Story of Sowjanya: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿ ಆರೋಪಿಯನ್ನ ನೀರ್ದೋಶಿ ಅಂತ ಹೇಳಲಾಗಿತ್ತು. ಹೌದು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದ ಪಾಂಗಳ ನಿವಾಸಿ ಚಂದ್ರಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದ್ರೆ ಅಕ್ಟೋಬರ್ 9, 2012ರಂದು ಸಂಜೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಸೌಜನ್ಯ ನಾಪತ್ತೆಯಾಗಿ, ಮರು ದಿನ ರಾತ್ರಿ ಮಣ್ಣ ಸಂಕ ಬಳಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿತ್ತು. ಅನಂತರ ತನಿಖೆಯನ್ನ ಸಿಬಿಐಗೆ ವಹಿಸಲಾಯಿತು ಆದ್ರೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿ, ಆರೋಪಿ ಸಂತೋಷ್ ರಾವ್‌ನನ್ನು ದೋಷ ಮುಕ್ತಗೊಳಿಸಿತ್ತು.
ಸಿಬಿಐ ವಿಷೇಶ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಪಿಬಿ ತೀರ್ಪನ್ನು ಪ್ರಕಟಿಸಿತ್ತು. ಇನ್ನು ಶಂಕಿತ ಆರೋಪಿ ಸಂತೋಷ್ ರಾವ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿಯಾಗಿದ್ದು, ಆರೋಪಿಯನ್ನು ಬಾಹುಬಲಿ ಬೆಟ್ಟದ ಬಳಿಯಲ್ಲಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದ್ರೆ ಕೃತ್ಯ ನಡೆದು 11 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿತ್ತು. ಆರೋಪಿ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತ ಮಾಡಿರುವುದಾಗಿ ನ್ಯಾಯಮೂರ್ತಿ ಸಿಬಿ ಸಂತೋಷ್ ಹೇಳಿದ್ದರು. ಇದೀಗ ಸೌಜನ್ಯ ಕೊಲೆ ಕೇಸ್ ತೆರೆ ಮೇಲೆ ಬರಲು ಟೈಟಲ್ ರಿಜಿಸ್ಟರ್ ಮಾಡಲಾಗಿದ್ದು, ರಾಜ್ಯದಲ್ಲಿ ಇದೀಗ ಸಂಚಲನ ಸೃಷ್ಟಿಯಾಗಿದೆ.
ಇದನ್ನೂ ಓದಿ: ಇನ್ನು ಮುಂದೆ 5 ರೂಪಾಯಿಗೆ ಕುಡಿಯುವ ನೀರು ಸಿಗಲ್ಲ! ಏರಿಕೆ ಆಯ್ತು ಶುದ್ಧ ಕುಡಿಯುವ ನೀರಿನ ಬೆಲೆ
ಟೈಟಲ್ ರಿಜಿಸ್ಟರ್ ಮಾಡಿದ ಚಿತ್ರತಂಡ
ಹೌದು ಹನ್ನೊಂದು ವರ್ಷದ ಬಳಿಕ ಮತ್ತೆ ಸದ್ದು ಮಾಡುತ್ತಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯನ್ನ ನೀರ್ದೋಶಿ ಅಂತ ತೀರ್ಪು ಬಂದಮೇಲೆ ಇದೀಗ ಈ ಪ್ರಕರಣ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರದ ಟೈಟಲ್ ಬಗ್ಗೆ ರಿಜಿಸ್ಟರ್ ಮಾಡಲಾಗಿದೆ. ಸ್ಟೋರಿ ಆಫ್ ಸೌಜನ್ಯ(Story of Sowjanya) ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿದ್ದು, ವಿ.ಲವ ಅವರು ಈ ಚಿತ್ರದ ನಿರ್ದೇಶನ ಮಾಡಲಿದ್ದು, ಜಿ.ಕೆ ವೆಂಚರ್ಸ್ ನಡಿಯಲ್ಲಿ ಚಿತ್ರ ನಿರ್ಮಾಣ ಆಗಲಿದೆ.
ಸ್ಟೋರಿ ಆಫ್ ಸೌಜನ್ಯ ಹೆಸರಿನ ಟೈಟಲ್ ನಲ್ಲಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಚಿತ್ರ ಇದಾಗಲಿದ್ದು, ಸದ್ಯ ಕೇವಲ ಹೆಸರು ನೋಂದಣಿ ಮಾತ್ರ ಆಗಿದ್ದು, ಚಿತ್ರತಂಡದಲ್ಲಿ ಯಾರು ಇರಲಿದ್ದಾರೆ ಎಂಬುವುದು ಇನ್ನು ಕೂಡ ಬಹಿರಂಗವಾಗಿಲ್ಲ.ಸದ್ಯ ಟೈಟಲ್ ಫಿಕ್ಸ್ ಮಾಡಿರುವ ನಿರ್ದೇಶಕರು ಪಾತ್ರಕ್ಕೆ ಜೀವ ತುಂಬುವ ಕಲಾವಿದರನ್ನ ಈಗಾಗ್ಲೇ ಆಯ್ಕೆ ಮಾಡಿದ್ದಾರಾ ಇಲ್ವಾ ಅನ್ನೋದು ಇನ್ನು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದ್ದು, ಇದಕ್ಕೆ ಯಾವ ರೀತಿ ಪ್ರತಿಕ್ರಿಯೆಗಳು ಬರುತ್ತೆ ಮುಂದೇನಾಗುತ್ತೆ ಅನ್ನೋದು ನಂತರದಲ್ಲಿ ಗೊತ್ತಾಗಲಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಸಾಲು ಸಾಲು ಹೋರಾಟಗಳು ನಡೆದಿದ್ದವು. ಹೀಗಾಗಿ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಹಲವು ಹೋರಾಟದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಇದೀಗ ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಅಂತ ಆದೇಶ ಹೊರಡಿಸಿತ್ತು. ಹೌದು ಸೂಕ್ತ ಸಾಕ್ಷ್ಯ ಆಧಾರಗಳ ಕೊರತೆ ಹಿನ್ನೆಲೆ ಆರೋಪಿಯನ್ನ ನೀರ್ದೋಶಿ ಅಂತ ಹೇಳಿದ ಹಿನ್ನಲೆ ಇದೀಗ ಮತ್ತೆ ಸೌಜನ್ಯ ಕೊಲೆ ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು.. ಮತ್ತೆ ತನಿಖೆ ನಡೆಸಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಅಂತ ಜನರು ಆಕ್ರೋಶವನ್ನ ಹೊರ ಹಾಗ್ತಿದ್ದು, ಈ ಬೆನ್ನೆಲೆ ಇದೀಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಆಗ್ತಿದ್ದು, ಈ ಮಧ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನ ತೆರೆಮೇಲೆ ತರಲು ಇದೀಗ ನಮ್ಮ ಸ್ಯಾಂಡಲ್ವುಡ್ ನಿರ್ದೇಶಕರು ರೆಡಿ ಇದ್ದು ಸಿನಿಮಾದ ಟೈಟಲ್ ಕೂಡ ರಿಜಿಸ್ಟರ್ ಮಾಡಿಸಿದ್ದಾರೆ.
ಇದನ್ನೂ ಓದಿ: ಸತತ 3ದಿನಗಳಿಂದ ಏರಿಕೆಯಾಗಿದ ಚಿನ್ನದ ಬೆಲೆ ಇಂದು ದಿಢೀರ್ 3000 ಇಳಿಕೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram