SSLC Result 2023: ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್!? ಮೇ 8ಕ್ಕೆ ಫಲಿತಾಂಶ ಪ್ರಕಟವಾಗೋದು ಬಹುತೇಕ ಖಚಿತ.

SSLC Result 2023: ರಾಜ್ಯಾದ್ಯಂತ ಈಗಾಗ್ಲೇ SSLC ಫಲಿತಾಂಶಕ್ಕಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ದಿನಕ್ಕೊಂದು ಹೊಸ ಹೊಸ ಅಪ್ಡೇಟ್ಸ್ ಗಳು ಸೇರಿದಂತೆ ಗಾಳಿಸುದ್ದಿಗಳು ಬರುತ್ತಾ ವಿದ್ಯಾರ್ಥಿಗಳನ್ನ ಗೊಂದಲಕ್ಕಿಡು ಮಾಡಿತ್ತು. ಆದರೆ ಇದೀಗ ಫಲಿತಾಂಶ ಪ್ರಕಟ ಮಾಡುವ ದಿನಾಂಕ ಬಹುತೇಕ ಅಧಿಕೃತವಾಗಿದ್ದು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಹೌದು ಶಿಕ್ಷಣ ಇಲಾಖೆಯಿಂದ ಬಹುತೇಕ ಅಧಿಕೃತವಾಗಿ ಮಾಹಿತಿ ಬಂದಿದ್ದು, SSLC ಫಲಿತಾಂಶ ಯಾವಾಗವಾಗುತ್ತೆ? ರಿಸೆಲ್ಟ್ ನೋಡೋದು ಹೇಗೆ ನೋಡೋಣ ಬನ್ನಿ.

WhatsApp Group Join Now
Telegram Group Join Now

ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ, ಅಂದ್ರೆ KSEAB ಕರ್ನಾಟಕ SSLC ಫಲಿತಾಂಶ 2023 ದಿನಾಂಕವನ್ನು ದೃಢೀಕರಿಸುವ ನಿರೀಕ್ಷೆಯಿದೆ. ಹೌದು ವರದಿಗಳ ಪ್ರಕಾರ, KSEAB ಅಧಿಕಾರಿಗಳು karresults.nic.in ಮತ್ತು kseab.karnataka.gov.in. ನಲ್ಲಿ SSLC ಫಲಿತಾಂಶವನ್ನು ಮುಂದಿನ ವಾರ ಪ್ರಕಟಿಸಲಾಗುವುದು ಅಂತ ಹೇಳಿದ್ದಾರೆ. ಹೌದು ಮಾಧ್ಯಮಗಳ ಜೊತೆ ಮಾತನಾಡಿದ ಕೆಎಸ್‌ಇಎಬಿ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನ ಮೇ 8, 2023 ರಂದು ಘೋಷಿಸಬಹುದು ಎಂದು ತಿಳಿಸಿದ್ದಾರೆ. ಕರ್ನಾಟಕ SSLC ಫಲಿತಾಂಶ ದಿನಾಂಕ, ಸಮಯವನ್ನು ದೃಢೀಕರಿಸಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಹೌದು ಫಲಿತಾಂಶವನ್ನು ಮೇ 8 ರಂದು ಘೋಷಿಸುವ ಸಾಧ್ಯತೆಯಿದೆ. ಇದು 90 ಪ್ರತಿಶತ ದೃಢೀಕರಿಸಲ್ಪಟ್ಟಿದೆ. ವಾಸ್ತವವಾಗಿ, ನಾವು ನಿರ್ಧಾರ ತೆಗೆದುಕೊಳ್ಳಲು ಸಭೆ ನಡೆಸುತ್ತಿದ್ದೇವೆ. ಆದರೆ ಮೇ 8ರಂದು ಫಲಿತಾಂಶ ಹೊರಬೀಳಲಿದೆ ಎಂಬುದು ಶೇ 90ರಷ್ಟು ದೃಢಪಟ್ಟಿದೆ” ಎಂದು ಕೆಎಸ್‌ಇಎಬಿ ಕಾರ್ಯದರ್ಶಿ ಎಂ ರೇವಣಸಿದ್ದಪ್ಪ ಮಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸೋಶಿಯಲ್ ಮಿಡಿಯಾ ಸ್ಟಾರ್! ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

ಆನ್ಲೈನ್ ನಲ್ಲಿ ರಿಸೆಲ್ಟ್ ನೋಡೋದು ಹೇಗೆ?

ಇನ್ನು SSLC ಫಲಿತಾಂಶ ಪ್ರಕಟಣೆಯಾದ ನಂತರ, ಫಲಿತಾಂಶ ವನ್ನು ಅಧಿಕೃತ ವೆಬ್‌ಸೈಟ್ – karresults.nic.in ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಹೌದು ವಿದ್ಯಾರ್ಥಿ ಗಳು ತಮ್ಮ SSLC ಫಲಿತಾಂಶ ವನ್ನು ಡೌನ್‌ಲೋಡ್ ಮಾಡಲು ತಮ್ಮ SSLC ಹಾಲ್ ಟಿಕೆಟ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನು ನಮೂದಿಸಬೇಕಾಗುತ್ತದೆ. ಹೌದು ಅಧಿಕೃತ ವೆಬ್‌ಸೈಟ್- karresults.nic.in ಗೆ ಹೋಗಿ, ಮುಖಪುಟದಲ್ಲಿ, ಕರ್ನಾಟಕ SSLC 2023 ಫಲಿತಾಂಶ ಅನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಹೊಸ ಲಾಗಿನ್ ಪುಟ ತೆರೆಯುತ್ತದೆ. ಆಗ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿದಾಗ ನಿಮ್ಮ SSLC ಪರೀಕ್ಷೆಯ ಫಲಿತಾಂಶ ಪಡೆಯಬಹುದು. ನಂತರ ಫಲಿತಾಂಶವನ್ನ ಪರಿಶೀಲಿಸಿ ಅಗತ್ಯವಿದ್ದಲ್ಲಿ ನೀವು ಡೌನ್‌ಲೋಡ್ ಕೂಡ ಮಾಡಿ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು.

ಒಟ್ಟಿನಲ್ಲಿ ಎಲ್ಲೆಡೆ ವೈರೆಲ್ ಆಗ್ತಿದ್ದ ಫಲಿತಾಂಶದ ಉಹಾಪೋಗಳಿಗೆ ಶಿಕ್ಷಣ ಇಲಾಖೆಯು ಮೇ 8ರಂದು ತೆರೆ ಎಳೆಯುವುದು ಬಹುತೇಕ ಖಚಿತವಾಗಿದ್ದು, ಚುನಾವಣೆಗೂ ಮುನ್ನವೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಅಂತ ಈ ಮೊದಲೇ ಹೇಳಲಾಗಿತ್ತು ಅದರಂತೆ ಈಗಲೂ ಕೂಡ ಮೇ 8ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಅಂತ ಹೇಳಲಾಗಿದ್ದು, ಬಹುತೇಕ ಖಚಿತ ಅಂತ ಕೂಡ ಹೇಳಲಾಗ್ತಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ Dr Bro.! ಸಿನಿಮಾ ಯಾವುದು?

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ. ಅಕ್ಕನ ಮದುವೆಯಲ್ಲಿ ಮಿಂಚುತ್ತಿರುವ ರಕ್ಷಕ್ ಬುಲೆಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram