ಇನ್ಮುಂದೆ ಭೂ ದಾಖಲೆಗಳು ಆಗಲಿವೆ ಡಿಜಿಟಲೀಕರಣ; ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ

ರೈತರಿಗೆ ತಲೆ ನೋವು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರಿಂದ ಸರ್ಕಾರ ಹಾಗೂ ರೈತರ ಸಮಯ ಹಣ ಎರಡು ಕೂಡ ಉಳಿತಾಯವಾಗಲಿದೆ. ಹೌದು ಸಾರ್ವಜನಿಕರಿಗೆ ತಮ್ಮ ಜಮೀನುಗಳ ದಾಖಲೆಗಳು ಯಾವುದೇ ಸಮಸ್ಯೆಗಳಿಲ್ಲದೆ ಸಿಗುವಂತೆ ಮಾಡಲು ರೆಕಾರ್ಡ್ ರೂಂಗಳಲ್ಲಿರುವ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಅಭಿಯಾನ ಆರಂಭಿಸಲಾಗುವುದು ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೆಕಾರ್ಡ್ ರೂಂ ನಲ್ಲಿರುವ ಹಳೆಯ ದಾಖಲೆಗಳು ಶಿಥಿಲಾವಸ್ತೆಯಲ್ಲಿವೆ. ಕೆಲವು ದಾಖಲೆಗಳು ಕಳೆದು ಹೋಗಿವೆ. ಆದುದರಿಂದ, ಎಲ್ಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕೆಲಸವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ, ಜನವರಿ ತಿಂಗಳಿನಿಂದ ದಾಖಲೆಗಳ ಡಿಜಿಟಲೀಕರಣವನ್ನು ಆರಂಭಿಸಿ, ವರ್ಷದ ಅಂತ್ಯಕ್ಕೆ ಎಲ್ಲ ಮುಗಿಸಲು ಉದ್ದೇಶಿಸಲಾಗಿದೆ.

WhatsApp Group Join Now
Telegram Group Join Now

ಡಿಜಿಟಲೀಕರಣಗೊಂಡ ಎಲ್ಲ ದಾಖಲೆಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡುತ್ತೇವೆ. ದೃಢೀಕೃತ ಪ್ರತಿಗಳು ಅಗತ್ಯವಿದ್ದಲ್ಲಿ ಮಾತ್ರ ಸಾರ್ವಜನಿಕರು ಸರಕಾರಿ ಕಚೇರಿಗೆ ಬರಬಹುದು. ಇಲ್ಲದಿದ್ದರೆ, ಇಂಟರ್‌ ನೆಟ್ ಮೂಲಕ ಅವರು ತಮಗೆ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

2024ರವೊಳಗೆ ಮುಗಿಯಲಿದೆ ಯೋಜನೆಯ ದತ್ತಾಂಶ ಸಂಗ್ರಹ

ಇನ್ನು ಮುಖ್ಯವಾಗಿ ದಾಖಲೆಗಳ ಡಿಜಿಟಲೀಕರಣ ಮಾಡಲು ಒಂದು ತಾಲೂಕಿಗೆ ಕನಿಷ್ಠ 50 ಲಕ್ಷ ರೂ.ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ದೇ ಕೆಲವು ಕಡೆ ಈ ಮೊತ್ತ ಕಡಿಮೆಯೂ ಆಗಬಹುದು, ಹೆಚ್ಚಳವು ಆಗಬಹುದು. ಹೀಗಾಗಿ ಈ ಕಾರ್ಯಕ್ಕೆ ಕೇಂದ್ರ ಸರಕಾರದಿಂದಲೂ ಅನುದಾನ ಕೋರಿ ಮನವಿ ಮಾಡಲಾಗಿದೆ, ಇನ್ನು ಮುಂದೆ ಅಭಿಯಾನದ ರೂಪದಲ್ಲಿ ಭೂದಾಖಲೆಗಳನ್ನು ಸ್ಕ್ಯಾನಿಂಗ್‌ ಮಾಡಲಾಗುವುದು. ಜಮೀನಿನ ಮಾಲೀಕತ್ವ ಯಾರದ್ದು? ಯಾರಿಂದ ಯಾರಿಗೆ ಹೇಗೆ ಬಂತು, ಮಾರಾಟವಾಯಿತೆ ಅಥವಾ ದಾನದ ರೂಪದಲ್ಲಿ ಬಂದಿತೆ ಎಂಬುದರ ಸ್ಪಷ್ಟ ಮಾಹಿತಿ ಸಿಗುತ್ತದೆ ಅಂತ ತಿಳಿಸಿದ್ದಾರೆ.

