ಗಣೇಶ ಹಬ್ಬವನ್ನ ಯಾವ ಸಮಯದಲ್ಲಿ ಆಚರಿಸಬೇಕು; ಪಾಲಿಸಬೇಕಾದ ನಿಯಮಗಳೇನು? ಯಾವ ತಪ್ಪುಗಳನ್ನ ಮಾಡಬಾರದು?
ಯುವಕರಲ್ಲಿ, ಪುಟ್ಟ ಪುಟ್ಟ ಮಕ್ಕಳಲ್ಲೂ ಉತ್ಸಾಹದ ಚಿಲುಮೆ ಹುಟ್ಟಿಕೊಳ್ಳುವ ಹಬ್ಬ ಅಂದ್ರೆ ಗಣೇಶ ಹಬ್ಬ. ಗಣಪತಿ ಬಪ್ಪಾ ಮೊರಿಯಾ ಅಂತ ಜೈಕಾರಗಳನ್ನ ಕೂಗುತ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಣೇಶನಿಗೆ ಭರ್ಜರಿ ಎಂಟ್ರಿ ಕೊಟ್ಟು, ಇಷ್ಟಾನುಸಾರ ಒಂದಷ್ಟು ದಿನಗಳ ಕಾಲ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಿ ಊರಿನವರೆಲ್ಲ ಒಗ್ಗಟ್ಟಾಗಿ ಕೂಡಿ ಹಬ್ಬವನ್ನ ಮಾಡ್ತಾರೆ. ಇನ್ನು ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು…