ದೈಹಿಕ ಅಂಗ ವೈಕಲ್ಯ ಹೊಂದಿರೋರಿಗೆ ವಿವಿಧ ಸೌಲಭ್ಯ; ದ್ವಿಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ
ಆಧುನಿಕ ಯುಗದಲ್ಲಿ ವಿಕಲಚೇತನರು ಯಾರಿಗೂ ಯಾವುದಕ್ಕೂ ಕಮ್ಮಿಯಿಲ್ಲ. ಎಲ್ಲವನ್ನು ಮೀರಿಸುವಂತಹ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಅಲ್ದೇ ವಿಕಲಚೇತನರಿಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ಇದ್ದು, ಅವರುಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು, ಅದರ ಜೊತೆಗೆ ವಿಕಲಚೇತನರಿಗಾಗಿ ಸರಕಾರದಿಂದ ಅನೇಕ ಯೋಜನೆಗಳು ಜಾರಿಯಾಗಿವೆ. ಹೀಗಾಗಿ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು. ಯಾಕಂದ್ರೆ ವಿಕಲಚೇತನರಿಗೆ ಸಂಬಂಧಿಸಿದ ಯೋಜನೆಗಳ ಸೇವೆಗಳು, ವಿಕಲಚೇತನರ ವಿದ್ಯಾರ್ಥಿವೇತನ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ವಿವಾಹ ಪ್ರೋತ್ಸಾಹ ಧನ ಯೋಜನೆ, ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ವಿಶೇಷ…