SSLC Result 2023 Karnataka: ಇಂದು SSLC ರಿಸಲ್ಟ್ ಬರುತ್ತಾ!? ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ರಿಸಲ್ಟ್ ನೋಡೋದೇಗೆ?

SSLC Result 2023 Karnataka: ರಾಜ್ಯದ್ಯಂತ ಈಗಾಗ್ಲೇ SSLC ಪರೀಕ್ಷೆ ಮುಕ್ತಾಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಕೂಡ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ಫಲಿತಾಂಶದ ಕುರಿತಂತೆ ಸಾಕಷ್ಟು ಗಾಳಿ ಸುದ್ದಿಗಳು ಉಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಕೂಡ ಗೊಂದಲದಲ್ಲಿದ್ದಾರೆ. ಹಾಗಾದ್ರೆ SSLC ಪರೀಕ್ಷೆ ಫಲಿತಾಂಶ ಯಾವಾಗ? ರಿಸಲ್ಟ್ ನೋಡೋದು ಹೇಗೆ ಇದೆಲ್ಲವನ್ನ ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ಪರೀಕ್ಷೆ ಆದ ನಂತರ ಎಲ್ಲರು ಸಾಮಾನ್ಯವಾಗಿ ಕಾಯುವುದು ಫಲಿತಾಂಶಕ್ಕಾಗಿ. ಆದರೆ ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಾಗ ಕೆಲವೊಂದು ಸುಳ್ಳು ಸುದ್ದಿಗಳು, ವದಂತಿಗಳು ಹರಿದಾಡುವುದು ಸರ್ವೇ ಸಾಮಾನ್ಯ. ಹೌದು ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಅನ್ನೋ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ವು. ಆದರೆ ಇದೀಗ ಅದೆಲ್ಲ ಕೇವಲ ಉಹಾಪೋಹಗಳಷ್ಟೇ ಅಂತ ಹೇಳಲಾಗುತ್ತಿದೆ. ಹಾಗಾದ್ರೆ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತೆ? ಮತ್ತು ಕೆಲವೊಂದಿಷ್ಟು ವಿದ್ಯಾರ್ಥಿಗಳಲ್ಲಿ ಫಲಿತಾಂಶ ಚೆಕ್ ಮಾಡೋ ಸರಿಯಾದ ವಿಧಾನ ಗೊತ್ತಿಲ್ಲದೇ ಗೊಂದಲದಲ್ಲಿ ಇರುತ್ತಾರೆ. ಹಾಗಾದ್ರೆ ಇದೆಲ್ಲದಕ್ಕೂ ಉತ್ತರ ಏನು ಅನ್ನೋದನ್ನ ನೋಡ್ತಾ ಹೋಗೋಣ ಬನ್ನಿ.

ಮೇ ಮೊದಲ ವಾರದಲ್ಲಿ ರಿಸಲ್ಟ್ ಬರೋದು ಪಕ್ಕನಾ?

ಕರ್ನಾಟಕ ರಾಜ್ಯದಲ್ಲಿ ಸುಮಾರು 8 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ಶೀಘ್ರದಲ್ಲೇ ಅಂದರೆ ಮೇ ಮೊದಲನೇ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗಿತ್ತು. ಆದರೆ ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳಲು ಆಗೋದಿಲ್ಲ ಅಂತ ಹೇಳಲಾಗುತ್ತಿದೆ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಇರೋದ್ರಿಂದ ಚುನಾವಣೆಗೂ ಮೊದಲೇ ಫಲಿತಾಂಶ ಪ್ರಕಟಗೊಳ್ಳುತ್ತೆ ಅಂತಲೂ ಹೇಳಲಾಗುತ್ತಿತ್ತು. ಆದರೆ ಮುಂದಿನ ವಾರವೇ ವಿಧಾನಸಭಾ ಚುನಾವಣೆ ಇರೋದ್ರಿಂದ ಫಲಿತಾಂಶ ಪ್ರಕಟವಾಗೋದು ಸಾಧ್ಯವಾದರೆ ಬೇಗ ಇಲ್ಲವಾದರೆ ಚುನಾವಣೆಯ ನಂತರ ಫಲಿತಾಂಶ ಪ್ರಕಟವಾಗುತ್ತೆ ಅಂತ ಹೇಳಲಾಗುತ್ತಿದೆ. ಆದ್ರೆ ಇದರ ಬಗ್ಗೆ ಕರ್ನಾಟಕ ಶಿಕ್ಷಣ ಮಂಡಳಿಯವರಗಲಿ ಅಥವಾ ಶಿಕ್ಷಣ ಇಲಾಖೆಯವರಾಗಲಿ ಅಧಿಕೃತವಾಗಿ ಫಲಿತಾಂಶದ ಬಗ್ಗೆ ಎಲ್ಲಿಯೂ ಏನನ್ನು ಹೇಳಿಲ್ಲ. ಹೀಗಾಗಿ ಇದೆಲ್ಲವೂ ಕೂಡ ಉಹಾಪೋಹಗಳಷ್ಟೇ ಅಂತ ಹೇಳಲಾಗ್ತಿದೆ. ಆದರೆ ಫಲಿತಾಂಶ ಪ್ರಕಟಗೊಳ್ಳುವ 2ದಿನ ಮೊದಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನ ಹಂಚಿಕೊಳ್ಳುತ್ತಾರೆ. ಹೀಗಾಗಿ ಶಿಕ್ಷಣ ಸಚಿವರು ಅಧಿಕೃತವಾಗಿ ಹೇಳುವವರೆಗೂ ಇದ್ಯಾವುದಕ್ಕೂ ಕಿವಿಗೊಡದೆ ಇರುವುದು ಉತ್ತಮ ಅಂತ ಹೇಳಾಲಾಗುತ್ತಿದೆ.

ಇದನ್ನೂ ಓದಿ: ರೈಲ್ವೆನಲ್ಲಿ ರಾತ್ರಿ ಸಮಯ ಜರ್ನಿ ಮಾಡುವವರಿಗೆ, ರೈಲ್ವೆ ಇಲಾಖೆಯು ಹೊಸ ನಿಯಮಗಳನ್ನು ರೂಪಿಸಿದೆ

ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ರಿಸಲ್ಟ್ ನೋಡೋದೇಗೆ?

ಇನ್ನು ಫಲಿತಾಂಶ ಪ್ರಕಟವಾದ ನಂತರ ಕೆಲವೊಂದಿಷ್ಟು ಜನರಿಗೆ ಗೊಂದಲಗಳಿರುತ್ತೆ. ಅದೇನೆಂದರೆ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನ ನೋಡುವುದು ಹೇಗೆ ಎಲ್ಲಿ ಎಂಬ ಗೊಂದಲಗಳು ಇರೋದು ಸರ್ವೇ ಸಾಮಾನ್ಯ. ಇನ್ನು ಫಲಿತಾಂಶ ಪ್ರಕಟವಾದ ನಂತರ ರಿಸೇಲ್ಟ್ ನೋಡೋದು ಹೇಗೆ ಅಂದ್ರೆ.. ಮೊದಲಿಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ https://karresults.nic.in/ಗೆ ಭೇಟಿ ನೀಡಬೇಕು ನಂತರ ಓಪನ್‌ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕದ ಕುರಿತು ಮಾಹಿತಿ ಟೈಪ್‌ ಮಾಡಿದ ನಂತರ ‘Submit’ ಅನ್ನೋದರ ಮೇಲೆ ಕ್ಲಿಕ್ ಮಾಡಿದಾಗ ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ. ಅಂದ್ರೆ ನಿಮ್ಮ ರಿಸೆಲ್ಟ್ ಶೀಟ್ ಓಪನ್ ಆಗುತ್ತೆ. ಬೇಕಿದ್ರೆ ಪಕ್ಕದಲ್ಲೇ ಡೌನ್ಲೋಡ್ ಆಪ್ಷನ್ ಮೇಲೆ ಕ್ಲಿಕ್ ಮಾಡುದ್ರೆ ರೆಫರೆನ್ಸ್‌ಗಾಗಿ ಪ್ರಿಂಟ್‌ ನ್ನ ಕೂಡ ಮಾಡಿಕೊಳ್ಳಬಹುದು.

ಒಟ್ಟಿನಲ್ಲಿ ಮೇ 10ರ ಒಳಗಾಗಿ ಫಲಿತಾಂಶ ಬರುವ ನಿರೀಕ್ಷೆ ಇದ್ದು. ಆದರೆ ಇದು ಯಾವುದು ಅಧಿಕೃತವಲ್ಲ. ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಮಾಹಿತಿ ಬರೋವರೆಗೂ ತಾಳ್ಮೆಯಿಂದ ಕಾಯಬೇಕು.

ಇದನ್ನೂ ಓದಿ: ಮುಂದಿನ 48 ಗಂಟೆಗಳ ಕಾಲ ರಣ ಮಳೆ, ಈ 7 ಜಿಲ್ಲೆಗಳಿಗೆ ರೆಡ್ ಅಲರ್ಟ್.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram