Swetha Changappa: ಶ್ವೇತಾ ಚಂಗಪ್ಪ ನಟಿಯಾಗಿ, ನಿರೂಪಕಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ವೀಕ್ಷಕರ ಮನ ಗೆದ್ದಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಸುಮತಿ, ಕಾದಂಬರಿ, ಸುಕನ್ಯಾ,ಅರುಂಧತಿ, ಸಂಗೀತಾ, ಹೀಗೆ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 2, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರ, ಡಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ಕಾರ್ಯಕ್ರಮಗಳಿಂದ ಅವರು ಮನೆಮಾತಾಗಿದ್ದಾರೆ. ನಿರೂಪಕಿ ಆಗಿಯೂ ಫೇಮಸ್ ಆಗಿರುವ ಶ್ವೇತಾ ಚಂಗಪ್ಪ ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್, ಜೋಡಿ ನಂಬರ್ 1, ಸೂಪರ್ ಕ್ವೀನ್, ಛೋಟಾ ಚಾಂಪಿಯನ್ ಮುಂತಾದ ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಇವ್ರು ಅನೇಕ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನೂ ನಡೆಸಿಕೊಟ್ಟಿದ್ದಾರೆ. ಅಲ್ದೇ ಕಿರುತೆರೆಗೆ ಮಾತ್ರ ಸೀಮಿತವಾಗಿರಾದ ಇವ್ರು ಸಿನಿಮಾ ಲೋಕದಲ್ಲೂ ಸಕ್ರಿಯರಾಗಿದ್ದು, ವರ್ಷಾ,ತಂಗಿಗಾಗಿ, ವೇದ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಇವ್ರು ವೇದ ಚಿತ್ರದಲ್ಲಿ ಇವ್ರು ನಿಭಾಯಿಸಿರೋ ಪಾತ್ರಕ್ಕೆ ಸಾಕಷ್ಟು ಜನಮೆಚ್ಚುಗೆ ಸಿಕ್ಕಿದೆ. ಸದಾ ಬಣ್ಣದ ಲೋಕದಲ್ಲಿ ಯಶಸ್ವಿಯಾಗಿ ಸಕ್ರಿಯವಾಗಿರುವ ಶ್ವೇತಾ ಚಂಗಪ್ಪ ಇಂದು ಬಹಳ ಭಾವುಕರಾಗಿದ್ದು, ತಮ್ಮ ನೋವನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ
ಇನ್ಸ್ಟಾ ಖಾತೆಯಲ್ಲಿ ಸುದೀರ್ಘವಾಗಿ ಸಹೋದರನ ಬಗ್ಗೆ ಬರೆದುಕೊಂಡ ನಿರೂಪಕಿ
ಹೌದು ಶ್ವೇತಾ ಚಂಗಪ್ಪ(Swetha Changappa) ಅವ್ರ ಸಹೋದರ ಗಿರಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ದುಃಖವನ್ನ ಸಹಿಸಿಕೊಳ್ಳಲಾಗದ ಶ್ವೇತಾ ಚಂಗಪ್ಪ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಣ್ಣನ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ನನ್ನ ಪ್ರೀತಿಯ ಸಹೋದರ ಗಿರಿ, ಸಾಮಾನ್ಯವಾಗಿ ನಾನು ತುಂಬಾ ಎಕ್ಸ್‌ಪ್ರೆಸ್ ಮಾಡುವ ವ್ಯಕ್ತಿ ಆದರೆ ಮೊದಲ ಸಲ ನನ್ನ ಬಳಿ ಪದಗಳಿಲ್ಲ. ಯಾರಾದರೂ ಬಂದು ಇದು ಪ್ರ್ಯಾಂಕ್ ಅಂತ ಒಮ್ಮೆ ಹೇಳಬೇಕು, ನಿದ್ರೆಯಿಂದ ನನ್ನನ್ನು ಎಬ್ಬಿಸಿ ಇದೊಂದು ಕೆಟ್ಟ ಕನಸು ಅಂತ ಹೇಳಬೇಕು, ಅಥವಾ ಆಕ್ಷನ್ ಕಟ್ ಹೇಳಿ, ಸೀನ್ ಕಟ್ ಹೇಳಿ, ಏನ್ ಗಿರಿ ನೀನು ಇಷ್ಟೊಂದು ಸೂಪರ್ ಅಗಿ ಆಕ್ಟಿಂಗ್ ಮಾಡಿದ್ರಿ ಅಂತ ನಾನು ರೇಗಿಸಬೇಕು.
ನ್ಯಾಚುರಲ್ ಅಗಿ ಆಕ್ಟ್ ಮಾಡಿದ್ರಾ ಅಂತ ಹೇಳಬೇಕು. ಸತ್ಯ ಹೇಳಬೇಕು ಅಂದ್ರೆ ನಡೆದಿರುವ ಘಟನೆಯನ್ನು ಮರೆಯುವುದಕ್ಕೆ ಆಗುತ್ತಿಲ್ಲ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಇದಾಗಿದೆ. ನಾವು ಮನೆಗೆ ಹೋದ ತಕ್ಷಣ ಜಿಯಾನ್ ಗಿರಿ ಮಾಮ ಎಲ್ಲಿ, ಅವರಿಗೆ ಏನಾಗಿತ್ತು ಅಂತ ಕೇಳ್ದ, ಗಿರಿ ಮಾಮ ದೇವರ ಬಳಿ ಹೋಗಿದ್ದಾರೆ ಅಂದ್ರೆ ಯಾವಾಗ ಬರ್ತಾರೆ ಗಿರಿ ಮಾಮ, ಎಷ್ಟೊತ್ತು ಆಗಬಹುದು ಅಂತ ಮತ್ತೆ ಪ್ರಶ್ನೆ ಮಾಡಿದ ಆಗ ನಾನು ಗಿರಿ ಮಾಮ ಯಾವತ್ತೂ ಬರುವುದಿಲ್ಲ ಅಂದ್ರೆ ತಕ್ಷಣವೇ ಜಿಯಾನ್ ಹಾಸಿಗೆ ಮೇಲೆ ಮಲಗಿಕೊಂಡು ಗಿರಿ ಮಾಮ ಬರುವುದಿಲ್ಲ ಅಂದ್ರೆ ಅವರು ನನ್ನ ಫ್ರೆಂಡ್ ಅಲ್ಲ ನನ್ನನ್ನು ಬಿಟ್ಟು ಹೋಗಿದ್ದಾರೆ ಅಂತ ಅಳುವುದಕ್ಕೆ ಶುರು ಮಾಡಿದ. ಇದು ಗಿರಿ ಜೊತೆ ಶುದ್ಧ ಸಂಬಂಧ ಹೊಂದಿರುವ ಪುಟ್ಟ ಹುಡುಗನ ಕಥೆ.
