SSLC ಮತ್ತು PUC ಪರೀಕ್ಷಾ ಹೊಸ ನಿಯಮ ಮತ್ತು ಪರೀಕ್ಷಾ ವೇಳಾಪಟ್ಟಿ..

SSLC, PUC Exam Rule

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದರೆ 10 ನೆ ತರಗತಿ ಮತ್ತು 12 ನೇ ತರಗತಿ. ನಾಳಿನ ಬದುಕಿಗೆ ಎರಡು ಪರೀಕ್ಷೆಗಳ ಅಂಕಗಳು ಬಹಳ ಮುಖ್ಯವಾಗುತ್ತದೆ. ಪಿಯುಸಿ ಮತ್ತು ಎಸೆಸೆಲ್ಸಿ ಎರಡು ಸಹ ಒಂದು ರೀತಿಯ ಅಗ್ನಿಪರೀಕ್ಷೆಗಳು. ಯಾವುದೇ ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರು ಮುಂದಿನ ವಿಧ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆ. ಈ ವರ್ಷ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಹೊಸ ಪರೀಕ್ಷೆಯಲ್ಲಿ ಕೆಲವು ತಿದ್ದುಪಡಿಗಳನ್ನು ತಂದಿದೆ. ಅದರ ಬಗ್ಗೆ ವಿವರಗಳನ್ನು ತಿಳಿಯೋಣ.

WhatsApp Group Join Now
Telegram Group Join Now

ಏನಿದು ಹೊಸ ಬದಲಾವಣೆ :- ಎಸೆಸೆಲ್ಸಿ ಮತ್ತು ಪಿಯುಸಿ ಎರಡು ಮಂಡಳಿಗಳು ಈಗ ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಮೂರು ಪರೀಕ್ಷೆಗಳಲ್ಲಿ ಮೊದಲನೇ ಪರೀಕ್ಷೆಗೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂಬ ನಿಯಮವನ್ನು ಹೊಸದಾಗಿ ಜಾರಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಬದಲಾವಣೆಗೆ ಪರೀಕ್ಷಾ ಮಂಡಳಿ ಹೇಳುವ ನಿಯಮಗಳು :-

  • ಮಕ್ಕಳು ಮೊದಲ ಪರೀಕ್ಷೆ ಬರೆಯದಿದ್ದರೂ ಎರಡು ಮತ್ತು ಮೂರನೇ ಪರೀಕ್ಷೆಯನ್ನು ಬರೆಯಬಹುದು. ಆದರೆ ಮೊದಲ ಪರೀಕ್ಷೆಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು.
  • ಅನುತ್ತೀರ್ಣರಾದ ಮಕ್ಕಳು ಅಥವಾ ಹಿಂದಿನ ವರ್ಷಗಳಲ್ಲಿ ಪ್ರೈವೇಟ್ ಎಕ್ಸಾಮ್ ಬರೆದಿರುವ ಮಕ್ಕಳು ಕೂಡ ಮೊದಲ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ ನೇರವಾಗಿ ಎರಡು ಅಥವಾ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆಯಬಹುದು.

ಪಿಯುಸಿ ಎಕ್ಸಾಮ್ ನಲ್ಲಿ ಆದ ಬದಲಾವಣೆಯ ನಿಯಮಗಳು:- ಮೊದಲ ಬಾರಿಗೆ ಎಕ್ಸಾಮ್ ಬರೆದು ಆ ಮಾರ್ಕ್ಸ್ ಕಡಿಮೆ ಎನ್ನಿಸಿ ಮತ್ತೊಮ್ಮೆ ಎಕ್ಸಾಮ್ ತೆಗೆದುಕೊಂಡರೆ ಈ ಹಿಂದೆ ಎರಡನೇ ಎಕ್ಸಾಮ್ ನ ಅಂಕ ಪರಿಗಣಿಸಲಾಗುತ್ತಿತ್ತು ಆದರೆ ಈಗ ಆ ನಿಯಮ ಬದಲಾವಣೆ ಆಗಿ ಎರಡು ಪರೀಕ್ಷೆಗಳ ಅಂಕಗಳ ಪರಿಶೀಲನೆ ಮಾಡಿ ಹೆಚ್ಚಿನ ಅಂಕವನ್ನು ಅಂಕಪಟ್ಟಿಗೆ ಸೇರಿಸಬೇಕೆಂಬ ಹೊಸ ನಿಯಮ ಜಾರಿಯಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪ್ರೌಢ ಶಿಕ್ಶಣ ಮಂಡಳಿ 2024 ನೆ ಇಸವಿಯ ಟೈಮ್ ಟೇಬಲ್ ಬಿಡುಗಡೆ ಮಾಡಿದ್ದು ಅದರ ವಿವರ ಹೀಗಿದೆ:-

