HSRP ನಂಬರ್ ಪ್ಲೇಟ್ ಅಳವಡಿಸಲು ದಿನಾಂಕ ನಿಗಧಿ; ಫೆಬ್ರವರಿ 17 ಕೊನೆಯ ದಿನ? ಮಾಡಬೇಕಿರೋದು ಏನ್ ಗೊತ್ತಾ
HSRP Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ರಾಮಾಯಣ ಬಗೆಹರಿಯೋ ಲಕ್ಷಣಗಳೇ ಕಾಣ್ತಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಶುಕ್ರವಾರ ಕೊನೆಯ ದಿನ ಅಂತಾ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಇದೀಗ ಟೈಂ ಕೊಟ್ಟಿದೆ. ಆದರೆ, ಗೊಂದಲಗಳು ಮಾತ್ರ ಇನ್ನೂ ಮುಂದುವರೆದಿವೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ಜನರೇನೋ ರೆಡಿ ಇದ್ದಾರೆ. ಆದರೆ, ಈ ಪ್ರಕ್ರಿಯೆ ಜನರಿಗೆ ದೊಡ್ಡ ತಲೆ ನೋವಾಗಿದೆ. ಸರ್ಕಾರವೇನೋ…