ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಪ್ರಾರಂಭ; ಅರ್ಜಿ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಪ್ರವರ್ಗ-1 ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ.

WhatsApp Group Join Now
Telegram Group Join Now

ಇದು ಅಧ್ಯಯನ ಮುಗಿದ ನಂತರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವ ಕುರಿತಾಗಿ ಮಾಹಿತಿಯನ್ನು ನೀಡುತ್ತದೆ. ಇನ್ನೂ ಒಂದು ವಿಶೇಷ ಸೂಚನೆ ಏನಪ್ಪಾ ಅಂತಂದ್ರೆ ವೇತನ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಇದನ್ನು ಮಾಡಿದರೆ ನೀವು ವೇತನವನ್ನು ಪಡೆಯಬಹುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ Whats App ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ವಿದ್ಯಾರ್ಥಿ ವೇತನವನ್ನು ಪಡೆಯಲು ಇರುವ ಅರ್ಹತೆಗಳು

ವಿದ್ಯಾರ್ಥಿ ವೇತನದ ಅರ್ಹತೆಗಳನ್ನು ಪಡೆಯುವುದಕ್ಕೆ ನೀವು ಅನೇಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:

  • ಆದಾಯ ಪ್ರಮಾಣ ಪತ್ರ
  • ಹಿಂದಿನ ತರಗತಿಯಲ್ಲಿನ ಅಂಕ ಪಟ್ಟಿ
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ರಾಷ್ಟ್ರೀಕೃತ ಬ್ಯಾಂಕ್ ಖಾತೆ ಪುಸ್ತಕ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಪ್ರಸಕ್ತ ವರ್ಷದ ದಾಖಲಾತಿ ಸಂಖ್ಯೆ
  • ಕಾಲೇಜು ಪ್ರಾರಂಭವಾದ ದಿನಾಂಕ
  • ಶಾಲೆಯಿಂದ ಕಾಲೇಜಿಗೆ ಇರುವ ಅಂತರ

ಇವುಗಳನ್ನು ನಿಮ್ಮ ಅಧಿಕಾರಿಗಳಿಗೆ ಸಲ್ಲಿಸ ಬೇಕಾಗುತ್ತದೆ.

PHD ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಇನ್ನಿತರ ಯಾವುದೇ ವ್ಯವಸ್ಥೆ ಇಲ್ಲ ಇವರು ಕೂಡ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಇವರಿಗೂ ಕೂಡ ಈ ಆನ್ಲೈನ್ ಮೂಲಕವೇ ಎಲ್ಲ ರೀತಿಯ ಸಲಹೆಗಳನ್ನು ಪಡೆಯಬಹುದಾಗಿದೆ. ಒಂದು ವೇಳೆ ಪಿಎಚ್‌ಡಿ ಅಭ್ಯಾಸ ರಾಗಿದ್ದರೆ ಬೇರೆ ಅರ್ಜಿ ಹಾಗೂ ಪಿ ಎಚ್ ಡಿ ಫೆಲೋಶಿಪ್ ಅನ್ನು ಮಾಡುತ್ತಿದ್ದರೆ ಬೇರೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಕೆಳಗಿನ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಜನವರಿ 10 ರ ಒಳಗಾಗಿ ಸಲ್ಲಿಸಬಹುದು.

ಹಾಗೆ, ನೀವು ಈ ವಿದ್ಯಾರ್ಥಿ ವೇತನವನ್ನು ಪಡೆಯಬಯಸಿದರೆ Online ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು, ನಿಮಗೆ ಅರ್ಜಿ ಸಲ್ಲಿಸಲು ಬೇರೊಂದು ರೀತಿಯಲ್ಲಿ ಯಾವುದೇ ಪ್ರಕ್ರಿಯೆಗಳಿಲ್ಲ. ಇದರ ವೆಬ್ಸೈಟ್ಗೆ ಭೇಟಿ ನೀಡಿ ಎಲ್ಲ ದಾಖಲಾತಿ ಗಳನ್ನು ಸ್ಕ್ಯಾನ್ ಮಾಡಿ Upload ಮಾಡಬೇಕಾಗುತ್ತದೆ. ವೆಬ್ಸೈಟ್ ನ ವಿಳಾಸ ಈ ರೀತಿ ಇದೆ, https://ssp.postmatric.karnataka.gov.in/ ಇದರ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 10. ಇನ್ನು ಏನಾದರೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ [email protected]. ನಿಮಗೆ ಯಾವುದೇ ರೀತಿಯಲ್ಲಿ ಸಹಾಯಕ್ಕೆ ಬೇಕಾದರೆ ಈ E -Mail ನ್ನು ಸಂಪರ್ಕಿಸಿ.

ಇದನ್ನೂ ಓದಿ: UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

ಇದನ್ನೂ ಓದಿ: ರೈತರಿಗೆ ಸರಕಾರ ದಿಂದ ಬಂತು ಗುಡ್ ನ್ಯೂಸ್, ಜಮೀನಿನ ಸಕ್ರಮ ವಿಚಾರವಾಗಿ ಪ್ರತಿ ಯೊಂದು ತಾಲೂಕು ಗಳಲ್ಲಿಯೂ “ಬಗರ್ ಹುಕುಂ” ಸಮಿತಿಯ ರಚನೆ ಆಗಲಿದೆ

ಓದಿ: CIBIL Score ಅಥವಾ ಯಾವುದೇ ದಾಖಲೆಗಳು ಇಲ್ಲದೆ ಸುಲಭವಾಗಿ ಸಾಲ ಪಡೆಯಬಹುದು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗೆ ಜಾಯಿನ್ ಆಗಿ: Click Here To Join Telegram