ಹೆಣ್ಣು ಪ್ರತಿ ಮನೆಯ ಕಣ್ಣು. ಹೆಣ್ಣಿನ ಬದುಕಿನ ಪ್ರತಿಯೊಂದು ಕ್ಷಣವೂ ಹೆತ್ತವರಿಗೆ ಸಂತಸ ನೀಡುತ್ತದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಅವರ ಮದುವೆ ಮಾಡಲು ಹೆತ್ತ ತಂದೆ ತಾಯಿ ಬಹಳ ಕಷ್ಟ ಪಡುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಹಿಂದಿನ ಕಾಲದಲ್ಲಿ ಬಹಳ ಬೇಸರ ಪಡುತ್ತಿದ್ದರು. ಆದರೆ ಇಂದು ಹೆಣ್ಣಿನ ಜೀವನಕ್ಕೆ ಸರ್ಕಾರಗಳು ಹಲವರು ಯೋಜನೆಗಳನ್ನು ಜಾರಿಗೊಳಿಸಿದೆ. ಹೆಣ್ಣು ಮಕ್ಕಳನ್ನು ಭವಿಷ್ಯಕ್ಕೆ ಉಚಿತ ಶಿಕ್ಷಣ. ಉನ್ನತ ವ್ಯಾಸಂಗ ಮಾಡಲು ಸ್ಕಾಲರ್ಶಿಪ್ ಗಳನ್ನು ಸರ್ಕಾರ ನೀಡುತ್ತಿದೆ. ಹೆಣ್ಣು ಮಕ್ಕಳು ಹುಟ್ಟಿದ ಕ್ಷಣದಿಂದ ಅವರ ಬದುಕಿನ ಭವಿಷ್ಯಕ್ಕೆ ಪಾಲಕರು ಹಣವನ್ನು ಹೂಡಿಕೆ ಮಾಡುತ್ತಾ ಇರುತ್ತಾರೆ. ಈಗಾಗಲೇ ಸುಕನ್ಯಾ ಸಮೃದ್ಧಿ ಯೋಜನೆಗೆ ಲಕ್ಷಾಂತರ ಮಂದಿ ಹೂಡಿಕೆ ಮಾಡುತ್ತಿದ್ದಾರೆ. ಇದು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಹಳ ಉತ್ತಮ ಯೋಜನೆ ಆಗಿದೆ.
ಆದರೆ ಕೆಲವು ಸಂದರ್ಭದಲ್ಲಿ ಹಣದ ಅವಶ್ಯಕತೆ ಬಹಳ ಇರುತ್ತದೆ. ಆಗ ಹೂಡಿಕೆ ಮಾಡಿರುವ ಹಣವನ್ನು ತೆಗೆಯಬೇಕಾಗುತ್ತದೆ. ಆದರೆ ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ತೆಗೆಯಲು ಕೆಲವು conditions ಇವೆ. ಅದರ ಬಗ್ಗೆ ಮಾಹಿತಿಗಳನ್ನು ನೋಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ಈ ಕೆಳಗಿನ ಸಂದರ್ಭಗಳಲ್ಲಿ ತೆಗೆಯಬಹುದು.
- ಹೆಣ್ಣು ಮಕ್ಕಳ ಮದುವೆ:- ಹೆಣ್ಣು ಮಕ್ಕಳ ಮದುವೆ ನಿಗದಿಯಾದ ಸಮಯದಲ್ಲಿ ಹೆತ್ತವರಿಗೆ ಏಷ್ಟು ಹಣವಿದ್ದರೂ ಸಾಲದು. ಆದರಿಂದ ಹೂಡಿಕೆ ಮಾಡಿದ ಹಣವನ್ನು ತೆಗೆಯಬೇಕಾಗಿತ್ತದೆ. ಮದುವೆಯ ಮೂರು ನಾಲ್ಕು ತಿಂಗಳು ಇರುವಾಗ ಈ ಹಣವನ್ನು ಪಡೆಯಬಹುದು. ನಿಗದಿತ ಸಮಯಕ್ಕಿಂತ ಮೊದಲು ಮದುವೆಯ ಕಾರಣಕ್ಕೆ ಹಣವನ್ನು ತೆಗದರೆ ನೀವು ಪೂರ್ಣ ಹಣವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. 50 ಪರ್ಸೆಂಟ್ ಹಣ ಮಾತ್ರ ನಿಮಗೆ ಸಿಗುತ್ತದೆ.
