ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್; ಶಾಲೆಯಲ್ಲೇ ಅಂಕಪಟ್ಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ

SSLC Board: ಇಷ್ಟು ದಿನಗಳ ಕಾಲ ಅಂಕಪಟ್ಟಿ ತಿದ್ದುಪಡಿಗೆ ಮುಖ್ಯ ಅಧ್ಯಾಪಕರ ಸಹಾಯದಿಂದ ಪ್ರಸ್ತಾಪವನ್ನು ನಿರ್ವಹಿಸಬೇಕಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ, ಅಂಕಪಟ್ಟಿ(marks card) ತಿದ್ದುಪಡಿಗೆ ಆನ್ಲೈನ್ ಸೇವೆ ಸೂಕ್ತವೆಂದು ಎಸ್ ಎಸ್ ಎಲ್ ಸಿ(SSLC) ಬೋರ್ಡ್ ನಿರ್ಧರಿಸಿದೆ. ಸೂಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಆನ್ಲೈನ್ ಮೂಲಕ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ತಿಳಿಯೋಣ. 

WhatsApp Group Join Now
Telegram Group Join Now

ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕ ಪಟ್ಟಿಯಲ್ಲಿ ತಂದೆ ತಾಯಿ ಹೆಸರು ಆಗಿರಬಹುದು ಅಥವಾ ಜನ್ಮ ದಿನಾಂಕ ಆಗಿರಬಹುದು ಇನ್ನಿತರ ತಿದ್ದುಪಡಿಗಾಗಿ ಇನ್ನು ಮುಂದೆ ಬೇರೆ ಕಡೆ ಹೋಗುವ ಅವಶ್ಯಕತೆ ಇಲ್ಲ, ಬದಲಾಗಿ ಆನ್ಲೈನ್ ನಲ್ಲಿ ಕೆಲಸವನ್ನ ಮಾಡಿಕೊಳ್ಳಬಹುದು.. ಇಷ್ಟು ದಿನಗಳ ಕಾಲ ಅಂಕ ಪಟ್ಟಿಯಲ್ಲಿ ಅಭ್ಯರ್ಥಿಯ ತಂದೆ ತಾಯಿ ಜನ್ಮ ದಿನಾಂಕ ಇತರೆ ಯಾವುದೇ ಮಾಹಿತಿಯ ತಿದ್ದುಪಡಿ ಇದ್ದಲ್ಲಿ ಮುಖ್ಯ ಶಿಕ್ಷಕರ ಮುಖಾಂತರವೇ ಕೆಲಸವನ್ನ ನಿರ್ವಹಿಸಬೇಕಾಗಿತ್ತು. ಆದರೆ ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ ಎಸ್ ಎಸ್ ಎಲ್ ಸಿ ಬೋರ್ಡ್ ವಿದ್ಯಾರ್ಥಿಗಳಿಗೆ ಈ ಸೂಪರ್ ಸೌಲಭ್ಯವನ್ನು ಒದಗಿಸಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ಬಗೆ ಹೇಗೆ?

ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ ತಿದ್ದುಪಡಿಗೆ, ತಂದೆ ತಾಯಿಯ ಹೆಸರು ಜನ್ಮ ದಿನಾಂಕ ಊರು ಇವೆಲ್ಲ ಮಾಹಿತಿಗಳನ್ನ ಶಾಲೆಯ ಮುಖ್ಯ ಅಧ್ಯಾಪಕರಿಗೆ ಸಲ್ಲಿಸಬೇಕು. ಮುಖ್ಯ ಅಧ್ಯಾಪಕರು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಗೆ ಆನ್ಲೈನ್ ಮೂಲಕ ಈ ಮಾಹಿತಿ ಎಲ್ಲವನ್ನು ರವಾನಿಸುತ್ತಾರೆ. ಬ್ಯಾಂಕಿನ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪರೀಕ್ಷಾ ಶುಲ್ಕವನ್ನು ಕೂಡ ಅವರು ಆನ್ಲೈನ್ ಮೂಲಕವೇ ಸಂದಾಯ ಮಾಡಬಹುದಾಗಿದೆ. ಇನ್ನು ಈ ಸೌಲಭ್ಯ ಇಲ್ಲದವರು ಅಥವಾ ಈ ಸೌಲಭ್ಯದ ಬಗ್ಗೆ ಗೊತ್ತಿಲ್ಲದವರು ಆಫ್ ಲೈನ್ ನಲ್ಲಿ ಕೂಡ ಪಾವತಿಸಬಹುದು. ಇದಕ್ಕೆ ಸಂಬಂಧಿಸಿದ ಚಲನನ್ನು ಡೌನ್ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದು. ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಸುಲಭವಾದ ಮಾರ್ಗವನ್ನು ಅನುದಾನ ಮಾಡಿದೆ.

ಇನ್ನು ಶಾಲಾ ಮುಖ್ಯೋಪಾಧ್ಯಾಯರು ಕಳುಹಿಸಿದ ದಾಖಲೆಗಳನ್ನು ಮಂಡಳಿ ಕಚೇರಿಗೆ ಪರಿಶೀಲನೆ ನಡೆಸಿ, ಮುಖ್ಯ ತಿದ್ದುಪಡಿಗಾಗಿ ವಿದ್ಯಾರ್ಥಿಯ ಮೂಲ ಅಂಕಪಟ್ಟಿಯನ್ನು ವಿಭಾಗಿಯ ಕಚೇರಿಗೆ ಕಳುಹಿಸುವಂತೆ ಎಸ್ಎಮ್ಎಸ್ ಮೂಲಕ ಮಾಹಿತಿಯನ್ನು ಕಳುಹಿಸಿಕೊಡಬಹುದು. ಇನ್ನು ಆನ್ಲೈನ್ (online) ಮೂಲಕ ಕಳುಹಿಸುವ ಸಂದರ್ಭದಲ್ಲಿ ಆ ಶಾಲೆಯ ಮುಖ್ಯ ಅಧ್ಯಾಪಕರು ಅಪ್ಲೋಡ್ ಮಾಡಿದ ದಾಖಲೆಗಳನ್ನು ನಕಲು ಮಾಡಿದಲ್ಲಿ ಆ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು. ಮೇಲ್ಕಂಡ ಶಾಲಾ ಹಂತದಲ್ಲಿ ಮತ್ತು ವಿಭಾಗೀಯ ಕಛೇರಿಯಲ್ಲಿ ಪ್ರಕ್ರಿಯೆಗಳ ಕ್ರಮವನ್ನು ಹೇಳುವ ಮಾಹಿತಿಯನ್ನು ಈ ಸುತ್ತೋಲೆಯೊಂದಿಗೆ ನೀಡಲಾಗಿದೆ. ಈ ಪ್ರಕಾರವಾಗಿ, ರಾಜ್ಯದ ಎಲ್ಲಾ ಪ್ರೌಢ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಮತ್ತು ವಿಭಾಗೀಯ ಕಛೇರಿ/ಮಂಡಲಿಯಲ್ಲಿ ಈ ವಿಧದಲ್ಲಿ ಕ್ರಮವಹಿಸಲು ಹೇಳಲಾಗಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಮೂಲ ಅಂಕಪಟ್ಟಿಯನ್ನು ಹಿಂದಿರುಗಿಸುವುದು ಕಡ್ಡಾಯ

ಮೂಲ ಅಂಕಪಟ್ಟಿಯನ್ನು ಹಿಂತಿರುಗಿಸಬೇಕು. ವಿದ್ಯಾರ್ಥಿಗಳು ಪರಿಷ್ಕೃತ ಅಂಕಪಟ್ಟಿ ಪಡೆಯುವ ಮೊದಲು, ಹಿಂದೆ ವಿತರಿಸಿದ್ದ ಮೂಲ ಅಂಕಪಟ್ಟಿಯನ್ನು ಓದಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು. ತರಿಸಿಕೊಂಡ ಅಂಕಪಟ್ಟಿಗಳನ್ನು ಪರೀಕ್ಷಾ ಮಂಡಳಿ ತರಿಸಿಕೊಂಡು ಅವುಗಳನ್ನು ನಾಶ ಮಾಡಲಾಗುತ್ತದೆ.

ಇದನ್ನೂ ಓದಿ: ಕಿಚ್ಚನ ಜೊತೆ ಮೊದಲ ವಾರದ ಪಂಚಾಯಿತಿ; ತುಕಾಲಿ ಸಂತುಗೆ ಬಿಸಿ ಮುಟ್ಟಿಸಿದ ಕಿಚ್ಚ

ಇದನ್ನೂ ಓದಿ: ಕೈಕೊಟ್ಟ ಮುಂಗಾರಿನಿಂದಾಗಿ ರೈತರು ಕಂಗಾಲಾಗಿದ್ದಾರೆ, ಹಾಗಾದ್ರೆ ಹಿಂಗಾರು ಮಳೆ ರೈತರ ಕೈ ಹಿಡಿಯುತ್ತಾ?