ಇನ್ನು ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು. ಸುಮಾರು 2.40 ಕೋಟಿಯಷ್ಟು ಸರ್ವೆ ಸಂಖ್ಯೆಗಳ ಪಹಣಿಗಳಿವೆ. ಅವುಗಳನ್ನು ರಕ್ಷಿಸಲು ಡಿಜಿಟಲೀಕರಣ ಮಾಡುವುದರ ಜೊತೆಗೆ ಆರ್‌ ಟಿಸಿ ಬಳಸಿಕೊಂಡು ಜಮೀನುಗಳನ್ನು ಬೇರೆಯವರಿಗೆ ಮಾರಾಟ ಮಾಡುವುದನ್ನು ತಪ್ಪಿಸಲು ಆರ್‌ ಟಿಸಿಯನ್ನು ಭೂ ಮಾಲೀಕರ ಆಧಾರ್ ಜೊತೆ ಜೋಡಣೆ ಮಾಡಲು ನಿರ್ಧರಿಸಿದ್ದೇವೆ, ಇದರಿಂದ ನಕಲಿ ನೋಂದಣಿಗಳನ್ನು ತಡೆಯಬಹುದು. ಅಲ್ಲದೆ, ಆಸ್ತಿಗಳ ಮಾರಾಟ, ಖರೀದಿ ಪ್ರಕ್ರಿಯೆಯೂ ಸರಳೀಕೃತವಾಗುತ್ತದೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದರ ಜೊತೆ ‘ಬಗರ್ ಹುಕುಂ’ ಸಭೆಯ ನಡಾವಳಿಗಳನ್ನು ಡಿಜಿಟಲೀಕರಣಗೊಳಿಸಲು ತೀರ್ಮಾನಿಸಿದ್ದೇವೆ. ಸಭೆಗೆ ಸದಸ್ಯರ ಹಾಜರಾತಿಯನ್ನು ಬಯೋಮೆಟ್ರಿಕ್ ವ್ಯವಸ್ಥೆಯಡಿ ತರಲಾಗುತ್ತಿದೆ. ಬಗರ್ ಹುಕುಂ ಸಮಿತಿಗಳ ಮೂಲಕ ಭೂಮಿ ಮಂಜೂರು ಆಗುವ ಅರ್ಹರಿಗೆ ಸರಕಾರದಿಂದಲೆ ಭೂಮಿಯನ್ನು ಪೋಡಿ ಮಾಡಿ, ನೋಂದಣಿ ಮಾಡಿಸಿಕೊಡಲಾಗುವುದು, ಅಲ್ದೇ ರಾಜ್ಯದ 50 ವಿಧಾನಸಭೆ ಕ್ಷೇತ್ರಗಳಿಂದ ಬಗರ್ ಹುಕುಂ ಸಮಿತಿ ರಚನೆಗೆ ಪ್ರಸ್ತಾವನೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶಗಳನ್ನು ಹೊರಡಿಸಲಾಗುವುದು. ಇನ್ನುಳಿದ ಕ್ಷೇತ್ರಗಳಿಂದ ಅಥವಾ ತಾಲೂಕುಗಳಿಂದ ಬರುವ ಪ್ರಸ್ತಾವನೆಗಳಿಗೆ ಒಂದು ವಾರದೊಳಗೆ ಮಂಜೂರಾತಿ ನೀಡಲಾಗುವುಡು.

ಇನ್ನು ಬಗರ್ ಹುಕುಂ ಸಾಗುವಳಿಗಾಗಿ 9,29,512 ಅರ್ಜಿಗಳು ಬಂದಿವೆ. ಇದರಲ್ಲಿ 54 ಲಕ್ಷ ಎಕರೆ ಭೂಮಿಗೆ ಈ ಅರ್ಜಿಗಳು ಬಂದಿವೆ. ಅಷ್ಟು ಪ್ರಮಾಣದ ಜಮೀನು ಸರಕಾರದ ಬಳಿ ಇಲ್ಲ. ಹಲವಾರು ಮಂದಿ ಅನರ್ಹರು ಅರ್ಜಿಗಳನ್ನು ಹಾಕಿದ್ದಾರೆ. ಎಂಟು ತಿಂಗಳ ಒಳಗಾಗಿ ಬಗರ್ ಹಕುಂ ಪ್ರಕ್ರಿಯೆಯನ್ನು ಮುಗಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಸಾಗುವಳಿ ಚೀಟಿಯೂ ಗಣಕೀಕೃತ ಮಾಡುತ್ತೇವೆ. ಬಹುತೇಕ ಜನರು ಸಾಗುವಳಿ ಚೀಟಿ ಕಳೆದುಕೊಂಡಿದ್ದಾರೆ. ಕೆಲವು ನಕಲು ಮಾಡಿದ್ದಾರೆ. ಹಾಗಾಗಿ, ಡಿಜಿಟಲ್ ಸಾಗುವಳಿ ಚೀಟಿ ನೀಡಿದರೆ ಅದರಲ್ಲಿ ಭಾವಚಿತ್ರ, ಆಧಾರ್ ಸೇರಿದಂತೆ ಎಲ್ಲ ವಿವರಗಳು ಇರುತ್ತವೆ ಹೀಗಾಗಿ ಇಲ್ಲ ಕಡೆಯಿಂದಲೂ ಇದರಿಂದ ಸಾಕಷ್ಟು ಅನುಕೂಲ ಆಗಲಿದೆ ಅಂತ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಬದಲಾಗಲಿರುವ 6 ಹೊಸ ನಿಯಮಗಳು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram