ದ್ವಿತೀಯ PUC ಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದ್ಯ ಟೆನ್ಶನ್ ಬಿಡಿ. ಫೇಲ್ ಆಗಿದ್ರು ಭಯಪಡಬೇಡಿ.3ವಿಧಾನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡ್ರೆ ಸಾಕು, ನೋ ವರಿ!
ಕರ್ನಾಟಕ ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಹೌದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ತನ್ನ ಅಧಿಕೃತ ವೆಬ್ಸೈಟ್ www.karresults.nic.in ನಲ್ಲಿ ಬಿಡುಗಡೆ ಮಾಡಿದೆ. ಈಗಾಗಿ ಹಲವಾರು ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡಿ ಬೇಜಾರಿನ ಜೊತೆ ಭಯ ಕೂಡ ಶುರುವಾಗಿರುತ್ತೆ. ಯಾಕಂದ್ರೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಅನ್ನೋದು ಬಂದಿರಲ್ಲ. ಅತಿಹೆಚ್ಚು ಅಂಕ ಪಡೆದು ಖುಷಿ ಪಡೋರು ಒಂದು ಕಡೆ ಆದ್ರೆ ಅಯ್ಯೋ ನಂಗೆ ಕಡಿಮೆ ಮಾರ್ಕ್ಸ್…