  • ಮಾರ್ಚ್-25-2024 – ಪ್ರಥಮ ಭಾಷೆ ( ಕನ್ನಡ, ತೆಲುಗು, ಹಿಂದು, ಮರಾಠಿ, ತಮಿಳು , ಉರ್ದು ಇಂಗ್ಲಿಷ್ , ಸಂಸ್ಕೃತ)
  • ಮಾರ್ಚ್-27 -2024- ಸಮಾಜ ವಿಜ್ಞಾನ.
  • ಮಾರ್ಚ್-30-2024 – ವಿಜ್ಞಾನ , ರಾಜ್ಯಶಾಸ್ತ್ರ , ಹಿಂದೂಸ್ತಾನಿ ಸಂಗೀತ , ಕರ್ನಾಟಕ ಸಂಗೀತ,
  • ಏಪ್ರಿಲ್-2-2024 – ಸಮಾಜಶಾಸ್ತ್ರ, ಗಣಿತ
  • ಮಾರ್ಚ್-7-2024 – ಹಿಂದಿ
  • ಏಪ್ರಿಲ್ -3-2024- ಎಲಿಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ , ಎಲೆಕ್ಟ್ರಾನಿಕ್ ಅಂಡ್ ಮೆಕ್ಯಾನಿಕಲ್ ಇಂಜಿನಿಯರಿಂಗ್ , ಇಂಜಿನಿಯರಿಂಗ್ ಗ್ರಾಫಿಕ್ಸ್ , ಪ್ರೋಗ್ರಾಮಿಂಗ್ ಇನ್ ANSI ‘C’ , ಎಲಿಮೆಂಟ್ ಆಫ್ ಕಂಪ್ಯೂಟರ್ ಸೈನ್ಸ್ , ಅರ್ಥಶಾಸ್ತ್ರ,
  • ಏಪ್ರಿಲ್- 04-2024 – ತೃತೀಯ ಭಾಷೆ ( ಹಿಂದಿ ( NCERT) , ಹಿಂದಿ, ಕನ್ನಡ, ಇಂಗ್ಲಿಷ್ ಅರೇಬಿಕ್, ಪರ್ಷಿಯನ್, ಉರ್ದು , ಸಂಸ್ಕೃತ, ಕೊಂಕಣಿ, ತುಳು )ಎನ್, ಎಸ್, ಕ್ಯು. ಎಫ್ ವಿಷಯಗಳು :- ಮಾಹಿತಿ ತಂತ್ರಜ್ಞಾನ, ರಿಟೇಲ್ , ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಎಂಡ್ ವೆಲ್ನೆಸ್ , ಅಪಿರಲ್ ಮೆಡ್ ಆಫ್ಸ್ ಅಂಡ್ ಹೂಂ ಫರ್ನೀಚರ್ , ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ವೇರ್,
  • ಏಪ್ರಿಲ್ – 06-2024 – ದ್ವಿತೀಯ ಭಾಷೆ ( ಇಂಗ್ಲಿಷ್, ಕನ್ನಡ )

ಪಿಯುಸಿ ಪರೀಕ್ಷೆಯ ವೇಳಾಪಟ್ಟಿ :-

  • 01-03-2024 – ಕನ್ನಡ, ಅರೇಬಿಕ್.
  • 04-03-2024 – ಗಣಿತ, ಶಿಕ್ಷಣಶಾಸ್ತ್ರ.
  • 05-03-2024 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
  • 06-03-2024 – ಮಾಹಿತಿ ತಂತ್ರಜ್ಞಾನ, ಹೆಲ್ತ್‌ಕೇರ್, ಬ್ಯೂಟಿ ಅಂಡ್ವೆಲ್‌ನೆಸ್‌ , ಆಟೋಮೊಬೈಲ್, ರೀಟೈಲ್.
  • 07-03-2024 – ಇತಿಹಾಸ, ಭೌತಶಾಸ್ತ್ರ.
  • 09-03-2024 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ.
  • 11-03-2024 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ.
  • 13-03-2024 – ಇಂಗ್ಲಿಷ್.
  • 15-03-2024 – ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ.
  • 16-03-2024 – ಅರ್ಥಶಾಸ್ತ್ರ.
  • 18-03-2024 – ಭೂಗೋಳಶಾಸ್ತ್ರ, ಜೀವಶಾಸ್ತ್ರ
  • 20-03-2024 – ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
  • 21-03-2024 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್
  • 22-03-2024 – ಹಿಂದಿ.

ಇದನ್ನೂ ಓದಿ: ಹೊಸ ಹ್ಯುಂಡೈ ಐಯೋನಿಕ್ 7 ನ ವಿನ್ಯಾಸ, ಎಂಜಿನ್ ಮತ್ತು ವೈಶಿಷ್ಟ್ಯಗಳು – ಹಾಗೆಯೇ ಇದು ಭಾರತದಲ್ಲಿ ಯಾವಾಗ ಲಭ್ಯವಿರುತ್ತದೆ

ಇದನ್ನೂ ಓದಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ರೈಲ್ವೆ ನಿಲ್ದಾಣದಿಂದ ಅಯ್ಯೋಧ್ಯೆಗೆ ತೆರಳುವ ರೈಲುಗಳ ವಿವರ ಇಲ್ಲಿದೆ ನೋಡಿ