ರಾಜ್ಯ ಸರಕಾರವು ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಎರಡು ಸಿಹಿ ಸುದ್ದಿಯನ್ನು ನೀಡಿದೆ.
ಅನ್ನಭಾಗ್ಯ ಯೋಜನೆಯಲ್ಲಿ(Anna bhagya Yojana) ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ನೀಡುವ 5 ಕೆ.ಜಿ ಅಕ್ಕಿಯ ಜೊತೆಗೆ ಕುಟುಂಬದ ಯಜಮಾನನ ಖಾತೆಗೆ 5 ಕೆ.ಜಿ ಯ ಹಣವನ್ನು ನೀಡುತ್ತಿದೆ. ರೇಷನ್ ಅಕ್ಕಿಯನ್ನು ಪಡೆಯಬೇಕು ಎಂದರೆ ರೇಷನ್ ಅಂಗಡಿಗೆ ಹೋಗಿ ಕ್ಯೂ ನಲ್ಲಿ ನಿಂತು ನಮ್ಮ ಸರತಿ ಬಂದಾಗ ರೇಷನ್ ಕಾರ್ಡ್ ನೀಡಿ ಅಕ್ಕಿಯನ್ನು ತೆಗೆದುಕೊಂಡು ಬರಬೇಕು. ರೇಷನ್ ಅಂಗಡಿ ಗೆ ಹೋದರೆ ಒಂದು ದಿನ ಅದಕ್ಕೆ ಮೀಸಲು ಇಡಬೇಕು. ಒಂದು ಎರಡು ತಾಸುಗಳ ಕಾಲ ಕಾಯುವುದು…