SSLC ಎಕ್ಸಾಮ್ ಹಾಲ್ ಗೆ ಹೊಸ ರೂಲ್ಸ್ ಬಿಡುಗಡೆ ಮಾಡಿದ ಶಿಕ್ಷಣ ಮಂಡಳಿ

SSLC Exam Guidelines 2024 Karnataka

ವಿದ್ಯಾರ್ಥಿ ಜೀವನದ ಒಂದು ಮುಖ್ಯ ಘಟ್ಟ ಎಸೆಸೆಲ್ಸಿ. ಎಸ್‌ಎಸ್‌ಎಲ್‌ಸಿ ಯಲ್ಲಿ ಪಡೆವ ಅಂಕಗಳ ಆಧಾರದ ಮೇಲೆ ಮುಂದಿನ ಶಿಕ್ಷಣ ಬದುಕು ನಿಂತಿದೆ. ಹೆಚ್ಚಿನ ಸ್ಕೋರ್ ಪಡೆದುಕೊಂಡತೆ ಉತ್ತಮ ಗುಣಮಟ್ಟದ ಕಾಲೇಜ್ ಗೆ ಹೋಗಲು ಸಾಧ್ಯ. ಯಾವುದೇ ರೀತಿಯ compitative ಎಕ್ಸಾಮ್ ಗಳಿಗೆ ಮುಖ್ಯವಾಗಿ ಕೇಳುವುದು ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್. ಅದಕ್ಕೆ ಇದು ಮುಂದಿನ ಜೀವನದ ಬಹುಮುಖ್ಯ ಘಟ್ಟ. ಈಗ ಶಿಕ್ಷಣ ಇಲಾಖೆಯು ಹೊಸದಾಗಿ ಎಕ್ಸಾಮ್ ಹಾಲ್ ಗೆ ರೂಲ್ಸ್ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now

ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿಯ ಹೊಸ ನಿಯಮವೇನು?: ಮಾರ್ಚ್ 25 ರಿಂದ ಪ್ರಾರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ಕೆಲವು ಕ್ರಮಗಳನ್ನು ಕೈಗೊಂಡಿರುವ ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ, ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಡೆಸ್ಕ್‌ಗಳನ್ನು ಗೋಡೆಗೆ ಜೋಡಿಸಲು ಸೂಚನೆ ನೀಡಲಾಗಿದೆ.

ಮಂಡಳಿಯ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ಅವರು ಪತ್ರಿಕಾ ಹೇಳಿಕೆಯಲ್ಲಿ ಈ ಕ್ರಮದಿಂದ ನಕಲು ತಡೆಗಟ್ಟುವುದರ ಜೊತೆಗೆ, ಪರೀಕ್ಷಾ ಕೊಠಡಿಗೆ ವಿಚಕ್ಷಣ ದಳ ಪ್ರವೇಶಿಸಿದಾಗ ವಿದ್ಯಾರ್ಥಿಗಳ ಗಮನ ಸೆಳೆಯುವುದನ್ನು ತಪ್ಪಿಸಲಾಗಿದೆ. ಗೋಡೆಗೆ ಮುಖ ಮಾಡಿ ಕುಳಿತಿದ್ದರೆ, ಬೇರೆ ಯಾರಾದರೂ ಬಂದು ಹೋದರೂ ವಿದ್ಯಾರ್ಥಿಗಳ ಗಮನಕ್ಕೆ ಬರುವುದಿಲ್ಲ. ಹೀಗಾಗಿ ಈ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆರಗುಗೊಳಿಸುವ ವಿನ್ಯಾಸ ಮತ್ತು ಜಾವ್-ಡ್ರಾಪಿಂಗ್ 34% ರಿಯಾಯಿತಿಯೊಂದಿಗೆ ಹೊಸ Poco M6 Pro 5G ಯ ಈಗಿನ ಬೆಲೆ ಎಷ್ಟು ಗೊತ್ತಾ?

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿ :-

  • 25.03.2024(ಸೋಮವಾರ) – ಪ್ರಥಮ ಭಾಷೆ (ಕನ್ನಡ , ತೆಲುಗು, ಹಿಂದಿ, ಮರಾಠಿ ತಮಿಳು, ಉರ್ದು, ಇಂಗ್ಲಿಷ್,ಸಂಸ್ಕೃತ) ಪರೀಕ್ಷಾ ಸಮಯ ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ.
  • 27.03.2024(ಬುಧವಾರ) – ಸಮಾಜ ವಿಜ್ಞಾನ – ಪರೀಕ್ಷಾ ಸಮಯ ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ.
  • 30.03.2024(ಶನಿವಾರ) – ವಿಜ್ಞಾನ, ರಾಜ್ಯಶಾಸ್ತ್ರ ಸಮಯ – ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ ಹಾಗೂ ಹಿಂದೂಸ್ತಾನ ಸಂಗೀತ, ಕರ್ನಾಟಕ ಸಂಗೀತ, ಸಮಯ – ಮಧ್ಯಾನ್ಹ 2.00 ರಿಂದ ಸಾಯಂಕಾಲ 5.15 ಗಂಟೆ.
  • 02.04.2024 (ಮಂಗಳವಾರ) – ಗಣಿತ , ಸಮಾಜ ಶಾಸ್ತ್ರ. ಸಮಯ ‌ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ.
  • 03.04.2024( ಬುಧವಾರ ) – ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರ್ , ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ASNI ‘c’, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ , ಅರ್ಥಶಾಸ್ತ್ರ – ಸಮಯ ‌ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ ಹಾಗೂ ಇಂಜಿನಿಯರಿಂಗ್ ಗ್ರಾಫಿಕ್ಸ್ -2 ಮಧ್ಯಾನ್ಹ 2.00 ರಿಂದ ಸಾಯಂಕಾಲ 5.15 ಗಂಟೆ.
  • 04.04.2024( ಗುರುವಾರ ) – ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,) ಹಾಗೂ ಎನ್. ಎಸ್. ಕ್ಯೂ . ಎಫ್ ವಿಷಯಗಳು (ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, helath care, ಬ್ಯೂಟಿ ಅಂಡ್ ವೆಲ್ನೆಸ್, ಎಲೆಕ್ಟ್ರಾನಿಕ್ ಅಂಡ್ ಹಾರ್ಡ್ವೇರ್ – ಸಮಯ ‌ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ.
  • 06.04.2024 – ದ್ವಿತೀಯ ಭಾಷೆ ( ಇಂಗ್ಲಿಷ್ , ಕನ್ನಡ ) ಸಮಯ ‌ಬೆಳಗ್ಗೆ 10.15 ರಿಂದ ಮಧ್ಯಾನ್ಹ 1 ಗಂಟೆ.

ಇದನ್ನೂ ಓದಿ: ಅತಿ ಕಡಿಮೆ ಬೆಲೆಯ, ಬಜೆಟ್ ಸ್ನೇಹಿ ಈ ಎಂಟು ಬೈಕುಗಳ ಬೆಲೆಯನ್ನು ತಿಳಿದರೆ ಈಗಲೇ ಬುಕ್ ಮಾಡುತ್ತೀರಾ!

ಇದನ್ನೂ ಓದಿ: ಬಿಲ್ ಗೇಟ್ಸ್ ಒಂದೇ ಬಾರಿ ಭೇಟಿ ನೀಡಿದ್ದಕ್ಕೆ ದುಬಾರಿ ಬೆಲೆ ಕಾರ್ ಖರೀದಿ ಮಾಡಿದ ಚಾಯ್ ವಾಲಾ