ಈ ತಾಲ್ಲೂಕಿನ ಜನರಿಗೆ ಉಚಿತ ಅಕ್ಕಿ ಹಣ ಸಿಗೋದಿಲ್ಲ; ಈ ತಿಂಗಳಿಂದಲೇ ಇದು ಜಾರಿ!ಕಾರಣ ಏನ್ ಗೊತ್ತಾ?
ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆ 5 ಗ್ಯಾರಂಟಿಗಳಲ್ಲಿ, ಅನ್ನಭಾಗ್ಯ ಯೋಜನೆ ಕೂಡ ಒಂದು. ಹೌದು ಚುನಾವಣೆಗೂ ಮುನ್ನವೇ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಇದೀಗ ಹೇಳಿದಂತೆ 10 ಕೆಜಿ ಕೊಡುವುದಕ್ಕೆ ಸಾಧ್ಯವಾಗದೆ, ಈಗಾಗಲೇ ಕೇಂದ್ರದಿಂದ ಪೂರೈಕೆ ಆಗುವ 5 ಕೆಜಿ ಅಕ್ಕಿ ಹಾಗು ಉಳಿದ ಭರವಸೆಯ 5 ಕೆಜಿ ಅಕ್ಕಿಗೆ ಹಣ ಕೊಡೋದಾಗಿ ಹೇಳಿ ಈಗ ಹಣ…