ಗೆಳೆಯನ್ನ ಫೋಟೋ ಮತ್ತು ವಿಡಿಯೋ ನೋಡುತ್ತಾ ಕಣ್ಣೀರಿಟ್ಟ ಶ್ವೇತಾ ಚಂಗಪ್ಪ ಪತಿ
ಇನ್ನು ನನ್ನ ಪತಿ ಕಿರಣ್ ನಿಮ್ಮ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ನೋಡಿಕೊಂಡು ಅಳುತ್ತಿದ್ದಾರೆ. ಈ ಘಟನೆ ನಡೆದಿದೆ ಅಂತ ಅವ್ರಿಗೆ ನಂಬಲಾಗುತ್ತಿಲ್ಲ. ಕಿರಣ್‌ಗಿದ್ದ ಬೆಸ್ಟ್ ಫ್ರೆಂಡ್, ಬೆಸ್ಟ್ Brother ಅಂದ್ರೆ ನೀವೇ, ನಿಜ ಹೇಳಬೇಕು ಅಂದ್ರೆ ಮೊದಲ ಸಲ ಕಿರಣ್ ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ ಅವರನ್ನು ಬಿಟ್ಟು ನೀವು ಒಬ್ಬರೆ ಹೋಗಿರುವುದಕ್ಕೆ. bade achhe lagte Hain ಹಾಡನ್ನು ಮತ್ತೊಮ್ಮೆ ನಿಮ್ಮಿಂದ ಕೇಳಬೇಕು ಕಾಯುತ್ತಿದ್ದಾರೆ. ಈ 10-11 ವರ್ಷಗಳ ಸ್ನೇಹದಲ್ಲಿ ನೀವು ತುಂಬಾ ಪ್ರಾಮಾಣಿಕ, ಲಾಯಲ್, ಫನ್ ಹಾಗೂ ಖುಷಿ ವ್ಯಕ್ತಿಯಾಗಿದ್ದು ನಮ್ಮನ್ನು ಹಾಗೆ ನೋಡಿಕೊಂಡಿದ್ದೀರಿ. ಒಂದು ನೆಗೆಟಿವ್ ವಿಚಾರ ಇಲ್ಲ. ನನ್ನ ಜೀವನದ ಬೆಸ್ಟ್ ಚಾಪ್ಟರ್ ನೀವು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿನಿ.
ನನ್ನ ಸ್ನೇಹಿತನಾಗಿ ಸಹೋದರನಾಗಿ ನಮ್ಮ ಹಿತೈಷಿಯಾಗಿ ನನ್ನ ಕುಟುಂಬವಾಗಿ ಅದಕ್ಕೂ ಮೀರಿದ ವ್ಯಕ್ತಿಯಾಗಿದ್ದವರು ನೀವು, ನಿಮ್ಮನ್ನು ಯಾರೂ ರೀ-ಪ್ಲೇಸ್ ಮಾಡೋಕಾಗಲ್ಲ, ನೀವಿಲ್ಲದೆ ಫ್ಯಾಬ್ 4 ಕಂಪ್ಲೀಟ್ ಆಗುವುದಿಲ್ಲ. ನನ್ನ ಜೀವನಕ್ಕೆ ಎಂಟ್ರಿ ಕೊಟ್ಟಿದಕ್ಕೆ ಥ್ಯಾಂಕ್ಸ್ ಗಿರಿ. ಒಳ್ಳೊಳ್ಳೆ ಕ್ಷಣಗಳನ್ನು ನೆನಪಾಗಿ ಕೊಟ್ಟಿದ್ದೀರಿ. ನೀವು ನಮ್ಮ ಜೊತೆ ಸದಾ ಜೊತೆಗಿರುತ್ತೀರಿ. ಹನಿ ಮತ್ತು ದಿವ್ಯಾ ಸುರಕ್ಷಿತವಾಗಿರುತ್ತಾರೆ ತಲೆ ಕೆಡಿಸಿಕೊಳ್ಳಬೇಡಿ ಗಿರಿ. ನಾವು ಅವರ ಜೊತೆ ಸದಾ ಇರುತ್ತೇವೆ ನಾವು ಒಂದು ಕುಟುಂಬ. ಯಾರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಷ್ಟು ಮಿಸ್ ಮಾಡಿಕೊಳ್ಳುತ್ತೀನಿ ಗಿರಿ. ಒಂದೇ ಒಂದು ಸಲ ನಮಗೆ ಪ್ರತಿಕ್ರಿಯೆ ಕೊಡು ಗಿರಿ ದಯವಿಟ್ಟು ಮರುಳಿ AAP BADE ACHHE LAGTE HAIN ಹಾಡನ್ನು ಒಮ್ಮೆ ಹಾಡಿ ಅಂತ ಬಹಳ ಭಾವುಕರಾಗಿ ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಸ್ನೇಹ-ಕಂಠಿ ಮದುವೆ ಮಾಡಿಸಿದ ಬಂಗಾರಮ್ಮ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram