ಸುಕನ್ಯಾ ಸಮೃದ್ಧಿ ಯೋಜನೆ 2023 ಯೋಜನೆಯ ಸಂಪೂರ್ಣ ವಿವರಗಳು ಮತ್ತು ಪ್ರಯೋಜನಗಳ ಬಗ್ಗೆ..

Sukanya Samriddhi Yojana 2023: ಮೊದಲೆಲ್ಲಾ ಹೆಣ್ಣು ಮಗುವನ್ನ ಹೊರೆ, ಯಾಕಾದ್ರೂ ಹುಟ್ಟಿದಳೊ ಅಂತ ಮೂಗು ಮುರುತ್ತಿದ್ದ ಜನರೇ ಹೆಚ್ಚು ಆದ್ರೆ ಕಾಲ ಬದಲಾದಂತೆ ಇದರಲ್ಲಿ ಸ್ವಲ್ಪ ಬದಲಾವಣೆ ಆಗಿರ ಬಹುದೇ ಹೊರತು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಅನ್ನೋದು ಮರೀಚಿಕೆ ಆಗ್ಬಿಟ್ಟಿದೆ.. ಹೀಗಾಗಿ ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ.

WhatsApp Group Join Now
Telegram Group Join Now

ಕಾಲ ಹೇಗಿತ್ತು ಅಂದ್ರೆ ಹೆಣ್ಣು ಮಗು ಹುಟ್ಟಿದ ಕೂಡಲೇ ಅಯ್ಯೋ ಹೆಣ್ ಮಗುನ ಶುರುವಾಯ್ತು ಖರ್ಚು, ಗಂಡು ಮಗು ಹುಟ್ಟುದ್ರೆ ಚೆನ್ನಾಗಿರೋದು ಅಂತ ತುಂಬಾ ಖಾರವಾಗಿ ಕುಟುಂಬದವರೇ ಮಾತಾನಾಡಿರೋ ಉದಾಹರಣೆಗಳು ಸಾಕಷ್ಟಿವೆ. ಇನ್ನು ಕೆಲವರು ಗರ್ಭದಲ್ಲೇ ಮಗುವಿನ ಲಿಂಗ ಪತ್ತೆ ಮಾಡಿ ಬ್ರೂಣ ದಲ್ಲೇ ಹೆಣ್ಣು ಮಗು ವನ್ನ ಹತ್ಯೆ ಮಾಡಿರೋ ಎಷ್ಟೋ ಉದಾಹರಣೆಗಳು ಕಣ್ಣ ಮುಂದೆಯೇ ಇವೆ.. ಇನ್ನು ಕೆಲವರಂತು ಅಯ್ಯೋ ನೀನು ಹೆಣ್ಣು ಓದಿ ಏನ್ ಮಾಡ್ಬೇಕು ಮನೇಲೆ ಇರು ಅದುಕ್ಕೆ ಬೇರೆ ದುಡ್ಡು ದಂಡ ಅಂತ ಓದೋ ಆಸೆನಾ ಚಿವುಟ್ಟಿದ್ದು ಇದೆ. ಇನ್ನು ಕೆಲವರಂತು ಬಹಳ ಚಿಕ್ಕ ವಯಸ್ಸಿಗೆ ಹಿಂದೂ ಮುಂದು ಯೋಚಿಸದೆ ಆಡೋ ವಯಸ್ಸಲ್ಲಿ ಹೆಣ್ಣು ಮಗುವಿಗೆ ಸಂಸಾರದ ಹೊರೆ ಹೋರಿಸಿದ್ದು ಇದೆ.. ನಮ್ಮವರೇ ಅಂದುಕೊಂಡವ್ರೆ ಹೇಳಿಕೊಳ್ಳೋಕಾಗದ ನೋವು ಕೊಟ್ಟು ನಾಲ್ಕು ಗೋಡೆ ಮಧ್ಯೆ ಹೆಣ್ಣನ್ನ ಕಟ್ಟಿ ಹಾಕಿದ್ದು ಇದೆ.

