ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ದಂತಕತೆ ಅಂತ ಹೇಳುದ್ರೆ ತಪ್ಪಾಗೋದಿಲ್ಲ. ಕೇವಲ ನಟನ ಕ್ಷೇತ್ರ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮದೇ ಆದ ದಾನ ಧರ್ಮಗಳನ್ನ ಮಾಡಿ ಈಗಲೂ ಎಷ್ಟೋ ಜನರಿಗೆ ಸ್ಫೂರ್ತಿಯಾಗಿರೋ ಧೀಮಂತ ನಟ ಅಂದ್ರೆ ಅತಿಶಯೋಕ್ತಿ ಆಗದು. ಅಪ್ಪು ಇದ್ದಾಗ ಅವ್ರು ಮಾಡಿದ ಒಂದು ಸಹಾಯವು ಕೂಡ ಆಚೆ ಗೊತ್ತಾಗುತ್ತಿರಲಿಲ್ಲ, ಆದ್ರೆ ಅಪ್ಪು ಇನ್ನಿಲ್ಲವಾದ ದಿನದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ವಿಷಯಗಳು ಹೊರಬರುತ್ತಿದ್ದೂ, ನಿಜಕ್ಕೂ ಇದು ಮರೆಯಲಾಗದ ಮಾಣಿಕ್ಯ ಅಂತ ಜನ ಈಗಲೂ ಮಾತನಾಡಿಕೊಳ್ಳುತ್ತಾರೆ. ವೃತ್ತಿ, ಸಮಾಜಸೇವೆ, ಕುಟುಂಬ ಇದರ ಜೊತೆ ಜೊತೆಗೆ ಸ್ನೇಹದಲ್ಲೂ ಕೂಡ ಅಪ್ಪು ಒಂದು ಕೈ ಮುಂದೆಯೇ ಇದ್ರು. ಕಿಚ್ಚ ಸುದೀಪ್ ಹಾಗೂ ಅಪ್ಪು ನಡುವೆ ಬಹಳ ಚಿಕ್ಕ ವಯಸ್ಸಿನಿಂದಲೂ ಅದ್ಭುತವಾದ ಗೆಳತನ ಇತ್ತು, ಅದು ಎಷ್ಟು ಹೆಮ್ಮರವಾಗಿತ್ತು ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅಪ್ಪು ಅವ್ರನ್ನ ಕಳೆದುಕೊಂಡಾಗ ಅಕ್ಷರಸಹಾ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ರು.
ಇಬ್ಬರ ನಡುವಿನ ಗೆಳೆತನ ಬಹಳ ಗಟ್ಟಿಯಾಗಿತ್ತು, ಆಗಾಗ ಭೇಟಿಯಾಗೋದು ಒಬ್ಬರ ಮನೆಗೆ ಒಬ್ಬರು ಹೋಗೋದು, ಕೆಲವೊಂದಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋದು ಹೀಗೆ ಜೊತೆಯಾಗಿಯೇ ಬೆಳೆದಂತಹ ಬಾಲ್ಯದ ಸ್ನೇಹಿತರು ದೊಡ್ಡವರಾದ ಮೇಲೆ ಆ ನಂಟನ್ನ ಹಾಗಿಯೇ ಉಳಿಸಿಕೊಂಡು ಬಂದಿದ್ರು. ಇವರಿಬ್ಬರ ಸ್ನೇಹದಂತೆ ಇದೀಗ ಇವ್ರ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್ ಕ್ಲೋಸ್ ಪ್ರೆಂಡ್ಸ್ ಅಂತೇ. ಹೌದು ಕಿಚ್ಚ ಅವ್ರ ಮಗಳು ಸಾನ್ವಿ ಹಾಗೂ ಅಪ್ಪು ಅವ್ರ ಮಗಳು ಧೃತಿ ಇಬ್ಬರು ಕೂಡ ಬೆಸ್ಟ್ ಪ್ರೆಂಡ್ಸ್ ಅಂತೇ. ಇನ್ನು ಇವರಿಬ್ಬರ ಫೋಟೋಗಳು ಸದ್ಯ ವೈರಲ್ ಆಗ್ತಿದ್ದು ಇವ್ರನ್ನ ನೋಡಿದ ಅಭಿಮಾನಿಗಳು ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್ ಅಪ್ಪನಂತೆ ಮಕ್ಕಳು ಅಂತ ಹಾಡಿ ಹೊಗಳುತ್ತಿದ್ದಾರೆ.
ಇದನ್ನೂ ಓದಿ: ಕೋಟಿ ಕೊಡೋಕೆ ರೆಡಿ! ಸ್ಟಾರ್ ನಟನ ಮಗನಿಂದ ಶುರುವಾಯ್ತು ಟಾರ್ಚರ್!? ಕರವಾಳಿ ಬೆಡಗಿ ಕೃತಿ ಶೆಟ್ಟಿಗೆ ಶುರುವಾಗಿದೆ ಚಿತ್ರಹಿಂಸೆ?!
ವೈರಲ್ ಆಗ್ತಿವೇ ಸಾನ್ವಿ- ಧೃತಿ ಬೆಸ್ಟ್ ಫೋಟೋಸ್..
