Sudeep daughter: ಮಗಳ ಹುಟ್ಟುಹಬ್ಬ ಕುಟುಂಬದ ಜೊತೆ ಕಾಲ ಕಳೆದ ಸುದೀಪ್, ಸುದೀಪ್ ಮಗಳಿಗೆ ಈಗ ಎಷ್ಟು ವರ್ಷ? ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು?

Sudeep daughter: ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಅಂತಲೇ ಫೇಮಸ್ ಆಗುರುವ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಂದವನದಲ್ಲಿ ಮರೆಯದ ಹೆಗ್ಗುರುತು ಅಂತಲೇ ಹೇಳಬಹುದು. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಪಡಬೇಕಾಗುತ್ತೆ ಅದು ಕಿಚ್ಚ ಸುದೀಪ್ ಅವ್ರ ಪಾಲಿಗೆ ನಿಜವಾಗಿದೆ. ಅಭಿಮಾನಿಗಳ ಪಾಲಿನ ನೆಚ್ಚಿನ ನಾಯಕನಾಗಿ ಇಂದಿಗೂ ಸಹ ಬಹಳ ಕ್ರೇಜ್ ಹುಟ್ಟಿಸಿರುವಂತಹ ನಟ ಅಂದ್ರೆ ಅದು ಕಿಚ್ಚ ಮಾತ್ರ. ಆಗಾಗ ಕೆಲ ಸುದ್ದಿಗಳಿಂದ ನಟ ಕಿಚ್ಚ ಸುದೀಪ್ ಸೌಂಡ್ ಮಾಡ್ತಿರುತ್ತಾರೆ. ಹೌದು ಕಿಚ್ಚ ಸುದೀಪ್ ಅವ್ರ ಕಡೆಯಿಂದ ಬರುವ ಚಿಕ್ಕ ವಿಷಯಗಳಿಗೂ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇಂದಿಗೂ ಸಹ ಕಿಚ್ಚ ಅಂದ್ರೆ ಅಭಿಮಾನಿಗಳಿಗೆ ಅಷ್ಟೆ ಅಚ್ಚು ಮೆಚ್ಚು. ಸುದೀಪ್ ಅವ್ರು ಕೇವಲ ಸಿನಿಮಾ ಕ್ರಿಕೆಟ್ ಮಾತ್ರವಲ್ಲ ಫ್ಯಾಮಿಲಿಗು ಅಷ್ಟೆ ಪ್ರಾಮುಖ್ಯತೆಯನ್ನ ಕೊಡುತ್ತಾರೆ. ಪತ್ನಿ ಹಾಗೂ ಮಗಳ ಜೊತೆಗೆ ಕಾಲ ಕಳೆಯುತ್ತಾರೆ. ಸಿನಿಮಾ ಶೂಟಿಂಗ್ ಇಲ್ಲದಾಗ ಬಿಡುವಿನ ಸಂದರ್ಭ ಸಿಕ್ಕಾಗೆಲ್ಲ ಕುಟುಂಬದ ಜೊತೆಯಿರಲು ಕಿಚ್ಚ ಇಷ್ಟ ಪಡುತ್ತಾರೆ. ಇದೀಗ ಕಿಚ್ಚ ಸುದೀಪ್ ಅವ್ರು ಮಗಳ ಬರ್ತ್ ಡೇ ಮಾಡಿದ್ದು ಅದರ ಕೆಲವೊಂದಷ್ಟು ಫೋಟೋ ಹಾಗೂ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾ ದಲ್ಲಿ ಸಾಕಷ್ಟು ವೈರಲ್ ಆಗ್ತಿವೆ. ಹಾಗಾದ್ರೆ ಕಿಚ್ಚ ಸುದೀಪ ಅವ್ರ ಮಗಳು ಸಾನ್ವಿ ಅವ್ರ ಹುಟ್ಟುಹಬ್ಬ ಹೇಗಿತ್ತು? ಈಗ ಸಾನ್ವಿ ಅವ್ರಿಗೆ ಎಷ್ಟು ವರ್ಷ? ಬರ್ತ್ ಡೇ ಸೆಲೆಬ್ರೇಶನ್ ಹೇಗಿತ್ತು ನೋಡೋಣ ಬನ್ನಿ.

WhatsApp Group Join Now
Telegram Group Join Now

ಇದನ್ನೂ ಓದಿ: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು?

ಮಗಳ ಬಗ್ಗೆ ಕಿಚ್ಚ ಸುದೀಪ್ ಹೇಳಿಕೊಂಡಿರೋದೇನು?

ಹೌದು ಕಿಚ್ಚ ಸುದೀಪ್ ಅವ್ರ ಮುದ್ದಿನ ಮಗಳು ಸಾನ್ವಿ ಹುಟ್ಟುಹಬ್ಬ ವನ್ನ ಪ್ರತಿವರ್ಷ ತುಂಬಾ ವಿಭಿನ್ನವಾಗಿ ಕಿಚ್ಚ ಸುದೀಪ್ ಆಚರಣೆ ಮಾಡ್ತಾರೆ. ಮಗಳಿಗೆ ಸರ್ಪ್ರೈಸ್ ನೀಡೋದ್ರ ಜೊತೆಗೆ ಮಗಳ ಬರ್ತ್ಡೇ ಯನ್ನ ಸುದೀಪ್ ಸೇಲಾಬ್ರೇಟ್ ಮಾಡ್ತಾರೆ. ಈ ಹಿಂದೆ ಮಗಳಿಗಾಗಿ ಒಂದು ಹಾಡನ್ನ ಕಂಪೋಸ್ ಮಾಡಿಸಿದ್ದ ಕಿಚ್ಚ ಸುದೀಪ್ ಬಿಗ್ ಬಾಸ್ ಸ್ಪರ್ಧಿ ಹಾಗೂ ಗಾಯಕ ವಾಸುಕಿ ವೈಭವ್ ಅವರಿಂದ ಹಾಡಿಸಿ ಮಗಳಿಗೆ ಹುಟ್ಟುಹಬ್ಬದ ಹುಡುಗೊರೆಯಾಗಿ ನೀಡಿದ್ರು. ಇದೀಗ ಮಗಳಿಗೆ ಈ ವರ್ಷ ಮನೆಯಲ್ಲಿಯೇ ಕಾಲ ಕಳೆಯುವುದರ ಜೊತೆಗೆ ಮಗಳ ಬರ್ತ್ಡೇ ಸೇಲಾಬ್ರೇಟ್ ಮಾಡಿದ್ದಾರೆ ಕಿಚ್ಚ. ಹೌದು ಕಿಚ್ಚ ಸುದೀಪ್ ಅವ್ರ ಮಗಳು ಸಾನ್ವಿಗೆ ಈಗ 19 ವರ್ಷ. ಇಷ್ಟು ಬೇಗ ಸುದೀಪ್ ಅವ್ರ ಮಗಳಿಗೆ ಎಷ್ಟು ವರ್ಷವಾಯ್ತಾ ಅನ್ನುವಷ್ಟು ದೊಡ್ಡವಳಾಗಿ ಸಾನ್ವಿ ಬೆಳೆದಿದ್ದಾರೆ.

 

View this post on Instagram

 

A post shared by KicchaSudeepa (@kichchasudeepa)

ಹೌದು ಕಿಚ್ಚ ಸುದೀಪ್ ಮಗಳ ಜೊತೆಗೆ ಫೋಟೋವನ್ನ ಹಂಚಿಕೊಂಡು ಮಗಳಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಎಲ್ಲದರಲ್ಲೂ ನಿನಗೆ ಒಳ್ಳೆಯದಾಗಲಿ, ನಿನ್ನ ಜೀವನ ಖುಷಿಯಿಂದ ತುಂಬಿರಲಿ 19ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು ಅಂತ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ. ಮಗಳ ಪ್ರತಿಯೊಂದು ಖುಷಿಯಲ್ಲೂ ಜೊತೆ ನಿಲ್ಲುವ ಕಿಚ್ಚ ಸುದೀಪ್ ಮಗಳಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಅಂತ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ ಹೀಗಾಗಿ ಮಗಳಿಗೋಸ್ಕರ ಮಗಳ ಹುಟ್ಟುಹಬ್ಬದ ದಿನ ಮನೆಯಲ್ಲಿಯೇ ಇದ್ದು ಮಡದಿ, ಮಗಳು ಹಾಗೂ ಕುಟುಂಬದ ಆಪ್ತರ ಜೊತೆ ಸಮಯ ಕಳೆದಿದ್ದಾರೆ. ಈ ಸಮಯದಲ್ಲಿ ತೆಗೆದ ಕೆಲ ಅಪರೂಪದ ಫೋಟೋಗಳನ್ನ ಕಿಚ್ಚನ ಅಭಿಮಾನಿಗಳು ಇದೀಗ ವೈರಲ್ ಮಾಡ್ತಿದ್ದು ಫೋಟೋಗಳು ಸಾಕಷ್ಟು ಸದ್ದು ಮಾಡ್ತಿವೆ. ಇನ್ನು ಮಗಳಿಗೆ ಈ ವರ್ಷ ಏನ್ ಉಡುಗೊರೆ ಕೊಟ್ಟಿದ್ದಾರೆ ಅನ್ನೋದು ಇನ್ನು ಕೂಡ ರಿವಿಲ್ ಆಗಿಲ್ಲ ಆದ್ರೆ ಕುಟುಂಬದವರ ಜೊತೆ ಮಗಳ ಹುಟ್ಟುಹಬ್ಬ ಆಚರಣೆ ಮಾಡಿರೋದು ಫೋಟೋಗಳನ್ನ ನೋಡಿದ್ರೆ ಗೊತ್ತಾಗ್ತಿದೆ.

ಇದನ್ನೂ ಓದಿ: ಸತತ ಮೂರು ದಿನಗಳಿಂದ ಇಳಿದಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಎಷ್ಟಿದೆ ಇಂದಿನ ಚಿನ್ನದ ಬೆಲೆ ?

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್! 2ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು?

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿ ಗಿಲಿ ಚಂದ್ರಪ್ರಭಾ.. ಮದುವೆ ವಿಚಾರವನ್ನ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆಯಾಗಿದ್ದೇಕೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram