ಸರ್ಕಾರಿ ನೌಕರಿ ಬೇಕು ಅಂದ್ರೆ SSLC ಆಗಿರಲೇಬೇಕು; ರಾಜ್ಯ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಹೊಸ ರೂಲ್ಸ್

SSLC government jobs

ಪ್ರತಿಯೊಬ್ಬರಿಗೂ ಕೂಡ ಸರ್ಕಾರಿ ಉದ್ಯೋಗ ಪಡಿಯಬೇಕು, ಸರ್ಕಾರಿ ಸೇವೆ ಸಲ್ಲಿಸಬೇಕು, ಸರ್ಕಾರಿ ಸೌಲತ್ತುಗಳನ್ನ ಪಡೆಯಬೇಕು ಅಂತ ಸಾಕಷ್ಟು ಆಸೆ ಕನಸುಗಳನ್ನ ಇಟ್ಟುಕೊಂಡಿರ್ತಾರೆ. ಕೆಲವೊಮ್ಮೆ ಈ ಆಸೆ ಕನಸುಗಳನ್ನ ಈಡೇರಿಸಿಕೊಳ್ಳುವುದು ಸಾಧ್ಯ ಆದ್ರೂ ಇನ್ನು ಕೆಲವೊಮ್ಮೆ ಆಗದಿರಬಹುದು. ಯಾಕಂದ್ರೆ ವಿದ್ಯಾಭ್ಯಾಸ ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗೋದಿಲ್ಲ. ಹೀಗಾಗಿ ಕೆಲವೊಬ್ಬರು ಉನ್ನತ ಹುದ್ದೆಗಳನ್ನ ಬಯಸಿದರೆ ಇನ್ನು ಕೆಲವೊಬ್ಬರು ಸಿಕ್ಕಾಪಟ್ಟೆ ಹುದ್ದೆಗಳಿಗೆ ತೃಪ್ತಿ ಪಟ್ಟುಕೊಂಡು ಜೀವನ ನಡೆಸುತ್ತಾರೆ. ಆದ್ರೆ ಇದೀಗ ಸರ್ಕಾರ ಒಂದು ಹೊಸ ನಿಯಮ ಜಾರಿಗೋಳಿಸಿದ್ದು ರಾಜ್ಯ ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೆ ಕನಿಷ್ಠ ಪಕ್ಷ SSLC ಪಾಸ್ ಆಗಿರಬೇಕಂತೆ. ಹೌದು ಅದರಲ್ಲೂ ಗ್ರೂಪ್ ಸಿ ಮತ್ತು ಡಿ ದರ್ಜೆಯ ನೌಕರಿ ಪಡೆಯಬೇಕು ಅಂದ್ರು ಇನ್ಮುಂದೆ ಎಸ್ ಎಸ್ ಎಲ್ ಸಿ ಕಡ್ಡಾಯ ಅಂತ ಸರ್ಕಾರ ಹೇಳಿದೆ. ಹೇಗೆ ಚಿಕ್ಕ ಉದ್ಯೋಗ ಆದ್ರೂ ಪರವಾಗಿಲ್ಲ ಬಿಡಿ ನೆಮ್ಮದಿಯಾಗಿ ಇರೋವರ್ಗು ಸರ್ಕಾರಿ ಉದ್ಯೋಗ ಇದ್ರೆ ಸಾಕು ಅಂತ ಅಂದುಕೊಂಡಿದ್ದವರಿಗೆ ಇದು ಶಾಕ್ ಅಂತಲೇ ಹೇಳಬಹುದು.

WhatsApp Group Join Now
Telegram Group Join Now

ಹೌದು ಗ್ರೂಪ್ ಡಿ ಮತ್ತು ಸಿ ದರ್ಜೆಯ ನೌಕರರು ಸಾಮಾನ್ಯವಾಗಿ ವಿದ್ಯಾಭ್ಯಾಸದಲ್ಲಿ ಹಿಂದುಳಿದಿರ್ತಾರೆ. ಕನಿಷ್ಠ ಪಕ್ಷ ಹೈ ಸ್ಕೂಲ್ ವಿದ್ಯಾಭ್ಯಾಸ ಕೂಡ ಮಾಡಿರೋದಿಲ್ಲ 3-5 ತರಗತಿ ಓದಿದ್ರೆ ಹೆಚ್ಚು. ಹೀಗಿರುವಾಗ ಈ ಹೊಸ ರೂಲ್ಸ್ ಎಷ್ಟು ಜನಕ್ಕೆ ಕಂಟಕ ಆಗುತ್ತೆ, ಎಷ್ಟು ಜನರಿಗೆ ಇದು ವಾರವಾಗುತ್ತೋ ಗೊತ್ತಿಲ್ಲ. ಹಾಗಾದ್ರೆ ಯಾವೆಲ್ಲಾ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಕಡ್ಡಾಯ, ಯಾಕೆ ಧಿಡೀರ್ ಅಂತ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಆಗುವ ಲಾಭ ಅಥವಾ ಪ್ರಯೋಜನಗಳೇನು ಎಲ್ಲವನ್ನ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಗ್ರೂಪ್ ಸಿ, ಡಿ ಹುದ್ದೆಗಳಿಗೂ 10th ಪಾಸ್ ಮಾಡಿರಬೇಕು

ಹೌದು ರಾಜ್ಯ ಸರ್ಕಾರಿ ಹುದ್ದೆಗಳ‌ ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆ ಮಾಡಿದ್ದು, ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಎಸ್‌ ಎಸ್ ಎಲ್‌ ಸಿ ಕಡ್ಡಾಯ ಮಾಡಲಾಗಿದೆ. ರಾಜ್ಯ ಸರ್ಕಾರವು ಜವಾನ, ದಲಾಯತ್‌ ಸೇರಿ ಯಾವುದೇ ಗ್ರೂಪ್‌ ಡಿ ಹುದ್ದೆಗಳ ನೇಮಕಾತಿಗೂ ಇನ್ಮುಂದೆ ಎಸ್‌ ಎಸ್‌ ಎಲ್‌ ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದು, ಈ ಸಂಬಂಧ ಕರ್ನಾಟಕ ಸಿವಿಲ್‌ ಸೇವೆಗಳ ಕಾಯಿದೆ-1978ರಲ್ಲಿ ತಿದ್ದುಪಡಿಯೊಂದಿಗೆ ಜುಲೈ 1 ರಂದು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯ ಸಿವಿಲ್‌ ಸೇವೆಗಳಲ್ಲಿ ಗ್ರೂಪ್‌ ಸಿ ಹುದ್ದೆಗಳ ನೇರ ನೇಮಕದ ಸಂದರ್ಶನವನ್ನೂ ರದ್ದುಪಡಿಸಲಾಗಿದ್ದು, ನೇಮಕಾತಿ ಕಾಯಂ ಅಥವಾ ಬಡ್ತಿಗೆ ಮಾನದಂಡವಾಗಿ ಐದು ವರ್ಷ ಪ್ರೊಬೆಷನರಿ ಅವಧಿಯನ್ನು ಪರಿಗಣಿಸುವ ನಿಯಮಾವಳಿಯಲ್ಲೂ ಬದಲಾವಣೆ ತರಲಾಗಿದೆ. ಇನ್ನು ಗ್ರೂಪ್‌ ಡಿ ಸೇವೆ ಮತ್ತು ಮೇಲ್ಪಟ್ಟ ರಾಜ್ಯ ಸಿವಿಲ್‌ ಸೇವೆಗಳ ನೇಮಕಾತಿಗೆ ಎಸ್‌ ಎಸ್‌ ಎಲ್‌ ಸಿ ಗಿಂತ ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವಂತಿಲ್ಲ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ ಅಂತ ಹೇಳಲಾಗಿದೆ.

ಇದೀಗ ರಾಜ್ಯ ಸರ್ಕಾರದ ಈ ಹೊಸ ಆದೇಶ ಮುಂದಿನ ನೇಮಕಾತಿಗೆ ಅನ್ವಯವಾಗುತ್ತೆ ಅಂತ ಹೇಳಲಾಗುತ್ತೆ ಅಂದ್ರೆ ಈ ಮೊದಲೇ ತಿಳಿಸಿದಂತೆ ಜವಾನ ದಲಾಯತ್ ಸೇರಿ ಯಾವುದೇ ರೀತಿಯ ಗ್ರೂಪ್ ಡಿ ಹುದ್ದೆಗಳಿದ್ರು ಇನ್ಮುಂದೆ ನೇರ ನೇಮಕಾತಿಯ ಜೊತೆಗೆ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸವನ್ನ ಮಾನ ತಂಡ ಮಾಡಲಾಗಿದೆ. ಅಂದ್ರೆ 10ನೇ ತರಗತಿ ಪಾಸ್ ಆಗಿದ್ರೆ ಮಾತ್ರ ಈ ಹುದ್ದೆ ಸಿಗಲಿದ್ದು, ಹೀಗಾಗಿ ಇನ್ಮುಂದೆ ಹೇಗೋ ಕಷ್ಟನೋ ಸುಖಾನೋ ಜವಾನನೋ ಗುಮಾಸ್ತನೋ ಯಾವ್ದೋ ಒಂದು ಹುದ್ದೆ ಪಡೆದುಕೊಳ್ಳೋಣ ಅಂತ ಹೇಳೋರು ತಮ್ಮ ವಿದ್ಯಾರ್ಹತೆ ಬಗ್ಗೆನೂ ಕೂಡ ಗಮನ ವಹಿಸಬೇಕಾಗುತ್ತೆ. ಯಾಕಂದ್ರೆ ಸರ್ಕಾರಿ ಹುದ್ದೆಗಳು ಅಷ್ಟು ಸುಲಭವಾಗಿ ಸಿಗೋದಿಲ್ಲ ಎಲ್ಲದಕ್ಕೂ ಮನದಂಡಗಳನ್ನ ನಿಗಧಿ ಮಾಡಲಾಗುತ್ತೆ. ಮೊದಲ ಹಂತ ಎಂಬಂತೆ ಶೈಕ್ಷಣಿಕ ಅರ್ಹತೆಯನ್ನ ಮನದಂಡವಾಗಿಸಿದ್ದು ಮುಂದಿನ ದಿನಗಳಲ್ಲಿ ಇನ್ನು ಹೊಸ ರೂಲ್ಸ್ ಗಳು ಜಾರಿ ಆದ್ರೂ ಅಚ್ಚರಿ ಪಡುವಂತಿಲ್ಲ. ಸಧ್ಯಕ್ಕಂತು ಸರ್ಕಾರಿ ನೌಕರಿ ಅದರಲ್ಲೂ ಗ್ರೂಪ್. ಡಿ ನೌಕರಿ ಪಡೆಯಬೇಕೆಂದ್ರು ಎಸ್ ಎಸ್ ಎಲ್ ಸಿ ಕಡ್ಡಾಯವಾಗಿ ಪಾಸ್ ಆಗಿರಲೇಬೇಕು.

ಇದನ್ನೂ ಓದಿ: ಮಹಿಳೆಯರಿಗೆ ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬ್ಯಾಂಕ್ ಗಳು ಸಾಲದ ಮರುಪಾವತಿಗೆ ಉಪಯೋಗಿಸಿಕೊಳ್ಳುವಂತಿಲ್ಲ