ನಿನ್ನೆ ತಾನೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು ರಾಜ್ಯದಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಅದರ ಬೆನ್ನಲ್ಲೇ ಈಗ SSLC ಪರೀಕ್ಷೆಯ ಫಲಿತಾಂಶ ಬಿಡುಗಡೆ ಯಾವಾಗ ಎಂಬ ಪ್ರಮುಖ ಸುದ್ದಿಯೊಂದನ್ನು ಇಲಾಖೆಯು ತಿಳಿಸಿದೆ.
ಫಲಿತಾಂಶ ಬರುವ ನಿಗದಿತ ಸಮಯ:- ಹಿಂದಿನ ವಾರವಷ್ಟೇ SSLC ಪರೀಕ್ಷೆಗಳು ಮುಗಿದಿವೆ. ಫಲಿತಾಂಶದ ಬಗ್ಗೆ ಹೇಳುವುದಾದರೆ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಬಿಡುಗಡೆ ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ ನಲ್ಲಿ ಫಲಿತಾಂಶ ವೀಕ್ಷಣೆ ಮಾಡಲು ಸಾಧ್ಯವಿದೆ.
ಮೌಲ್ಯಮಾಪನ ಆರಂಭ ದಿನಾಂಕ :- ಇಲಾಖೆಯ ಸೂಚನೆಯ ಪ್ರಕಾರ ಇದೆ ಬರುವ ಏಪ್ರಿಲ್ 15 ಸೋಮವಾರದಿಂದ ಮೌಲ್ಯಮಾಪನ ಆರಂಭ ಆಗಲಿದ್ದು, ಎಲ್ಲಾ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳ್ಳಲು 20 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಕೀ ಉತ್ತರಗಳು ಬಿಡುಗಡೆ ಆಗಿವೆ :-
sslc ಪರೀಕ್ಷೆಗಳು ಕೀ ಉತ್ತರ ಪತ್ರಿಕೆಗಳು ಬಿಡುಗಡೆ ಆಗಿದ್ದು ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್ ಮಾಡಿ ಈ ವೆಬ್ಸೈಟ್ ಗೆ ಭೇಟಿನೀಡಿ ನೀವು ಬರೆದ ಉತ್ತರಗಳು ಸರಿಯಾಗಿ ಇವೆಯೇ ಎಂದು ಪರಿಶೀಲನೆ ಮಾಡ್ಬಹುದು. ನಿಮಗೆ ವೆಬ್ಸೈಟ್ ನಲ್ಲಿ ಉತ್ತರ ಪತ್ರಿಕೆಯ ವಿಷಯವಾರು ಪಟ್ಟಿ ಸಿಗುತ್ತದೆ. ನಿಮಗೆ ಯಾವ ವಿಷಯದ ಕೀ ಉತ್ತರ ಪತ್ರಿಕೆ ಬೇಕೋ ಅದನ್ನು ಸುಲಭವಾಗಿ download ಮಾಡಿ ನೋಡಬಹುದು. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, JTS ವಿಷಯಗಳು, ಕರ್ನಾಟಕ ಸಂಗೀತ, ರಾಜಕೀಯ ವಿಜ್ಞಾನ, ಸಮಾಜ ಶಾಸ್ತ್ರ ಅರ್ಥ ಶಾಸ್ತ್ರ ವಿಷಯಗಳ ಕೀ ಉತ್ತರಗಳು ಸಿಗುತ್ತವೆ.
ಇದನ್ನೂ ಓದಿ: 55 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿರುವ 5 ರೀತಿಯ ಲ್ಯಾಪ್ಟಾಪ್ ಗಳು!
ಎಸೆಸೆಲ್ಸಿ ಪರೀಕ್ಷೆ ನಡೆದ ದಿನಗಳು :-
- ಮಾರ್ಚ್ 25 -2024ಸೋಮವಾರ – ಪ್ರಥಮ ಭಾಷೆ
- ಮಾರ್ಚ್ 27- 2024-ಬುಧವಾರ – ಸಮಾಜ ವಿಜ್ಞಾನ
- ಮಾರ್ಚ್ 30 -2024 ಶನಿವಾರ – ವಿಜ್ಞಾನ
- ಏಪ್ರಿಲ್ 2-2024- ಮಂಗಳವಾರ – ಗಣಿತ
- ಏಪ್ರಿಲ್ 4 -2024- ಗುರುವಾರ – ತೃತೀಯ ಭಾಷೆ
- ಏಪ್ರಿಲ್ 6 – 2024-ಶನಿವಾರ – ದ್ವಿತೀಯ ಭಾಷೆ
SSLC ನಂತರ ಯಾವ ಯಾವ ಕೋರ್ಸ್ ಗಳು ಇವೆ?
sslc ಫಲಿತಾಂಶ ಬಿಡುಗಡೆಗೂ ಮುನ್ನವೇ ತಂದೆ ತಾಯಿ ಹಾಗೂ ಮಕ್ಕಳಿಗೆ ಮುಂದೆ ಯಾವ ಕೋರ್ಸ್ ಆಯ್ದುಕೊಳ್ಳಬೇಕು ಎಂಬ ಯೋಚನೆ ಇರುತ್ತದೆ. sslc ಮುಗಿದ ಬಳಿಕ ಯಾವ್ಯಾವ ಕೋರ್ಸ್ ಗಳು ಲಭ್ಯ ಇವೆ ಎಂಬುದು ನೋಡೋಣ.
1. ಪಿಯುಸಿ :- ಮೂರು ವಿಷಯಗಳು ಮೇಲೆ ಪಿಯುಸಿ ಓದಬಹುದು. ಇದು ಎರಡು ವರ್ಷಗಳ ಅವಧಿಯ ಕೋರ್ಸ್ ಆಗಿದೆ. ಈ ಕೋರ್ಸ್ ನ್ಲಲಿ ಇರುವ ವಿಷಯಗಳು.
- ವಿಜ್ಞಾನ: ವೈದ್ಯಕೀಯ, ಎಂಜಿನಿಯರಿಂಗ್ ತಂತ್ರಜ್ಞಾನ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ.
- ವಾಣಿಜ್ಯ: ಪತ್ರ, ಆರ್ಥಿಕತೆ, ವ್ಯವಹಾರ ಲೆಕ್ಕ ಅಧ್ಯಯನಗಳು, ಗಣಕ ವಿಜ್ಞಾನ.
- ಕಲೆ: ಭಾಷೆಗಳು, ಇತಿಹಾಸ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ವಿಜ್ಞಾನ ಮನೋವಿಜ್ಞಾನ.
2. ಐಟಿಐ :- ಇದು ಮೂರು ವರ್ಷಗಳ ಕೋರ್ಸ್ ಆಗಿದೆ. ಇದರಲ್ಲಿ ಬರುವ ವಿಷಯಗಳು ಎಂದರೆ
- ತಾಂತ್ರಿಕ ಕೌಶಲ್ಯಗಳಲ್ಲಿ ಡಿಪ್ಲೊಮಾ: ಇಲಿಕಲ್, ಡಿಸೈನ್ಸ್, ಯಾಂತ್ರಿಕ, ಆಟೋಮೊಬೈಲ್, ಕಂಪ್ಯೂಟರ್.
3. ಅಲ್ಪಾವಧಿಯ ಕೋರ್ಸ್‌ಗಳು: ಎರಡು ಮೂರು ವರ್ಷಗಳ ಕೋರ್ಸ್ ಜೊತೆಗೆ ಆರು ತಿಂಗಳು ಇಲ್ಲ ಒಂದು ವರ್ಷದ ಕೋರ್ಸ್ ಗಳು ಇವೆ. ಅವು ಯಾವುದೆಂದರೆ.
- ಫ್ಯಾಷನ್ ಡಿಸೈನ್.
- ಗ್ರಾಫಿಕ್ಸ್ ಡಿಸೈನ್.
- ವೆಬ್ ಡಿಸೈನ್.
- ಮಲ್ಟಿಮೀಡಿಯಾ.
- ಅನಿಮೇಷನ್.
- ಪ್ಯಾರಾಮೆಡಿಕಲ್.
ಇದರ ಹೊರತು ಪಡಿಸಿ ಹಲವು ಸರ್ಕಾರಿ ಇಲಾಖೆಗಳ ಜಾಬ್ ಗಳು ಇವೆ ಹಾಗೂ ಕೆಲವು ವ್ಯಾಪಾರಗಳನ್ನು ನೀವು ಸ್ಟಾರ್ಟ್ ಮಾಡಬಹುದು.
ಇದನ್ನೂ ಓದಿ: ನಿಮ್ಮ ಸ್ಮಾರ್ಟ್ ಫೋನ್ ನಿಂದ ಉತ್ತಮ ಫೋಟೋ ತೆಗೆಯಲು; ಈ ಐದು ಸೆಟ್ಟಿಂಗ್ ಮಾಡಿಕೊಳ್ಳಿ..