ಎರಡೆರಡು ಪ್ಯಾನ್ ಕಾರ್ಡ್ ಹೊಂದಿದ್ದರೆ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ?
ಪ್ಯಾನ್ ಕಾರ್ಡ್ ಎಂಬುದು ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಗೆ ನೀಡಲಾದ ಹತ್ತು ಅಕ್ಷರಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯರ್ ಆಗಿದೆ. ಇದು ಭಾರತದಲ್ಲಿ ಹಣಕಾಸಿನ ವಹಿವಾಟುಗಳು ಮತ್ತು ಸರಕಾರದ ಯೋಜನೆಯಲು ಅಥವಾ ಗುರುತಿನ ಚೀಟಿ ಅಂತಹ ಪ್ರಮುಖ ದಾಖಲೆಯಾಗಿ ಪ್ಯಾನ್ ಕಾರ್ಡ್ ಬಳಕೆ ಆಗುತ್ತದೆ. ಹೆಚ್ಚಿನ ಆದಾಯವನ್ನು ಹೊಂದಿದ್ದು ತೆರಿಗೆಗಳನ್ನು ಪಾವತಿಸುವ ವ್ಯಕ್ತಿಗಳು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು. ಪ್ಯಾನ್ ಕಾರ್ಡ್ ಬಳಕೆದಾರರು ತೆರಿಗೆ ವಿನಾಯಿತಿ ಪಡೆಯಲು ಸಾಧ್ಯ. ಒಮ್ಮೆಲೆ ಹೆಚ್ಚಿನ ಹಣ ವರ್ಗಾವಣೆಗೆ…