ನಿರುದ್ಯೋಗಿ ಯುವಕ, ಯುವತಿಯರಿಗೆ ಸರ್ಕಾರದಿಂದ ರಾಜ್ಯ ಮಟ್ಟದ ಉದ್ಯೋಗ ಮೇಳದ ನೋಂದಣಿ ಕಾರ್ಯ ನಡೆಯುತ್ತಿದೆ. ಈಗಲೇ ರಿಜಿಸ್ಟರ್ ಆಗಿ.
ಈಗಾಗಲೇ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಸಿಗುವವರೆಗೆ ಸಹಾಯ ಧನ ನೀಡಲು ಯುವ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಜೊತೆಗೆ ಈಗ ಎಸೆಸೆಲ್ಸಿ, ಪಿಯುಸಿ , ಡಿಗ್ರಿ, ಡಿಪ್ಲೊಮಾ, ಐಟಿಐ ಪೂರ್ಣಗೊಳಿಸಿ ಉದ್ಯೋಗ ಅರಸುತ್ತಿರುವ ಯುವ ಯುವತಿಯರಿಗೆ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳ ನಡೆಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಯುವ ಸಮೃದ್ಧಿ ಸಮ್ಮೇಳನ ನಡೆಯಲಿದೆ. ಉದ್ಯೋಗ ಮೇಳ ನಡೆಸಲು 6 ಸಚಿವರ ತಂಡ ರಚನೆಯಾಗಿದೆ: ಇದು ರಾಜ್ಯ ಮಟ್ಟದ ಉದ್ಯೋಗ ಮೇಳ…