ನಿಮ್ಮೆಲ್ಲರಿಗೂ ಗೊತ್ತಿರುವಂತೆ ಪುನೀತ್ ರಾಜ್ ಕುಮಾರ್ ಮಗಳು ಧೃತಿ ಹೆಚ್ಚಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಅಪ್ಪು ಅವ್ರು ತಿರಿ ಹೋದಾಗ, ಅವ್ರ ಕಾರ್ಯದಲ್ಲಿ ಬಿಟ್ರೆ ಅಪ್ಪು ಸಾವಿಗೂ ಮೊದಲು ಎಲ್ಲೋ ಒಮ್ಮೊಮ್ಮೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ರು ಅಷ್ಟೆ. ಇನ್ನು ಅಪ್ಪು ಮಗಳು ಧೃತಿ ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದಾರೆ. ಆದ್ರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಧೃತಿ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ. ಅದ್ರಿಗ ವೈರಲ್ ಆಗಿರೋ ಫೋಟೋ ಬಹಳ ಕ್ಯೂಟ್ ಆಗಿದ್ದು ಕಿಚ್ಚನ ಮಗಳು ಸಾನ್ವಿ ಹಾಗೂ ಧೃತಿ ಇಬ್ಬರು ಒಟ್ಟಿಗೆ ಇರುವ ಫೋಟೋ ಇದಾಗಿದೆ. ಇನ್ನು ಸುದೀಪ್ ಮಗಳು ಸಾನ್ವಿ ಗಾಯಕಿಯಾಗಿ ಇದೀಗ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಟ್ಟ ಸಾನ್ವಿ ಹೆಚ್ಚಾಗಿ ಪೋಷಕರ ಜೊತೆಗೆ ಕ್ಯಾಮೆರಾ ಕಣ್ಣಿಗೆ ಬೀಳುತಿರ್ತಾರೆ ಜೊತೆಗೆ ಇವ್ರು ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್. ಆಗಾಗ ಕೆಲವು ಫೋಟೋಸ್ ವಿಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಕಿಚ್ಚ ಸುದೀಪ್ ಮಗಳು ಸಾನ್ವಿ ಹಾಗೂ ಅಪ್ಪು ಮಗಳು ಧೃತಿ ಇಬ್ಬರು ಒಟ್ಟಿಗೆ ಇರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯಾಗಿದೆ. ಅಲ್ಲದೇ ಅಪ್ಪಂದಿರಂತೆ ಮಕ್ಕಳು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಹೌದು ಕಿಚ್ಚ ಸುದೀಪ್ ಹಾಗೂ ಅಪ್ಪು ಸ್ನೇಹದಂತೆ ಅವರ ಮಕ್ಕಳೂ ಆತ್ಮೀಯ ಸ್ನೇಹಿತರಂತೆ. ಸ್ಟಾರ್ ಕಿಡ್ಸ್ಗಳಾದ ಸಾನ್ವಿ ಹಾಗೂ ಧ್ರುತಿ ಕೂಡ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಇನ್ನು ಪುನೀತ್ ಬಗ್ಗೆ ಅನೇಕ ಬಾರಿ ಮಾತಾಡಿರುವ ಸುದೀಪ್, ಅಪ್ಪುವನ್ನು ಅನೇಕ ರೀತಿಯಲ್ಲಿ ಸ್ಮರಿಸುತ್ತಲೇ ಇದ್ದಾರೆ. ಜೊತೆಗೆ ಅಪ್ಪು ಅವ್ರನ್ನ ಅವ್ರು ಮಾತ್ರ ಅಲ್ಲ ಎಲ್ಲರು ಮಿಸ್ ಮಾಡಿಕೊಳ್ಳುತ್ತಿರ್ತಾರೆ. ಇದೀಗ ಇಬ್ಬರೂ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದ್ದು, ಆ ಫೋಟೋ ನೋಡಿದ ಅಪ್ಪು ಹಾಗೂ ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಯಾಕಂದ್ರೆ ಪುನೀತ್ ಮಕ್ಕಳು ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಸಾನ್ವಿ ಹಾಗೂ ಧೃತಿ ಫೋಟೋಗಳು ವೈರಲ್ ಆಗಿದ್ದು, ಇಬ್ಬರ ಒಳ್ಳೆಯ ಸ್ನೇಹವನ್ನು ಅಪ್ಪು ಹಾಗೂ ಕಿಚ್ಚನ ಫ್ಯಾನ್ಸ್ ಮೆಚ್ಚಿಕೊಂಡಿದ್ದು ಮೆಚ್ಚುಗೆ ಸೂಚಿಸಿ ಥರೆವಾರಿ ಕಮೆಂಟ್ಸ್ ಮಾಡಿ ಶುಭಾ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ತಮ್ಮ ಕಾಲು ಕತ್ತರಿಸಿದ ವಿಚಾರ ಗೊತ್ತಾಗಿದ್ದೇ ನಾಲ್ಕನೇ ದಿನಕ್ಕೆ, ಸೂರಜ್ ಸ್ಥಿತಿ ಈಗ ಹೇಗಿದೆ? ವೈದ್ಯರು ಹೇಳಿದ್ದೇನು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram