಷೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.

SSLC exam 2 Latest Update

ಈಗಾಗಲೇ SSLC ಪರೀಕ್ಷೆ -1 ರ ಫಲಿತಾಂಶ ಬಿಡುಗಡೆ ಆಗಿದ್ದು SSLC ಪರೀಕ್ಷೆ -2 ರ ಟೈಮ್ ಟೇಬಲ್ ಬಿಡುಗಡೆ ಆಗಿದೆ. ಈಗ ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ.

WhatsApp Group Join Now
Telegram Group Join Now

SSLC ಪರೀಕ್ಷೆ -2 ರ ನೀಡುವ ಸೂಚನೆಗಳು ಏನು?

  1. 2003-04 ರಿಂದ 2023-24 ನೇ ಸಾಲಿನ ವರೆಗೆ SSLC ಪರೀಕ್ಷೆಯಲ್ಲಿ ಫೇಲ್ ಆಗಿರುವ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆದ SSLC ಪರೀಕ್ಷೆ-1 ರಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಇರುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಲಾಗ್ ಇನ್ ಆಗಬೇಕು. ನಂತರ SSLC ಪರೀಕ್ಷೆ 2 ಕ್ಕೆ ನೋಂದಣಿ ಮಾಡಬೇಕು.
  2. ವಿದ್ಯಾರ್ಥಿಗಳ ವಿವರಗಳನ್ನು ಬದಲಾಯಿಸಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ.
  3. SSLC ಪರೀಕ್ಷೆ – 1 ರಲ್ಲಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಫೋಟೋ ಅಥವಾ ಸಹಿ ಅನ್ನು ಬದಲಿಸುವ ಅಗತ್ಯ ಇರುವುದಿಲ್ಲ.
  4. 2002 ಕಿಂತ ಹಿಂದಿನ ವರ್ಷದಲ್ಲಿ ಅನ್ನುತೀರ್ಣ ಆಗಿರುವ ವಿದ್ಯಾರ್ಥಿಗಳು ಈಗ ಪರೀಕ್ಷೆಗೆ ನೋಂದಾಯಿಸಲು msa ಅರ್ಜಿ ಭರ್ತಿ ಮಾಡಿದರೆ ಮಾತ್ರ ನೋಂದಣಿ ಮಾಡಲು ಸಾಧ್ಯವಾಗುತ್ತದೆ. ಇಂತವರು ಆನ್ಲೈನ್ ಮೂಲಕ ನೋಂದಾಯಿಸಲು ಸಾಧ್ಯವಿಲ್ಲ. ಇವರು msa ಅರ್ಜಿಯಲ್ಲಿ ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಆಂಟಿಸಬೇಕು. ನಂತರ ಬ್ಯಾಂಕ್ ಮೂಲಕ ಪರೀಕ್ಷಾ ಶುಲ್ಕ ಪಾವತಿ ಮಾಡ್ಬೇಕು.
  5. ವಿದ್ಯಾರ್ಥಿಗಳು ನಿಗದಿತ ದಿನಾಂಕದ ಒಳಗೆ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.
  6. ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು ದಿನಾಂಕ 09-05-2024ರಿಂದ 16-05-2024 ರ ವರೆಗೆ ಅವಕಾಶ ಇರುತ್ತದೆ.
  7. ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ಕೊನೆಯ ದಿನಾಂಕ ದಿನಾಂಕ 18-05-2024 ಆಗಿರುತ್ತದೆ. ಕ್ರಮ ಸಂಖ್ಯೆ-3ರಂತೆ ಚಲನ್ ಮುದ್ರಿಸಿಕೊಳ್ಳಬೇಕು. ಹಾಗೂ ಚಲೆನ್ ಬ್ಯಾಂಕ್ ಗೆ ಜಮೆ ಮಾಡಲು ಕೊನೆಯ ದಿನ ದಿನಾಂಕ 20-05-2024 ಆಗಿರುತ್ತದೆ.

ಪರೀಕ್ಷೆಯ ನಿಗಮದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿಯಲಿ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. SSLC ಪರೀಕ್ಷೆ -1 ರ ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೆ ಫಲಿತಾಂಶಕ್ಕೆ ಕಾಯದೆ ನಿಗದಿತ ದಿನಾಂಕದ ಒಳಗೆ ನೋಂದಣಿ ಕಾರ್ಯ ನಡೆಸುವುದು ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

SSLC ಪರೀಕ್ಷೆ-2 ರ ವೇಳಾಪಟ್ಟಿ :- SSLC ಪರೀಕ್ಷೆ -2 ರ ಪರೀಕ್ಷೆ ಇದೆ ಬರುವ ಜೂನ್‌ 7 2024 ರಿಂದ ಜೂನ್ 14 2024 ರವರೆಗೆ ನಡೆಯಲಿದ್ದು ಪರೀಕ್ಷಾ ವೇಳಾಪಟ್ಟಿ ವೇಳಾಪಟ್ಟಿ ಹೀಗಿದೆ :-

  1. 07-06-2024-ಶುಕ್ರವಾರ – ಪ್ರಥಮ ಭಾಷೆ ( ಕನ್ನಡ ,ಉರ್ದು, ಇಂಗ್ಲೀಷ್ ಇತ್ಯಾದಿ).
  2. 08-06-2024-ಶನಿವಾರ – ತೃತೀಯ ಭಾಷೆ( ಹಿಂದಿ , ಇಂಗ್ಲಿಷ್ ಉರ್ದು , ಸಂಸ್ಕೃತ ಇತ್ಯಾದಿ.
  3. 10-06-2024- ಸೋಮವಾರ- ಗಣಿತ , ಸಮಾಜ ಶಾಸ್ತ್ರ.
  4. 11-06-2024- ಮಂಗಳವಾರ – ಅರ್ಥ ಶಾಸ್ತ್ರ, ಎಲಿಮೆಂಟ್ಸ್‌ ಆಫ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌.
  5. 12-6-2024- ಬುಧವಾರ – ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
  6. 13-6-2024-ಗುರುವಾರ – ದ್ವಿತೀಯ ಭಾಷೆ ( ಇಂಗ್ಲಿಷ್ ಕನ್ನಡ ಇತ್ಯಾದಿ).
  7. 14-6-2024 –ಶುಕ್ರವಾರ -ಸಮಾಜ ವಿಜ್ಞಾನ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ

ಇದನ್ನೂ ಓದಿ: ಸ್ಯಾಮ್‌ಸಂಗ್ 5G ಫೋನ್ 6000mAh ಬ್ಯಾಟರಿಯೊಂದಿಗೆ ಕೇವಲ ರೂ.582! ಬೇಗ ಖರೀದಿಸಿ!