ಆದರೆ ಈಗ ಇದೆಲ್ಲವೂ ಬದಲಾಗಬೇಕು ಹೆಣ್ಣು ಬೆಳೀಬೇಕು ಬದುಕ ಬೇಕು ಸಮಾಜ ದಲ್ಲಿ ಗುರುತಿಸಿಕೊಳ್ಳಬೇಕು ಅಂತ ಸಾಕಷ್ಟು ಕಷ್ಟಗಳನ್ನ ಎದುರಿಸಿ ನಿಲ್ಲಬೇಕು ಗುರಿ ತಲುಪಬೇಕು ಅನ್ನೋರಿಗೆ ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ನಿಜಕ್ಕೂ ಬಹಳ ಪ್ರಯೋಜನಕಾರಿ.ಬಹಳ ಮುಖ್ಯವಾಗಿ ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನ ಜಾರಿಗೆ ತರಲಾಗಿದೆ. ಇದು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿ ಯಿಂದ ಉತ್ತಮ ಉಳಿತಾಯ ಯೋಜನೆ ಅಂತಲೂ ಹೇಳಬಹುದು. ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಇದು ಅತ್ಯುತ್ತಮ ಹಣ ಉಳಿತಾಯದ ಮಾರ್ಗವಾಗಿದೆ. ಚಿಕ್ಕ ಪುಟ್ಟ ಹೂಡಿಕೆಯ ಹಣ ದೊಡ್ಡದಾಗಿ ನಮ್ಮ ಕೈ ಸೇರಿ ಭವಿಷ್ಯದ ಕನಸಿಗೆ ದಾರಿಯಾಗಲಿದೆ.

ಹಾಗಾದ್ರೆ ಸುಕನ್ಯಾ ಸಮೃದ್ಧಿ ಯೋಜನೆಗೆ ಖಾತೆ ತೆರೆಯುವುದು ಹೇಗೆ? ಪೋಷಕರು ಮಾಡಬೇಕಿರುವುದು ಏನು? ಅದಕ್ಕೆ ನೀಡಬೇಕಿರುವ ಕಡ್ಡಾಯ ದಾಖಲೆಗಳು ಏನು? ಪುರಾವೆಗಳನ್ನು ಸಲ್ಲಿಸುವುದು ಹೇಗೆ? ಯಾವ ವಯೋಮಾನದ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಲಾಭ ಸಿಗಲಿದೆ? ಮೆಚ್ಯುರಿಟಿ ಅವಧಿ? ಹಣ ಕಟ್ಟುವ ಪರಿ? ಬಡ್ಡಿ ಎಷ್ಟು ಸಿಗುತ್ತೆ? ಎಷ್ಟು ಹಣ ಕಟ್ಟಬೇಕು? ಖಾತೆಯನ್ನ ಎಲ್ಲಿ ತೆರೆಯಬೇಕು ಹೀಗೆ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಇವತ್ತು ತಿಳಿಸಿಕೊಡ್ತೇನೆ ಬನ್ನಿ..

ಮೊದಲಿಗೆ ಕೇಂದ್ರ ಸರಕಾರ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಅತಿ ಹೆಚ್ಚು ಬಡ್ಡಿ ನೀಡುತ್ತಿದೆ. ಪ್ರಸ್ತುತ ವಾರ್ಷಿಕವಾಗಿ ನೀವು ಕಟ್ಟುವ ಹಣಕ್ಕೆ ಶೇ.7.6 ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು ಕೇಂದ್ರ ಸರಕಾರದ ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಲಾಗಿದ್ದು, ಇದು ಹೆಣ್ಣು ಮಗುವಿಗಾಗಿ ಇರುವ ಸಣ್ಣ ಉಳಿತಾಯ ಠೇವಣಿ ಯೋಜನೆಯಾಗಿದೆ. ಇದನ್ನು 2015ರ ಜನವರಿ 22 ರಂದು ಆರಂಭಿಸಲಾಯಿತು. ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಇರುವ ಕಾರಣ ದಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಗರಿಷ್ಠ1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದು ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರ ಜಾರಿಗೆ ತಂದಿರುವ ಯೋಜನೆಯಗಿದ್ದು 10 ವರ್ಷದೊಳಗಿನ ಎಲ್ಲ ಹೆಣ್ಣು ಮಕ್ಕಳ ಹೆಸರಿ ನಲ್ಲಿ ಈ ಯೋಜನೆಯ ಸಲುವಾಗಿ ಖಾತೆ ತೆರೆಯಬಹುದು 250 ರೂಪಾಯಿ ಯಿಂದ ಹಿಡಿದು 1ವರೆ ಲಕ್ಷ ರೂಪಾಯಿವರೆಗೂ ಹಣ ವನ್ನ ಠೇವಣಿ ಮಾಡ ಬಹುದು.

ಇದನ್ನು ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

ಹಾಗಾದ್ರೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳೇನು ನೋಡೋಣ ಬನ್ನಿ

ಮೊದಲಿಗೆ ಹೆಣ್ಣು ಮಕ್ಕಳಿಗೆ ಮಾತ್ರವೇ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅವಕಾಶವಿದೆ.
ಎರಡನೆಯದಾಗಿ ಖಾತೆ ತೆರೆಯುವ ಸಮಯ ದಲ್ಲಿ, ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವರ್ಷವಾಗಿರಬೇಕು.
ಕೊನೆಯದಾಗಿ ಎಸ್‌ಎಸ್‌ವೈ ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ ಅಂದ್ರೆ ಜನನ ಪ್ರಮಾಣ ಪತ್ರವನ್ನ ಕಡ್ಡಾಯ ವಾಗಿ ತರಬೇಕು.

ಇನ್ನು ಅಗತ್ಯ ದಾಖಲೆಗಳು ಏನೇನ್ ಬೇಕಾಗುತ್ತೆ ಅಂದ್ರೆ

ಮೊದಲಿಗೆ ಆಯಾ ಸರ್ಕಾರಿ ಪೋರ್ಟಲ್‍ನಿಂದ ಫಾರ್ಮ್ ಅನ್ನು ಡೌನ್‍ಲೋಡ್ ಮಾಡಿ ಕೊಳ್ಳಬೇಕು.
ಫಾರ್ಮ್‍ನಲ್ಲಿ ಅಗತ್ಯ ವಿವರ ಗಳನ್ನು ಭರ್ತಿ ಮಾಡಿ
ಹೆಣ್ಣು ಮಗು ಮತ್ತು ಪೋಷಕರು ಒಟ್ಟಿಗೆ ಇರುವ ಛಾಯಾಚಿತ್ರಗಳು,
ಗುರುತಿನ ಚೀಟಿ,
ವಿಳಾಸ ಪುರಾವೆ,
ಆಧಾರ್ ಕಾರ್ಡ್ ಮತ್ತು
ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಇದೆಲ್ಲವನ್ನ ಸಲ್ಲಿಸಬೇಕಾಗುತ್ತದೆ.

ಇಷ್ಟೆಲ್ಲ ದಾಖಲೆಗಳನ್ನ ತೆಗೆದು ಕೊಂಡು ಹೋದ ನಂತರ ಖಾತೆ ತೆರೆಯುವುದು ಹೇಗೆ? ಅಂತ ನೋಡೋದಾದ್ರೆ,

ಅಂಚೆ ಕಛೇರಿ ಅಥವಾ ವಾಣಿಜ್ಯ ಬ್ಯಾಂಕು ಗಳ ಯಾವುದೇ ಅಧಿಕೃತ ಶಾಖೆ ಯಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆ’ ಯಡಿ ಖಾತೆ ತೆರೆಯಬಹುದು. ಹೆಣ್ಣು ಮಗು ಜನಿಸಿದ 10 ವರ್ಷದೊಳಗೆ ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ ಖಾತೆ ತೆರೆಯಬಹುದು. ಗರಿಷ್ಠ 1.5 ಲಕ್ಷ ರೂ. ವರಗೆ ಠೇವಣಿ ಮಾಡಲು ನಿಮಗೆ ಅವಕಾಶವಿದೆ. ಇನ್ನು ಹಿಂಪಡೆಯುವ ಸಮಯದಲ್ಲಿ ಈ ಖಾತೆಯಲ್ಲಿ ಠೇವಣಿ ಮಾಡಿದ ಹಣಕ್ಕೆ ಶೇ.7.6 ರಷ್ಟು ಬಡ್ಡಿ ಸಿಗಲಿದೆ. ಜೊತೆಗೆ ಹುಡುಗಿಗೆ 18 ವರ್ಷ ತುಂಬಿದಾಗ ಭಾಗಶಃ ಅಂದ್ರೆ ನೀವು ಕಟ್ಟಿರುವ ಹಣದಲ್ಲಿ ಸ್ವಲ್ಪ ಹಣವನ್ನ ತುರ್ತು ಪರಿಸ್ಥಿತಿ ಇತ್ತು ಅಂದ್ರೆ ಹಿಂತೆಗೆದುಕೊಳ್ಳಬಹುದು. ಆದರೆ ಖಾತೆಯ ಸಂಪೂರ್ಣ ಹಣವನ್ನು ಹುಡುಗಿಯ 21ನೇ ವಯಸ್ಸಿನಲ್ಲಿ ಮಾತ್ರ ತೆಗೆದು ಕೊಳ್ಳಲು ಮಾತ್ರ ಸಾಧ್ಯ. ಇನ್ನು ನೀವು ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಹಣ ಕಟ್ಟಬಹುದು. ಠೇವಣಿ ಕಟ್ಟದೆ ಹೋದರೆ ಪ್ರತಿ ವರ್ಷಕ್ಕೆ 50 ರೂಪಾಯಿ ದಂಡ ಪಾವತಿಸಿ ನಂತರ ಖಾತೆಗೆ ಹಣ ಕಟ್ಟೋದನ್ನ ಮುಂದುವರೆಸಬಹುದು.

ಹಾಗಾದ್ರೆ ಒಂದು ಮಗು ವಿನ ಹೆಸರಿನಲ್ಲಿ ಎಷ್ಟು ಖಾತೆ ಬೇಕಾದ್ರೂ ತೆರೆಯ ಬಹುದಾ ಅಂದ್ರೆ ಖಂಡಿತಾ ಇಲ್ಲ. ಯಾಕಂದ್ರೆ
ಸುಕನ್ಯ ಸಮೃದ್ಧಿ ಯೋಜನೆಯಡಿ ಪಾಲಕರು ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು. ಅಂದರೆ, ಪ್ರತಿ ಒಬ್ಬ ಮಗಳಿಗೆ ಒಂದು ಖಾತೆ ಯಂತೆ ಗರಿಷ್ಠ ಇಬ್ಬರು ಪುತ್ರಿಯರಿಗೆ ಖಾತೆ ತೆರೆಯಬಹುದು. ಒಂದು ವೇಳೆ ಮೊದಲ ಅಥವಾ ಎರಡನೆಯ ಹೆರಿಗೆಯಿಂದ ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಈ ಯೋಜನೆಯು ಪೋಷಕರಿಗೆ ಮೂರನೇ ಖಾತೆ ತೆರೆಯಲು ಅನುವು ಮಾಡಿಕೊಡುಲಾಗುತ್ತದೆ. ಆದರೆ ಒಂದು ಮಗುವಿನ ಹೆಸರಲ್ಲಿ ಒಂದು ಖಾತೆ ಮತ್ತು ಒಂದು ಕುಟುಂಬಕ್ಕೆ ಎರಡು ಖಾತೆ ತೆರೆಯುವ ಅವಕಾಶವಿದೆ ಅದು ಇಬ್ಬರು ಹೆಣ್ಣು ಮಕ್ಕಳಿದ್ದಾಗ ಮಾತ್ರ.

ಒಟ್ಟಿನಲ್ಲಿ ಈ ಯೋಜನೆಯಡಿ ನಿಮಗೆ ವರ್ಷಕ್ಕೆ ನೀವು ಕಟ್ಟಿದ ಹಣಕ್ಕೆ ಶೇಕಡಾ 7.6 ರ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಇಷ್ಟೇ ಅಲ್ಲ, 8 ವರ್ಷದ ನಂತರ, ಮಗಳ ಉನ್ನತ ಶಿಕ್ಷಣದ ವೆಚ್ಚದ ವಿಷಯದಲ್ಲಿ ಶೇ.50 ರಷ್ಟು ಹಣವನ್ನು ಹಿಂಪಡೆಯಬಹುದು. ಇದು ಇಂದು ಉತ್ತಮ ಅವಕಾಶ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನ ರೂಪಿಸಿದ್ದು. ಹೆಣ್ಣು ಮಗುವಿನ ಉತ್ತಮ ಹಾಗೂ ಉಜ್ವಲ ಭವಿಷ್ಯಕ್ಕೆ ಇದು ಒಳ್ಳೆಯ ವೇದಿಕೆ ಅಂದರೆ ತಪ್ಪಾಗಲಿಕ್ಕಿಲ್ಲ.. ಸ್ವಲ್ಪ ಸ್ವಲ್ಪವೇ ಕೂಡಿಟ್ಟ ಹಣ ನಿಮ್ಮ ಮಗುವಿನ ಭವಿಷ್ಯ ರೂಪಿಸುತ್ತದೆ ಅಂದ್ರೆ ಅದಕ್ಕೆ ಪ್ರಯತ್ನ ಮಾಡೋದು ಒಳ್ಳೆಯದ್ದೇ ಅಲ್ವಾ?.

ಇದನ್ನು ಓದಿ: ವಿನೋದ್ ರಾಜ್ ಹೆಂಡತಿ ಮತ್ತು ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