- ವಿಧ್ಯಾಭ್ಯಾಸ :- ಈ ಯೋಜನೆಯ ಮುಖ್ಯ ಉದ್ದೇಶವೇ ಹೆಣ್ಣು ಮಕ್ಕಳ ಶಿಕ್ಷಣ. ಎಸೆಸೆಲ್ಸಿ ಮುಗಿದ ನಂತರ 18 ವರ್ಷ ಆದ ಬಳಿಕ ಈ ಯೋಜನೆಯ ಹಣವನ್ನು ಪಡೆಯಬಹುದು. ಆದರೆ ಉನ್ನತ ಶಿಕ್ಷಣದ ಬಗ್ಗೆ ನಿಖರವಾದ ಮಾಹಿತಿಯನ್ನು ದಾಖಲೆಗಳನ್ನು ನೀಡಬೇಕು. ಸಮಯದ ಮೊದಲು ಹಣವನ್ನು ತೆಗದರೆ ನೀವು ಪೂರ್ಣ ಹಣವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. 50 ಪರ್ಸೆಂಟ್ ಹಣ ಮಾತ್ರ ನಿಮಗೆ ಸಿಗುತ್ತದೆ. 18 ವರ್ಷದ ಒಳಗೆ ಈ ಯೋಜನೆಯ ಹಣ ಸಿಗುವುದಿಲ್ಲ.
- ಸಾವು ಸಂಭವಿಸಿದರೆ:- ಯಾವುದೇ ರೀತಿಯ ಖಾಯಿಲೆ ಅಥವಾ ಅಪಘಾತದಿಂದ ಹೆಣ್ಣು ಮಕ್ಕಳು ಸಾವನ್ನಪ್ಪಿದರೆ ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ಹಿಂಪಡೆಯಲು ಸಾಧ್ಯ. ಹಣವನ್ನು ಹಿಂಪಡೆಯಲು ಮರಣ ಪ್ರಮಾಣಪತ್ರವನ್ನು ನೀಡಬೇಕು. ಇಂತಹ ಸಮಯದಲ್ಲಿ ಹೂಡಿಕೆ ಮಾಡಿದ ಹಣದ ಬಡ್ಡಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಮಾಹಿತಿ:- ಈ ಯೋಜನೆಯನ್ನು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಇರುವ ಯೋಜನೆ ಆಗಿದೆ. ಮಗು ಹುಟ್ಟಿದ ಕ್ಷಣದಿಂದ 10 ವರ್ಷ ಆಗುವ ವರೆಗೆ ಈ ಯೋಜನೆಯನ್ನು ಪಡೆಯಬಹುದು. ಹೆಣ್ಣು ಮಗುವಿಗೆ 21 ವರ್ಷ ಆದ ನಂತರ ಯೋಜನೆಯ ಪೂರ್ಣ ಹಣ ಸಿಗುತ್ತದೆ. 18 ವರುಷಗಳ ನಂತರ ಅರ್ಧದಷ್ಟು ಹಣವನ್ನು ಪಡೆಯಲು ಸಾಧ್ಯವಿದೆ. 8.2 ಪರ್ಸೆಂಟ್ ಬಡ್ಡಿದರ ನೀಡುತ್ತಾರೆ. 250 ರೂಪಾಯಿಗಳಿಂದ ಒಂದು ವರೆ ಲಕ್ಷದವರೆಗೆ ಹಣ ಹೂಡಿಕೆ ಮಾಡಲು ಸಾಧ್ಯವಿದೆ.
ಇದನ್ನೂ ಓದಿ: ಮಹಿಳೆಯರಿಗೆ ಸಿಹಿ ಸುದ್ದಿ .. ಆಧಾರ್ ಕಾರ್ಡ್ ರೇಶನ್ ಕಾರ್ಡ್ ಇದ್ದರೆ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ..
ಇದನ್ನೂ ಓದಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಜಾರಿ. ಸೂರ್ಯೋದಯ ಯೋಜನೆಯ ಲಾಭಗಳು ಏನೇನು?