WhatsApp UPI ಮೂಲಕ ಭಾರತೀಯರು ವಿದೇಶಗಳಲ್ಲಿ ಹಣ ಪಾವತಿಸುವ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ.
ಈಗಾಗಲೇ ವಾಟ್ಸಾಪ್ ನಲ್ಲಿ ನಾವು ನಮ್ಮ ಸ್ನೇಹಿತರಿಗೆ ಅಥವಾ QR code ಬಳಸಿ ಹಣ ಪಾವತಿ ಮಾಡಲು ಸಾಧ್ಯವಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯವಾಗಿ ಹಣ ಪಾವತಿಸುವ ಸೌಲಭ್ಯ ಜಾರಿಯಾಗಲಿದೆ. 2020 ರಲ್ಲಿ ಹಣ ಪಾವತಿ ಮಾಡುವ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಿತು. ಈ ವ್ಯವಸ್ಥೆಯ ಮುಂದುವರೆದ ಭಾಗವಾಗಿ ಈ ವಿದೇಶಿ ವಿನಿಯಮ ಫೀಚರ್ಸ್ ಅನ್ನು ಜಾರಿ ಗೊಳಿಸಲಿದೆ. ನೂತನ ವ್ಯವಸ್ಥೆಯ ವಿಶೇಷತೆಗಳು:- ಈ ವೈಶಿಷ್ಟ್ಯವು ‘ಇಂಟರ್ನ್ಯಾಷನಲ್ ಪೇಮೆಂಟ್ಸ್’ ಎಂದು ಕರೆಯಲ್ಪಡುತ್ತದೆ ಮತ್ತು ಭಾರತೀಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬಳಕೆದಾರರಿಗೆ…