ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಿದೆ ರಾಜ್ಯ ಸರ್ಕಾರ

State Govt Employees DA Hike

ಸರ್ಕಾರಿ ಉದ್ಯೋಗ ಒಂದು ಗೌರವಾನ್ವಿತ ಹುದ್ದೆ ಹಾಗೂ ಲಾಭದಾಯಕ ಉದ್ಯೋಗವಾಗಿದೆ. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಅವಕಾಶ ಸರ್ಕಾರಿ ಉದ್ಯೋಗಿಗಳಿಗೆ ಸಿಗುತ್ತದೆ. ಸರ್ಕಾರಿ ನೌಕರರು ಸಾಮಾನ್ಯವಾಗಿ ಉತ್ತಮ ಸಂಬಳ ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ, ಮತ್ತು ಅವರಿಗೆ ಉದ್ಯೋಗ ಭದ್ರತೆ ಇರುತ್ತದೆ. ಅದಕ್ಕೆ ಹೆಚ್ಚಿನ ಜನರು ಸರ್ಕಾರಿ ಉದ್ಯೋಗವನ್ನು ಇಷ್ಟ ಪಡುತ್ತಾರೆ. ಸ್ವಲ್ಪ ದಿನಗಳ ಹಿಂದೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚು ಮಾಡಿತ್ತು. ಈಗ ಆದರೆ ಬೆನ್ನಲ್ಲೇ ರಾಜ್ಯ ಸರ್ಕಾರವು ರಾಜ್ಯ ಸರ್ಕಾರದ ನೌಕರಿಗೆ ತುಟ್ಟಿಭತ್ಯೆ ಹೆಚ್ಚು ಮಾಡಿದೆ. ಇದು ನೌಕರಿಗೆ ಬಹಳ ಸಂತಸದ ವಿಷಯ ವಾಗಿದೆ. ತುಟ್ಟಿಭತ್ಯೆ ದರದ ವಿವರಗಳು ಇಲ್ಲಿವೆ.

WhatsApp Group Join Now
Telegram Group Join Now

ತುಟ್ಟಿಭತ್ಯೆ ವಿವರ :- 2018ರಲ್ಲಿ ಪರಿಷ್ಕರಿಸಲಾದ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2024 ಜನವರಿ 1 ರಿಂದ ಶೇಕಡ 38.75 ರಿಂದ ಶೇಕಡ 42.5ಕ್ಕೆ ತುಟ್ಟಿಭತ್ಯೆ ಹೆಚ್ಚಿಸುವಂತೆ ತುಟ್ಟಿಭತ್ಯೆಯ ದರಗಳನ್ನು ಹೆಚ್ಚಿಸಲಾಗಿದೆ. ಆದರೆ ಇದರ ಜೊತೆ ಜೊತೆಗೆ ರಾಜ್ಯ ಸರ್ಕಾರವು ಶೇ.3.75ರಷ್ಟು ಡಿಎ ಪ್ರಮಾಣ ಹೆಚ್ಚು ಮಾಡಿದೆ. DA ಪ್ರಮಾಣ ಹೆಚ್ಚಿಸುವಿದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1792.71 ಕೋಟಿ ರೂಪಾಯಿ ಲಾಭ ಆಗಲಿದೆ.

ಇದನ್ನೂ ಓದಿ: ಉಚಿತವಾಗಿ ಆಧಾರ್ ಅಪ್ಡೇಟ್ ಗೆ ನೀಡಿದ್ದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ 

ಸರ್ಕಾರದ ಆದೇಶದ ಯಾವ ಯಾವ ಕ್ಷೇತ್ರಗಳಿಗೆ ಅನ್ವಯ ಆಗಲಿದೆ.?

ರಾಜ್ಯ ಸರ್ಕಾರದ ತುಟ್ಟಿಭತ್ಯೆ ಹೆಚ್ಚಿಸ್ವ ಆದೇಶವು UGC ಹಾಗೂ AICTE ಹಾಗೂ ICAR ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೆ ಹಾಗೂ ಸರ್ಕಾರದಿಂದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿ ಕೆಲಸ ಮಾಡುವ ಪೂರ್ಣಾವಧಿ ನೌಕರರಿಗೆ UGC ಅಥವಾ AICTE ಅಥವಾ ICAR ವೇತನ ಶ್ರೇಣಿಗಳಲ್ಲಿ ಪ್ರಸ್ತುತ ವೇತನ ಪಡೆಯುತ್ತಿರುವ ನೌಕರ ವರ್ಗದವರಿಗೆ ಮತ್ತು ಎನ್ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಸರ್ಕಾರ ಆದೇಶ ಪ್ರತಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ತುಟ್ಟಿಭತ್ಯೆ ಹೆಚ್ಚಿಸುವುದರಿಂದ ಏನು ಲಾಭ?

  • ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಿಸುವುದರಿಂದ ಉದ್ಯೋಗಿಗಳಿಗೆ ತಮ್ಮ ಕೆಲಸದ ಮೌಲ್ಯವನ್ನು ಗುರುತಿಸಲಾಗಿದೆ ಮತ್ತು ಗೌರವಿಸಲಾಗಿದೆ ಎಂಬ ಭಾವನೆಯನ್ನು ಮೂಡುವುದು ಇದರಿಂದ ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಇನ್ನಷ್ಟು ಆಸಕ್ತಿಯಿಂದ ಮಾಡಬಹುದು.
  • ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಸ್ಪರ್ಧಾತ್ಮಕ ತುಟ್ಟಿಭತ್ಯೆಯನ್ನು ನೀಡಿದಾಗ, ಅವರು ತಮ್ಮ ಪ್ರಸ್ತುತ ಉದ್ಯೋಗದಲ್ಲಿ ಉಳಿಯಲು ಹೆಚ್ಚು ಒಲವು ತೋರುತ್ತಾರೆ. ಬೇರೆ ಉದ್ಯೋಗ ಅರಸಿ ಹೋಗುವ ಉದ್ಯೋಗಿಗಳು ಇರುವ ಹುದ್ದೆಗೆ ತೃಪ್ತಿ ಪಟ್ಟು ಉದ್ಯೋಗದಲ್ಲಿ ಇರುತ್ತಾರೆ.
  • ಸರ್ಕಾರದ ತುಟ್ಟಿಭತ್ಯೆ ಹೆಚ್ಚಿಸುವ ಕ್ರಮದಿಂದ ಉತ್ತಮ ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಇದರಿಂದ ಖಾಲಿ ಇರುವ ಹಲವು ಪೋಸ್ಟ್ ಗಳು ಭರ್ತಿ ಆಗುವ ನಿರೀಕ್ಷೆ ಇದೆ.
  • ಉದ್ಯೋಗಿಗಳಿಗೆ ತಮ್ಮ ವಯಕ್ತಿಕ ಆರ್ಥಿಕ ಬದುಕಿಗೆ ಇನ್ನಷ್ಟು ಸಹಾಯ ಆಗಲಿದೆ. ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ದೇಶದ ಬಡವರ ಸಂಖ್ಯೆ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.
  • ಉದ್ಯೋಗಿಗಳ ಸಂಬಳ ಅಥವಾ ತುಟ್ಟಿಭತ್ಯೆ ಹೆಚ್ಚಿಸುವ ಪರಿಣಾಮ ನಿರುದ್ಯೋಗಿಗಳಿಗೆ ಅಥವಾ ಉದ್ಯೋಗದಲ್ಲಿ ಆಸಕ್ತಿ ಇಲ್ಲದೆ ಇರುವ ವ್ಯಕ್ತಿಗಳನ್ನು ಸೆಳೆಯಲು ಇದು ಉತ್ತಮ ವಿಧಾನ ಆಗಿದೆ.

ಇದನ್ನೂ ಓದಿ: ಭಾರತೀಯ ರೈಲು ಇಲಾಖೆಯಿಂದ ವಂದೆ ಭಾರತ್ ಸ್ಲೀಪರ್ ಟ್ರೈನ್ ಬಿಡುಗಡೆ ಆಗಲಿದೆ