ಬಡವರ ಕಲ್ಯಾಣ ಆಗದೆ ಶ್ರೀರಾಮನ ಚರಿತ್ರೆ ಆಗಲೂ ಸಾಧ್ಯವಿಲ್ಲ. – ನರೇಂದ್ರ ಮೋದಿ

ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠೆ ನೆರವೇರಲಿದೆ. ಅದನ್ನು ನರೇಂದ್ರ ಮೋದಿ ನೆರವೇರಿಸುತ್ತಾರೆ. ಬಡವರ ಕಲ್ಯಾಣಕ್ಕೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಈಗ ಇನ್ನಷ್ಟು ಬಡವರ ಜೀವನವನ್ನು ಸಬಳಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈಗಾಗಲೇ 10 ಕೋಟಿ ನಿರಾಶ್ರಿತರಿಗೆ ಮನೆಯನ್ನು ಕಲ್ಪಿಸಲಾಗಿದೆ ಎಂದು ಸೋಮವಾರ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸೋಮವಾರ ನಡೆದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (PM-JANMAN) ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಯ ಒಂದು ಲಕ್ಷ ಫಲಾನುಭವಿಗಳಿಗೆ 540 ಕೋಟಿ ರೂಪಾಯಿಗಳ ಕಲ್ಯಾಣ ನಿಧಿಗಳ ಮೊದಲ ಹಂತದ ಹಣವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನೀಡಿರುವ ಮೋದಿ ನಮ್ಮ ಸರಕಾರ ಹತ್ತು ವರುಷಗಳಲ್ಲಿ ಬಡವರ ಕಲ್ಯಾಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಈ ಹಿಂದಿನ ಸರ್ಕಾರಗಳಿಗಿಂತ ಹೆಚ್ಚಿನ ಅನುದಾನವನ್ನು ಬಡವರ ಕಲ್ಯಾಣ ಮತ್ತು ರೈತರ ಕಲ್ಯಾಣಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಪಿಎಂ ಜನ್ ಮನ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ; 1 ಲಕ್ಷ ಫಲಾನುಭವಿಗಳಿಗೆ ಹಣ ಜಮಾ

ಮೋದಿ ಸರ್ಕಾರದ ಯೋಜನೆಗಳು:- 

  1. ಬುಡಕಟ್ಟು ಜನಾಂಗದ ಮಕ್ಕಳಿಗೆ ಏಕಲವ್ಯ ಮಾದರಿಯ ಶಾಲೆಗಳನ್ನು ತೆರೆಯಲಾಗಿದೆ.
  2. ಅರಣ್ಯವಾಸಿಗಳ ನೆರವಿಗೆ ಮೋದಿ ಸರ್ಕಾರ ಹೆಚ್ಚಿನ ಹಣವನ್ನು ಮೀಸಲು ಇಟ್ಟಿದ್ದಾರೆ.
  3. ಕುಡಿಯುವ ನೀರು , ಮನೆಗಳು , ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಿದ್ದಾರೆ.
  4. ರೈತರಿಗೆ ಪಿ.ಎಂ ಕಿಸಾನ್ ಯೋಜನೆಯ ಅಡಿಯಲ್ಲಿ ವರ್ಷಕ್ಕೆ 6000 ರೂಪಾಯಿ ಸಿಗುವಂತೆ ಮಾಡಿ ಅವರ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
  5. ಮಕ್ಕಳ ವಿದ್ಯಾಭ್ಯಾಸದಿಂದ ವಂಚಿತರಾಗದೆ ಅವರಿಗೆ ಸ್ಕಾಲರ್ಶಿಪ್ ರೂಪದಲ್ಲಿ ಹೆಚ್ಚಿನ ಹಣವನ್ನು ನೀಡುತ್ತಾ ಇದ್ದಾರೆ.
  6. ತಿಂಗಳ ಪಡಿತರ ಚೀಟಿಯಲ್ಲಿ ಆಹಾರವನ್ನು ಉಚಿತವಾಗಿ ನೀಡುತ್ತಾ ಇದ್ದಾರೆ.
  7. ಕೂಲಿ ಕಾರ್ಮಿಕರ ನಿಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
  8. 8. ರಸ್ತೆ ಸಂಪರ್ಕ ಇರದ ಹಳ್ಳಿಗಳಿಗೆ ಉತ್ತಮ ಮಟ್ಟದ ರಸ್ತೆ ನಿರ್ಮಾಣ ಮಾಡುವಲ್ಲಿ ಯಶಸ್ವಿ ಆಗಿದ್ದರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಹಾಗೂ ರಾಮ ಭಕ್ತರು ಮಾತ್ರವಲ್ಲ PM-JANMAN ಯೋಜನೆಯ ಫಲಾನುಭವಗಳು ಸಹ ದೀಪಾವಳಿಯನ್ನು ಆಚರಿಸಬೇಕು . ಅವರ ಮೊಗದಲ್ಲಿ ಸಂತಸ ಕಾಣದೆ ರಾಮ ಮಂದಿರ ಅಪೂರ್ಣ. ರಾಮನ ಕಥೆಯ ಸಾರವೇ ಬಡವರ ಕಲ್ಯಾಣ ಬಡವರ ಜೀವನವನ್ನು 10 ವರುಷಗಳ ಕಾಲ ಉನ್ನತ ಮಟ್ಟಕ್ಕೆ ತರುವಲ್ಲಿ ನಮ್ಮ ಸರ್ಕಾರ ಶ್ರಮಿಸಿದೆ. ಈ ಹಿಂದಿನ ಸರಕಾರಗಳು ನೀಡಿದ ಅನುದಾನದ ನಾಲ್ಕು ಪಟ್ಟು ಹಣವನ್ನು ಸರಕಾರ ನಿಮಗೆ ನೀಡಿದೆ. ಬಡವರ ಪರವಾಗಿ ನಮ್ಮ ಸರ್ಕಾರ . ಈಗಾಗಲೇ ನಿಮಗೆ ಕಿಸಾನ್ ಸಮ್ಮನ್, ಆಯುಷ್ ಮಾನ್ ಭಾರತ ಯೋಜನೆಯಡಿ 80,000 ಕೋಟಿಯನ್ನು ನೀಡಲಾಗಿದೆ. ಭಾರತ ಹಸಿವು ಮುಕ್ತ ಆಗಬೇಕು ಎಂದು ಭಾರತದಲ್ಲಿ ಪ್ರತಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿ ಸದಸ್ಯನಿಗೆ ಉಚಿತವಾಗಿ 5 ಕೆ. ಜಿ ಅಕ್ಕಿಯನ್ನು ನೀಡುತ್ತಾ ಬಂದಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾವ ಯಾವ ದೇಶದವರನ್ನು ಆಹ್ವಾನ ಮಾಡಲಾಗಿದೆ ? ಏಷ್ಟು ರಾಷ್ಟ್ರಗಳ ಜನರು ಬರುತ್ತಿದ್ದಾರೆ ಅಯೋಧ್ಯೆಗೆ ?

ಇದನ್ನೂ ಓದಿ: ರೂ. 2.14 ಲಕ್ಷಕ್ಕೆ ಬಿಡುಗಡೆಯಾದ Jawa 350, ನವೀಕರಿಸಿದ ಎಂಜಿನ್ ಮತ್ತು ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