ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಈಗಾಗಲೇ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಸಹಾಯಧನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ ಈಗ ಮತ್ತೆ ಆ ಹಣವನ್ನು ಪರಿಷ್ಕರಣೆ ಮಾಡಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇನ್ನಷ್ಟು ಧನ ಸಹಾಯ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಹೊರಡಿಸಿದ ಆದೇಶವೇನು :- 1996 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಯ 62 ರ ಕಲಂ ಅಡಿಯಲ್ಲಿ
ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು ನಿಯಮದ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನದ ಮೊತ್ತಗಳನ್ನು ಶೈಕ್ಷಣಿಕ ವರ್ಷ 2023-24 ರಿಂದ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪರಿಷ್ಕೃತ ದರದ ಪಟ್ಟಿ ಹೀಗಿದೆ.
ರಾಜ್ಯ ಸರ್ಕಾರವು ನೂತನವಾಗಿ ಬಿಡುಗಡೆ ಮಾಡಿದ ಸಹಾಯ ಧನದ ಮೊತ್ತ ಹೀಗಿದೆ :-
- 1 ರಿಂದ 5ನೇ ತರಗತಿಯವರೆಗೆ ಓದುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ 1,800 ರೂಪಾಯಿ.
- 6 ರಿಂದ 8ನೇ ತರಗತಿಯವರೆಗೆ 2,400 ರೂಪಾಯಿ.
- 9 ರಿಂದ10ನೇ ತರಗತಿಯವರೆಗೆ 3,000 ರೂಪಾಯಿ.
- 1st ಪಿಯು ಹಾಗೂ 2nd ಪಿಯುಸಿ ವಿದ್ಯಾರ್ಥಿಗಳಿಗೆ 4,600 ರೂಪಾಯಿ.
- ಪದವಿ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
- ಬಿ.ಇ ಅಥವಾ ಬಿಟೆಕ್ ಹಾಗೂ ತತ್ಸಮಾನ ತಾಂತ್ರಿಕ ಪದವಿಯ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
- ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
- ಬಿ.ಎಸ್.ಸಿ ನರ್ಸಿಂಗ್ ಅಥವಾ ಜಿ.ಎನ್.ಮ್ ಹಾಗೂ ಪ್ಯಾರ ಮೆಡಿಕಲ್ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
- ಬಿ.ಎಡ್ ಕೋರ್ಸ್ ವಿದ್ಯಾರ್ಥಿಗಳಿಗೆ 6,000 ರೂಪಾಯಿ.
- ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಕೋರ್ಸ್ ಮಾಡುತ್ತಾ ಇರುವ ವಿದ್ಯಾರ್ಥಿಗಳಿಗೆ 11,000 ರೂಪಾಯಿ ಎಲ್ಎಲ್ ಬಿಅಥವಾ ಎಲ್.ಎಲ್.ಎಮ್ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
- ಐ.ಐ.ಟಿ ಅಂತಹ ಭಾರತ ಸರ್ಕಾರದ ಮಾನ್ಯತೆ ಪಡೆದ ವಿವಿಧ ಕೋರ್ಸ್ ಗಳಿಗೆ 10,000 ರೂಪಾಯಿ.
- ಪಿಹೆಚ್ ಡಿ ಗೆ 11,000 ರೂಪಾಯಿ , ಎಂ. ಡಿ 11,000 ರೂಪಾಯಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಯಮಗಳು :-
- ಪರಿಷ್ಕೃತ ಸಹಾಯ ಧನದ ಮೊತ್ತವು 2023-2 4ನೇ ಸಾಲಿನಲ್ಲಿ ಓದುವ ಮಕ್ಕಳಿಗೆ ಅನ್ವಯ ಆಗುತ್ತವೆ.
- ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಯಾವುದೇ ಕಾರಣಕ್ಕೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಬಾರದು.
- ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ನೋಂದಾಯಿತ ಕಟ್ಟಡ ಕಾರ್ಮಿಕರ ಸದಸ್ಯತ್ವವನ್ನು ಹೊಂದಿರಬೇಕು. ಇಲ್ಲವಾದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಕಟ್ಟಡ ಕಾರ್ಮಿಕ ಮಕ್ಕಳಿಗೆ ಇದರಿಂದ ಏನೂ ಲಾಭ :-
- ಕಟ್ಟಡ ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಈ ಹಣವೂ ಉಪಯೋಗ ಆಗುತ್ತದೆ.
- ಹಾಸ್ಟೆಲ್ ಫೀಸ್ ಕಾಲೇಜ್ ಫೀ ಹಾಲನ್ನು ಕಟ್ಟಲು ಸಹಾಯ ಆಗುತ್ತದೆ.
- ಆರ್ಥಿಕ ವಾಗಿ ಹಿಂದುಳಿದ ಕಾರ್ಮಿಕ ವರ್ಗದವರಿಗೆ ಇದರಿಂದ ಆರ್ಥಿಕ ಹೊರೆ ಕಡಿಮೆ ಆಗುತ್ತದೆ.
- ಕಟ್ಟಡ ಕಾರ್ಮಿಕ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲು ಸಾಧ್ಯವಿದೆ.
- ಕಲಿಕೆಯಲ್ಲಿ ಕಾರ್ಮಿಕ ವರ್ಗದ ಮಕ್ಕಳಿಗೆ ಇನ್ನಷ್ಟು ಆಸಕ್ತಿ ಬರುತ್ತದೆ.
ಇದನ್ನೂ ಓದಿ: ಮಹಿಳೆಯರಿಗೆ 11 ಸಾವಿರ ನೀಡುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Vivo V30 ಮತ್ತು V30 Pro ಖರೀದಿಸಿ, ಅದ್ಭುತ ರಿಯಾಯಿತಿಯೊಂದಿಗೆ ಸಾವಿರಾರು ರೂಪಾಯಿ ಉಳಿಸಿ!