Students Mental Health :ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಒತ್ತಡ ಉಂಟಾಗುತ್ತಿದೆ. ಶಾಲೆ ಎನ್ನುವುದು ವಿದ್ಯೆಗಿಂತ ಹೆಚ್ಚಾಗಿ ಒತ್ತಡಕ್ಕೆ ಕಾರಣವಾಗಿದೆ ಅಂತಲೇ ಹೇಳಬಹುದು ಇದಕ್ಕೆಲ್ಲ ಪರಿಹಾರ ಎನ್ನುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನವರು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಿರ್ಧಾರ ಮಾಡಿದ್ದು, ಇದಕ್ಕನುಗುಣವಾಗಿ ಅನೇಕ ಪರಿಹಾರಗಳನ್ನ ಸೂಚಿಸಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ನಾವೆಲ್ಲಾ ಬಂದಿರುವುದು ಕೂಡ ಹೀಗೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಮುಂದೆ ಸ್ವಾರ್ಥ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇಂದಿನ ಶಾಲಾ ಪಠ್ಯಕ್ರಮದಲ್ಲಿಯೂ ಅಥವಾ ಸ್ಪರ್ಧಾತ್ಮಕತೆಯಿಂದಲೂ ಏನೋ ವಿದ್ಯಾರ್ಥಿಗಳು ಕಲಿಯುವುದಕ್ಕಿಂತ ಹೆಚ್ಚಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಒಬ್ಬರು ಇಬ್ಬರು ಅಂತಲ್ಲ ಎಲ್ಲ ವಿದ್ಯಾರ್ಥಿಗಳಿಗೂ ಕಾಡುವ ಒಂದು ದೊಡ್ಡ ಸಮಸ್ಯೆಯಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ನಮ್ಮ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನವರು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಕಡಿಮೆಯಾಗುವಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರಮುಖವಾಗಿ ಹೇಳಬೇಕೆಂದರೆ ಮಕ್ಕಳ ಒತ್ತಡಕ್ಕೆ ಪ್ರತ್ಯಕ್ಷವಾಗಿಯು ಪರೋಕ್ಷವಾಗಿಯು ಪಾಲಕರೆ ಕಾರಣರಾಗಿರುತ್ತಾರೆ. ಇದರಲ್ಲಿ ಪಾಲಕರ ಪಾತ್ರ ಪ್ರಮುಖವಾಗಿರುತ್ತದೆ. ಮೊದಲು ಪಾಲಕರು ಮಾಡಬೇಕಾದ ಕೆಲಸ ಎಂದರೆ ಮಕ್ಕಳಿಗೆ ಒತ್ತಡವನ್ನು ಹಾಕಬಾರದು. ಮಕ್ಕಳಲ್ಲಿ ಚುಚ್ಚು ಮಾತುಗಳನ್ನ ಆಡಬಾರದು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದೆ ಇರುವ ಕಾರಣ ಮಕ್ಕಳನ್ನು ದೂರಬಾರದು. ಮಕ್ಕಳಿಗೆ ಹೆಚ್ಚಿನ ಒತ್ತಾಸೆಯನ್ನು ನೀಡಬೇಕೆ ಹೊರತು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬ ಬೇಕೇ ಹೊರತು ಮಕ್ಕಳನ್ನ ಯಾವತ್ತೂ ಕೂಡ ದೂರಬಾರದು. ಪಾಲಕರು ಮಾಡುವ ಈ ತಪ್ಪನಿಂದ ಮಕ್ಕಳು ಇವತ್ತು ಅನುಭವಿಸುತ್ತಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮಾನಸಿಕ ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ. ಅದನ್ನು ನಾವು ತಪ್ಪಿಸಬೇಕಿದೆ. ಮತ್ತೆ ಇನ್ನೊಂದು ಪ್ರಮುಖ ಅಂಶ ಏನೆಂದರೆ ಮಕ್ಕಳು ಸಾಕಷ್ಟು ನಿದ್ರೆ ಮಾಡುವ ಹಾಗೆ ನೋಡಿಕೊಳ್ಳಬೇಕು ನಿದ್ರೆಯು ಸರಿಯಾದರೆ ಮಾನಸಿಕ ಆರೋಗ್ಯದಲ್ಲಿ ಸಮತೋಲನ ಇರುತ್ತದೆ.
ಮಕ್ಕಳಲ್ಲಿ ಯಾವುದು ಆಸಕ್ತಿ ಇದೆ ಮಕ್ಕಳು ಏನನ್ನು ಮಾಡ ಬಯಸುತ್ತಾರೆ ಎನ್ನುವುದನ್ನು ಪಾಲಕರು ಮೊದಲು ತಿಳಿದುಕೊಳ್ಳಬೇಕು
ಅದನ್ನೆಲ್ಲ ಪಾಲಕರು ಗಮನಿಸಿಯೆ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಬೇಕು. ಮಕ್ಕಳಿಗೆ ಪಾಲಕರ ಪ್ರೀತಿ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ ಅದನ್ನರಿತು ಪಾಲಕರು ನಡೆಯಬೇಕಿದೆ.
ಮಕ್ಕಳಲ್ಲಿ ಮಾನಸಿಕ ಒತ್ತಡವನ್ನು ತಪ್ಪಿಸುವುದು ಹೇಗೆ?
ಮೊದಲು ನೀವು ತೆಗೆದುಕೊಳ್ಳಬೇಕಾದ ಕ್ರಮ ಎಂದರೆ ನಿಮ್ಮ ಮಗುವಿಗೆ ಭಯವನ್ನು ಎದುರಿಸಲು ಪ್ರೋತ್ಸಾಹಿಸಬೇಕು ನೀವು. ಹೇಗೆಂದರೆ, ಮಕ್ಕಳ ಜೊತೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಮಕ್ಕಳಿಗೆ ಧೈರ್ಯ ತುಂಬಬೇಕು. ಪರೀಕ್ಷೆಯನ್ನ ಹೇಗೆ ಎದುರಿಸುವುದು, ಕಡಿಮೆ ಅಂಕಗಳು ಬಿದ್ದಾಗ ಹೇಗೆ ನಿಭಾಯಿಸುವುದು ಹಾಗೆ ಹೊರಗಿನ ಜಗತ್ತಿನಲ್ಲಿ ಹೇಗೆ ಬೆರೆಯಬೇಕು ಎನ್ನುವುದೆಲ್ಲವನ್ನು ಮಕ್ಕಳಿಗೆ ತಿಳಿಸಿ ಕೊಡುವುದು ಪಾಲಕರ ಕರ್ತವ್ಯವಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಪಾಲಕರಿಗೆ ಸಮಯವೇ ಇಲ್ಲದಂತಾಗಿದೆ ಮಕ್ಕಳ ಜೊತೆ ಒಂದು ಸ್ವಲ್ಪ ಹೊತ್ತು ಕೂಡ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳಿಗೆ ಒಂಟಿತನ ಕಾಡಲು ಪ್ರಾರಂಭವಾಗುತ್ತದೆ ಮಕ್ಕಳು ತಮ್ಮ ಆತ್ಮವಿಶ್ವಾಸನೆ ಕಳೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಮಕ್ಕಳಿಗೆ ಅವರ ಬೆಂಬಲವಾಗಿ ನಿಲ್ಲುವವರು ಬೇಕು ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವವರು ಬೇಕು. ಅದನ್ನೆಲ್ಲ ನಾವು ಅವರಿಗೆ ತಿಳಿ ಹೇಳಿದಾಗ ಮಾತ್ರ ಅವರಲ್ಲಿ ಭಯ ಎನ್ನುವುದು ಹೋಗಲಾಡಿಸಬಹುದು.
ವಿದ್ಯಾರ್ಥಿಗಳ ಈ ಒತ್ತಡ ದಿನಗಳಲ್ಲಿ ಮಕ್ಕಳಿಗೆ ವಿಶ್ರಾಂತಿಯು ಕೂಡ ಸ್ವಲ್ಪ ಅವಶ್ಯಕವಾಗಿದೆ. ಪಾಲಕರು ನಮ್ಮ ಆಕಾಂಕ್ಷೆಯನ್ನು ಅವರ ಮೇಲೆ ಹೇರುವ ಬದಲಾಗಿ ಸ್ವಲ್ಪ ಅವರು ವಿಶ್ರಾಂತಿಯಿಂದ ಇರುವ ಹಾಗೆ ನಾವು ನೋಡಿಕೊಳ್ಳಬೇಕು. ಸ್ವಲ್ಪ ವಿಶ್ರಾಂತಿದಾಯಕ ಆರಾಮದಾಯಕ ಆಟಗಳನ್ನು ಆಡಿಸಬೇಕು. ದಿನದಲ್ಲಿ ಒಂದು ಸ್ವಲ್ಪ ಹೊತ್ತು ಅವರಿಗೆ ಹೇಗೆ ಬೇಕೋ ಹಾಗೆ ಇರಲಿಕೆ ಅವಕಾಶ ಮಾಡಿಕೊಡಬೇಕು. ಈ ರೀತಿಯಲ್ಲ ಮಾಡುವುದರಿಂದ ನಾವು ಮಕ್ಕಳಲ್ಲಿನ ಮಾನಸಿಕ ಒತ್ತಡವನ್ನ ಸುಲಭವಾಗಿ ಹೋಗಲಾಡಿಸಬಹುದು. ಮುಂದಿನ ಸಮಾಜವನ್ನು ಸ್ವಾಸ್ತ್ಯವಾಗಿ ಇಡಲು ಪಾಲಕರ ಪಾತ್ರ ಪ್ರಮುಖವಾಗಿರುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬೇಕಾ ಹಾಗಾದರೆ ಈ ಕೃಷಿಯನ್ನು ಆರಂಭಿಸಿ
ಇದನ್ನೂ ಓದಿ: ಅಕ್ಕಿ ಹಣ ನಿಮಗೆ ಬಂದಿಲ್ಲ ಅಂತಂದ್ರೆ ಹೀಗೆ ಮಾಡಿ. ಖಂಡಿತವಾಗಲೂ ನಿಮಗೆ ಹಣವನ್ನ ಪಡೆಯಲು ಸಹಾಯವಾಗುತ್ತೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram